ರೈಲ್ವೆ ಹಳಿಯನ್ನು ದಾಟುವಾಗ ಎಷ್ಟು ಎಚ್ಚರಿಕೆ ವಹಿಸಿದ್ರೂ ಕಮ್ಮೀನೆ, ಯಾಕೆಂದ್ರೆ ಕೆಲವೊಮ್ಮೆ ಅಲ್ಲೆಲ್ಲೋ ದೂರದಲ್ಲಿ ರೈಲು ಬರ್ತಿರೋದು ಅಲ್ವಾ, ಧಾರಾಳವಾಗಿ ಈಗ ರೈಲ್ವೆ ಹಳಿ ದಾಟಬಹುದು ಅಂತ ಭಾವಿಸಿ ರೈಲ್ವೆ ಹಳಿ ದಾಟುವಷ್ಟರಲ್ಲಿ, ರೈಲು ಅವರ ಮುಂದೆ ಪಾಸ್ ಆಗಿರುತ್ತೆ, ಇದೇ ರೀತಿ ತರಾತುರಿಯಲ್ಲಿ ರೈಲು ವೇಗವಾಗಿ ಬರುತ್ತಿರುವ ವೇಳೆಯಲ್ಲಿ ರೈಲ್ವೇ ಹಳಿ ದಾಟಲು ಹೋಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ವಂದೇ ಭಾರತ್ ಟ್ರೈನ್ ಬರುತ್ತಿರುವ ವೇಳೆಯಲ್ಲಿ ರಸ್ತೆ ದಾಟಲು ಹೋಗಿ, ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ನಡೆದಿರುವುದು, ಕೇರಳದ ತಿರೂರ್ ಎಂಬಲ್ಲಿ. ತಿರೂರು ರೈಲ್ವೆ ಸ್ಟೇಷನ್ನಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ್ರು ಸರಿಸುಮಾರು ಸಂಜೆ 5 ಗಂಟೆಯ ವೇಳೆಯಲ್ಲಿ, ರೈಲು ಬರುವಂತಹ ಸಂದರ್ಭದಲ್ಲಿ ರೈಲ್ವೆ ಹಳಿ ದಾಟುವಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪ್ರವೀಶ್ ಶೊರನೂರ್ (@praveeshshoranurphotography) ಎಂಬವರು ಈ ವಿಡಿಯೋನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಂದೇ ಭಾರತ್ ಟ್ರೈನ್ ಬರುತ್ತಿರುವ ವೇಳೆಯಲ್ಲಿ, ರೈಲ್ವೆ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬರು ಕೂದಲೆಳೆಯುವ ಅಂತರದಲ್ಲಿ ಅಪಘಾತದಿಂದ ಪಾರಾಗುತ್ತಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ:
ವಿಡಿಯೋದಲ್ಲಿ ತಿರೂರ್ ರೈಲ್ವೆ ಫ್ಲಾಟ್ಫಾರ್ಮ್ಗೆ ವಂದೇ ಭಾರತ್ ಟ್ರೈನ್ ವೇಗವಾಗಿ ಆಗಮಿಸುತ್ತಿರುತ್ತೆ, ಆ ಸಂದರ್ಭದಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ತರಾತುರಿಯಲ್ಲಿ ರೈಲ್ವೆ ಹಳಿಯನ್ನು ದಾಟಿದ್ದಾರೆ, ದೇವರ ದಯೆಯಿಂದ ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಆ ವ್ಯಕ್ತಿ ಪಾರಾಗುವ ದೃಶ್ಯವನನು ಕಾಣಬಹುದು.
ಇದನ್ನೂ ಓದಿ: ಕೆಲಸಗಾರರು ಬೇಕಾಗಿದ್ದಾರೆ; ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಭರ್ಜರಿ ಆಫರ್ ನೀಡಿದ ಕೂಡಗಿನಲ್ಲಿ ಕಾಫಿ ಬೆಳೆಗಾರ
ನವೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಅನೇಕರು ಆ ವ್ಯಕ್ತಿಗೆ ಅಷ್ಟು ಅರ್ಜೆಂಟ್ ಆಗಿ ರೈಲ್ವೆ ಹಳಿ ದಾಟುವಂತಹದ್ದು ಏನಿದೆ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ