
ಈಗಿನ ಕಾಲದಲ್ಲಿ ಓದು, ಉದ್ಯೋಗಕ್ಕಾಗಿ ದೇಶ ತೊರೆದು ವಿದೇಶಕ್ಕೆ ತೆರಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಹೋದವರು ವಿದೇಶದ ಜೀವನ ಶೈಲಿ ಹಾಗೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟಿರುತ್ತಾರೆ. ಹೀಗಾಗಿ ಕೆಲವರು ಅಲ್ಲೇ ನೆಲೆಸುವ ನಿರ್ಧಾರ ಮಾಡುತ್ತಾರೆ. ಇದೀಗ ಅಮೆರಿಕದ ವ್ಯಕ್ತಿಗೂ ಹೀಗೆಯೇ ಆಗಿದೆ. ಕಳೆದ ಒಂದೂವರೆ ವರ್ಷದಿಂದ ರೊಮೇನಿಯಾದಲ್ಲಿ (Romania) ನೆಲೆಸಿರುವ ಆಡಮ್ (Adam) ಎನ್ನುವ ವ್ಯಕ್ತಿಗೆ ತನ್ನ ಹುಟ್ಟೂರು ಅಮೆರಿಕಕ್ಕೆ ಹೋಗಲು ಇಷ್ಟವಿಲ್ಲವಂತೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ತನ್ನ ಈ ನಿರ್ಧಾರಕ್ಕೆ ಮುಖ್ಯ ಕಾರಣವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ.
@travelking ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ರೊಮೇನಿಯಾದಲ್ಲಿ ವಾಸವಿರುವ ಅಮೆರಿಕ ಮೂಲದ ವ್ಯಕ್ತಿ ಆಡಮ್ ಅಮೆರಿಕಕ್ಕೆ ಮರಳುವ ಯಾವುದೇ ಯೋಜನೆ ಇಲ್ಲದಿರುವ ಬಗೆಗಿನ ಕಾರಣವನ್ನು ವಿವರಿಸಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನಾನು ಅಮೆರಿಕವನ್ನು ದ್ವೇಷಿಸಿದ್ದರಿಂದ ನನ್ನ ದೇಶವನ್ನು ಬಿಡಲಿಲ್ಲ. ನಾನು ಅನ್ವೇಷಿಸಲು ಬಯಸಿದ್ದೆ. ನಾನು ವಿದೇಶಕ್ಕೆ ತೆರಳಿದ ಬಳಿಕ ಅಮೆರಿಕ ಅತ್ಯುತ್ತಮ ಆಯ್ಕೆಯಲ್ಲ ಎಂದು ಕಂಡುಕೊಂಡೆ. ಇತರ ಹಲವು ದೇಶಗಳಲ್ಲಿ ಜೀವನವು ಉತ್ತಮವಾಗಲು ಲೆಕ್ಕವಿಲ್ಲದಷ್ಟು ಕಾರಣಗಳಿವೆ. ನೀವು ಬೇರೆಡೆ ತೆರಳಲು ಬಯಸಿದರೆ, ನೀವು ಸರಿಯಾಗಿ ಯೋಚಿಸುತ್ತಿದ್ದೀರಿ. ಹೆಚ್ಚಿನದಕ್ಕಾಗಿ ಅನುಸರಿಸಿ ಎಂದು ಬರೆದುಕೊಂಡಿದ್ದಾರೆ.
ತಾವು ಅಮೆರಿಕವನ್ನು ದ್ವೇಷಿಸಿದ್ದರಿಂದ ರೊಮೇನಿಯಾವನ್ನು ಬಿಟ್ಟು ಹೋಗುತ್ತಿಲ್ಲ ಎಂದು ಪ್ರಾರಂಭದಲ್ಲಿ ಹೇಳುತ್ತಿರುವುದನ್ನು ಕಾಣಬಹುದು. ಆ ಬಳಿಕ ನನಗೆ ಪ್ರಪಂಚದ ಇತರ ಭಾಗಗಳಲ್ಲಿ ಜನರು ಹೇಗೆ ಬದುಕುತ್ತಾರೆ ಎಂಬ ಕುತೂಹಲವಿತ್ತು. ಸರಿಸುಮಾರು 18 ತಿಂಗಳಿಂದ ಅಮೆರಿಕದಿಂದ ಹೊರಗೆ ಕಳೆದ ಬಳಿಕ ನಡೆಯಲುಸಾಧ್ಯವಾಗದ ನಗರಗಳು, ಕೆಟ್ಟ ಸಾರ್ವಜನಿಕ ಸಾರಿಗೆ ಇದೆಲ್ಲರ ನಡುವೆ ಜನರು ನಿಜವಾಗಿಯೂ ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂದು ನಾನು ಗಮನಿಸಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಈ ವಿಚಾರಗಳೇ ನನ್ನನ್ನುಈ ವಿದೇಶದಿಂದ ಹುಟ್ಟೂರಿಗೆ ಹೋಗದಂತೆ ತಡೆಯುತ್ತಿದೆ. ಜನರಿಗಾಗಿ ಈ ದೇಶವನ್ನು ವಿನ್ಯಾಸಗೊಳಿಸಲಾಗಿದೆ ಎನ್ನುವ ಭಾವನೆ ನಿಮಗೆ ಈ ಸ್ಥಳದಲ್ಲಿ ಮೂಡಿದ ನಂತರದಲ್ಲಿ, ಅಮೆರಿಕವು ನಿಮ್ಮ ಹಣವನ್ನು ಹೇಗೆ ದೋಚಿಕೊಳ್ಳುತ್ತದೆ ಎಂದು ಅರಿತುಕೊಳ್ಳಲು ಪ್ರಾರಂಭಿಸುತ್ತೀರಿ. ತನಗೆ ಸರಿಹೊಂದುವ ಜೀವನವನ್ನು ಇಲ್ಲಿ ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ
ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಅಮೆರಿಕದ ಹೊರಗಿನ ಜನರು ಜೀವನವನ್ನು ಹೆಚ್ಚು ಆನಂದಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ನಿಜವಾದ ಮಾತು, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ನೀವು ಅಮೆರಿಕದಲ್ಲಿ ಡಾಲರ್ ಗಳಲ್ಲಿ ದುಡಿದು ಬೇರೆ ದೇಶಗಳಿಗೆ ತೆರಳಿ ಬದುಕುವುದು ಸುಲಭ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Mon, 28 July 25