Animals : ಇನ್ನೇನು ಸ್ವಲ್ಪ ದಿನಗಳಲ್ಲಿ ಈ ಕೋತಿಗಳು ಬರೀ ತಿಂಡಿ ತೀರ್ಥ ಕೊಟ್ಟು ನಮ್ಮಿಂದ ಕೆಲಸ ಮಾಡಿಸಿಕೊಳ್ಳಬೇಡಿ, ನಮಗೂ ಕೆಲ ಕೌಶಲಗಳು (Skills) ಗೊತ್ತು, ತಿಳಿವಳಿಕೆಯೂ ಇದೆ, ಸೂಕ್ಷ್ಮತೆಯೂ ಇದೆ. ನೀವು ಏನು ಕಲಿಸುತ್ತೀರೋ ಅದೆಲ್ಲ ಕಲಿಯುತ್ತೇವೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಹಾಗಾಗಿ ನಮಗೂ ಸಂಬಳ ಕೊಡಿ ಎಂದು ಕೆಲ ಸಾಕುಪ್ರಾಣಿಗಳು ಕೇಳಬಹುದಾದ ಕಾಲ ಬರಬಹುದೇ? ಅಥವಾ ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ, ಇವುಗಳಿಗೇ ತರಬೇತಿ ಕೊಟ್ಟು ಮನೆಯಲ್ಲಿ ಸಹಾಯಕ್ಕೆ ಇಟ್ಟುಕೊಳ್ಳಬಹುದು ಎಂದು ಮನುಷ್ಯರು ಲೆಕ್ಕಾಚಾರ ಹಾಕಬಹುದೆ?
ಇದನ್ನೂ ಓದಿ : Viral Video: ‘ಕಾವಾಲಾ ಕಾವು’ ಇದೀಗ ಮುಂಬೈ ಪೊಲೀಸರೊಬ್ಬರಿಗೆ; ಭಲೇ ಎಂದ ನೆಟ್ಟಿಗರು
ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಗುವನ್ನು ನೋಡಿಕೊಳ್ಳಲು ತಾಯಿಯೊಬ್ಬಳಿಗೆ ಸಹಾಯ ಮಾಡುತ್ತಿದೆ ಅಸಿಸ್ಟೆಂಟ್ ಮಿ. ಮಾರುತಿ! ನೆಟ್ಟಿಗರಲ್ಲಿ ಕೆಲವರು ಈ ವಿಡಿಯೋ ನೋಡಿ ಮೆಚ್ಚಿದ್ದಾರೆ ಇನ್ನೂ ಕೆಲವರು ಗರಂ ಆಗಿದ್ಧಾರೆ. ಎಂಥ ಬುದ್ಧಿವಂತಿಕೆಯಿಂದ ಕೂಡಿದೆ ಈ ಕೋತಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಿಮ್ಮ ಸ್ವಾರ್ಥಕ್ಕೆ ಪ್ರಾಣಿಗಳಿಗೆ ಹಿಂಸೆ ಮಾಡುತ್ತಿದ್ದೀರಾ? ಎಂದು ಇನ್ನೂ ಕೆಲವರು ಹೇಳಿದ್ದಾರೆ.
ಕಾಡಿನಲ್ಲಿ ಟೊಂಗೆಯಿಂದ ಟೊಂಗೆಗೆ ಜೀಕುತ್ತ ಬೇಕಾದ್ದನ್ನು ತಿಂದುಂಡು ಜೀವಿಸುವ ಹಕ್ಕು ಇವನಿಗಿದೆ, ಎಂದೂ ಅವನು ಹೀಗೆ ಮನುಷ್ಯರಿಗೆ ಸಹಾಯ ಮಾಡಬಾರದು, ಅವ ಎಷ್ಟೇ ತರಬೇತಿ ಪಡೆದುಕೊಂಡು ಕೆಲಸ ಕಲಿತರೂ ಇದು ಅವನ ವಾಸಸ್ಥಾನವಲ್ಲ ಎಂದಿದ್ದಾರೆ ಒಬ್ಬರು. ನಿಮಗೆ ಸಹಾಯ ಮಾಡಲು ಮನುಷ್ಯರಿಲ್ಲವೆ? ಯಾಕೆ ಪ್ರಾಣಿಯನ್ನು ಹಿಂಸಿಸುತ್ತಿದ್ದೀರಿ? ಎಂದು ಕೇಳಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ
ಈ ಮಹಿಳೆಗೆ ಹುಚ್ಚು ಹಿಡಿದಿದೆ, ಈಕೆ ಮನುಷ್ಯಳೇ ಅಲ್ಲ, ಪ್ರಾಣಿಗಳನ್ನೂ ಜೀತಕ್ಕಿಟ್ಟುಕೊಂಡಿದ್ದಾಳೆ ಎಂದು ಬೈದಿದ್ದಾರೆ ಇನ್ನೊಬ್ಬರು. ಗುಲಾಮಗಿರಿಯನ್ನು ಬಯಸುವವರು ರೋಬೋಟ್ಗಳನ್ನು ಬಳಸಿಕೊಳ್ಳಿ ಎಂದಿದ್ದಾರೆ ಮತ್ತೊಬ್ಬರು. ಅರೆ, ಹಿಂದೆ ಎತ್ತುಗಳನ್ನು, ಕುದುರೆಗಳನ್ನು ಪ್ರಯಾಣಕ್ಕಾಗಿ ಉಪಯೋಗಿಸುತ್ತಿದ್ದರಲ್ಲವೆ? ಈಗ ಈ ಕೋತಿ ಕೆಲಸದಲ್ಲಿ ತೊಡಗಿರುವುದು ಕ್ರೌರ್ಯ ಎಂದು ಹೇಗೆ ಹೇಳುತ್ತೀರಿ? ಎಂದು ಕೇಳಿದ್ದಾರೆ ಮಗದೊಬ್ಬರು. ಒಂದುವೇಳೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್ಗಳಲ್ಲಿ ಹಾಗೂ ಇನ್ನಿತರೇ ಸಾರ್ವಜನಿಕ ಸ್ಥಳಗಳಲ್ಲಿ ಮಿ. ಮಾರುತಿ ಬಳಗದವರು ಕೆಲಸ ಕೇಳಿಕೊಂಡು ಬಂದರೆ ಏನು ಮಾಡಬೇಕು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:59 pm, Mon, 21 August 23