Viral Video: ಕೆ.ಎಲ್-19 ಗಾಡಿ ಸೈಡಿಗೆ ಹಾಕಿ, ಹೇ ಹುಡುಗ ಏನೋ, ಯುವಕನ ತರ್ಲೆ ನೋಡಿ

ಕಾರ್​​ನಲ್ಲಿ ಕುಳಿತಿದ್ದ ಯುವಕನೊಬ್ಬ ಪೋಲಿಸರಂತೆ ಮೈಕ್​​ನಲ್ಲಿ ಅನೌನ್ಸ್ಮೆಂಟ್ ಮಾಡುತ್ತಾ ಮುಂದುಗಡೆ ಇದ್ದ ಲಾರಿಯನ್ನು ಸೈಡ್ ಹಾಕುವಂತೆ ಲಾರಿ ಚಾಲಕನಿಗೆ ಹೇಳುತ್ತಾನೆ. ಈ ತಮಾಷೆಯ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

Viral Video: ಕೆ.ಎಲ್-19 ಗಾಡಿ ಸೈಡಿಗೆ ಹಾಕಿ, ಹೇ ಹುಡುಗ ಏನೋ, ಯುವಕನ ತರ್ಲೆ ನೋಡಿ
ವೈರಲ್​​ ವೀಡಿಯೊ
Edited By:

Updated on: Jun 07, 2023 | 5:52 PM

ದೈನಂದಿನ ಕೆಲಸದ ಒತ್ತಡಗಳಿಂದ ಸ್ವಲ್ಪ ಸುಧಾರಿಸಿಕೊಳ್ಳಲು ಹೆಚ್ಚಿನ ಜನರು ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವೀಡಿಯೋಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಕಾಮಿಡಿ ಆಧಾರಿತ ವೀಡಿಯೋಗಳು ಹೆಚ್ಚು ಮನರಂಜನೆಯನ್ನು ನೀಡುವುದರ ಜೊತೆಗೆ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಹೆಚ್ಚಿನವರು ಕಾಮಿಡಿ ವೀಡಿಯೋಗಳನ್ನು ನೋಡುತ್ತಾ, ಮನಸಾರೆ ನಗುತ್ತಾ ಒತ್ತಡವನ್ನು ತಲೆಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿರುತ್ತಾರೆ. ಅದೆಷ್ಟೋ ತಮಾಷೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದಿನಂಪ್ರತಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ತಮಾಷೆಯ ವೀಡಿಯೋವೊಂದು ಇನ್ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದ್ದು, ಕಾರ್​​​ನಲ್ಲಿ ಕುಳಿತಿದ್ದ ಯುವಕನೊಬ್ಬ ಪೋಲಿಸರಂತೆ ಮೈಕ್ ಅನೌನ್ಸ್ಮೆಂಟ್ ಮಾಡುವ ಮೂಲಕ ಮುಂದುಗಡೆ ಇರುವ ಘನ ವಾಹನವನ್ನು ಸೈಡ್ ಹಾಕುವಂತೆ ಆ ವಾಹನ ಚಾಲಕನಿಗೆ ಹೇಳುತ್ತಾನೆ. ಈ ಯುವಕನ ತರ್ಲೆ ಕೆಲಸಕ್ಕೆ ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇರ್ಜಾನ್ ಮಂಗಳೂರು ಎಂಬ ಇನ್ಸ್ಟಾಗ್ರಾಮ್ ಪೇಜ್​​​ನಲ್ಲಿ ಈ ತಮಾಷೆಯ ವೀಡಿಯೋವನ್ನು ಹರಿಬಿಡಲಾಗಿದ್ದು, ವೈರಲ್ ಆಗಿರುವ ಈ ವೀಡಿಯೋದಲ್ಲಿ ಕಾರಿನಲ್ಲಿ ಕುಳಿತಿದ್ದ ಯುವಕನೊಬ್ಬ ಪೋಲಿಸರಂತೆ ಮೈಕ್ ಅನೌನ್ಸ್ಮೆಂಟ್ ಮಾಡುತ್ತಾ ರೋಡ್ ಮುಂದೆ ಇದ್ದ ಲಾರಿಯನ್ನು ಸೈಡ್ ಹಾಕುವಂತೆ ಕೇಳುವುದನ್ನು ಕಾಣಬಹುದು.

ಕಾರಿನಲ್ಲಿ ಒಂದಷ್ಟು ತರ್ಲೆ ಯುವಕರು ಕುಳಿತಿದ್ದರು. ಅದರಲ್ಲೊಬ್ಬ ಯುವಕ ಪೋಲಿಸರಂತೆ ಮೈಕ್​​​ನಲ್ಲಿ ಅನೌನ್ಸ್ಮೆಂಟ್ ಮಾಡುತ್ತಾ, ಅವರ ಕಾರಿನ ಮುಂದೆ ಇದ್ದ ಲಾರಿ ಡ್ರೈವರ್​​​ಗೆ ಗಾಡಿ ಸೈಡ್ ಹಾಕಿ ಎಂದು ಹೇಳುತ್ತಾನೆ. ಕೆ.ಎಲ್-19 ಗಾಡಿ ಸೈಡ್ ಹಾಕಿ. ಹೇ ಹುಡುಗ ಏನೋ ಮಣ್ಣನ್ನೆಲ್ಲಾ ಕೆಳಗೆ ಹಾಕಿಕೊಂಡು ಹೋಗುತ್ತಿದ್ದೀಯಾ, ಕಾರಿನ ಒಳಗೆ ಧೂಳು ಬರುತ್ತಿದೆ ಗಾಡಿ ಸೈಡ್ ಹಾಕಿ ಎಂದು ತಮಾಷೆಗೆ ನಗುತ್ತಾ ಅನೌನ್ಸ್ಮೆಂಟ್ ಮಾಡುತ್ತಿರುತ್ತಾನೆ. ಆ ಕಾರಿನಲ್ಲಿ ಕುಳಿತಿದ್ದ ಇನ್ನುಳಿದ ಯುವಕರ ಗುಂಪು ಈ ಹುಡುಗನ ತರ್ಲೆ ಮಾತಿಗೆ ಬಿದ್ದು, ಬಿದ್ದು ನಗುತ್ತಿರುತ್ತಾರೆ.

ಇದನ್ನೂ ಓದಿ:Viral Video: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡಾನ್ಸ್ ಮಾಡಿದ ಸಿಖ್ ದಂಪತಿ

ಇನ್ಸ್ಟಾಗ್ರಾಮ್​​​​ನಲ್ಲಿ ವೈರಲ್ ಆಗಿರುವ ಈ ವೀಡಿಯೋ 647 ಸಾವಿರ ವೀಕ್ಷಣೆಗಳನ್ನು ಹಾಗೂ 50.7 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್​​ಗಳೂ ಈ ವೀಡಿಯೋಗೆ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಲಾರಿ ಡ್ರೈವರ್ ಗಾಡಿ ಸೈಡ್ ಹಾಕಿ ಬಂದರೆ ಮೈಕ್ ಸಮೇತ ನಿಮ್ಮನ್ನೂ ಮಣ್ಣೊಳಗೆ ಮಲಗಿಸಿ ಬಿಡಬಹುದು’ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ವೀಡಿಯೋ ಬಹಳ ಚೆನ್ನಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ನಗುವ ಇಮೊಜಿಯನ್ನು ಕಮೆಂಟ್ಸ್ ಬಾಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ