ನೇರ ಪ್ರಸಾರದಲ್ಲಿ ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕ್​ ಪತ್ರಕರ್ತೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ಇದೆಲ್ಲವೂ ವೈರಲ್​ ಆದ ನಂತರ, ಪಾಕ್​ ಪತ್ರಕರ್ತೆ ಮೈರಾ ಹಶ್ಮಿ ಸ್ಪಷ್ಟನೆಯನ್ನು ನೀಡಿದ್ದು, ನೇರ ಪ್ರಸಾರದ ವೇಳೆ ಬಾಲಕ ತನ್ನ ಕುಟುಂಬ ಇತರೆ ವ್ಯಕ್ತಿಯನ್ನು ಪಿಡುಸಿತ್ತಿದ್ದ ಎಂದು ಎಂ.ಎಸ್ ಹಶ್ಮಿ ಟ್ವೀಟ್ ಮಾಡಿದ್ದಾರೆ.

ನೇರ ಪ್ರಸಾರದಲ್ಲಿ ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕ್​ ಪತ್ರಕರ್ತೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕ್​ ಪತ್ರಕರ್ತೆ
Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 12:05 PM

ನೇರ ಪ್ರಸಾರದ ವೇಳೆ ಅಸಭ್ಯವಾಗಿ ವರ್ತಿಸಿದಕ್ಕೆ ಪಾಕ್ ಮಹಿಳಾ ಪತ್ರಕರ್ತೆ (Pak Journalist) ಯೊಬ್ಬರು ಬಾಲಕನಿಗೆ ಕಪಾಳಮೋಕ್ಷ ಮಾಡಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಫುಲ್​ ವೈರಲ್ ಆಗುತ್ತಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಭಾನುವಾರ (ಜುಲೈ 9) ಬಕ್ರೀದ್​ ಹಬ್ಬ (ಈದ್-ಅಲ್ ಅದಾ) ಆಚರಣೆಯ ಬಗ್ಗೆ ಪತ್ರಕರ್ತೆ ವರದಿ ಮಾಡುತ್ತಿದ್ದಳು. ಆಗ ಬಾಲಕನೊಬ್ಬ ಕ್ಯಾಮರಾಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸೋಮವಾರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 400,000 ಕ್ಕೂ ಹೆಚ್ಚು ಭಾರಿ ವೀಕ್ಷಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸ್ಥಳೀಯರು ಪತ್ರಕರ್ತೆರನ್ನು ಸುತ್ತುವರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬಿಳಿ ಅಂಗಿ ಧರಿಸಿದ ಒಬ್ಬ ಚಿಕ್ಕ ಬಾಲಕ ಅವಳ ಹತ್ತಿರ ನಿಂತ್ತಿದ್ದು, ಮಧ್ಯೆ ಮಧ್ಯೆ ಬಾಲಕ ಕ್ಯಾಮರಾಗೆ ತನ್ನ ಕೈಯನ್ನು ತೋರಿಸುತ್ತಾನೆ. ವರದಿ ಮಾಡುತ್ತಿದ್ದ ಪ್ರರ್ತಕರ್ತೆಯ ಪಿತ್ತ ನೆತ್ತಿಗೇರಿದೆ ತಡ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಇದನ್ನೂ ಓದಿ; Google Doodle: ನಾಸಾದ ಜೇಮ್ಸ್​ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ತೆಗೆದ ಫೋಟೊಗೆ ಗೂಗಲ್ ಡೂಡಲ್ ಗೌರವ

ಟ್ವಿಟ್ಟರ್‌ನಲ್ಲಿನ ಅನೇಕ ಬಳಕೆದಾರರು ಪತ್ರಕರ್ತೆ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾಳೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೂ ಈ ವಿಡಿಯೋವನ್ನು ಪೋಸ್ಟ್​​ ಮಾಡಿದವರಿಗೆ ನೆಟ್ಟಿಗರು ಬಾಲಕನಿಗೆ ಹೊಡೆಯಲು ಏನು ಕಾರಣವೆಂದು ಕೇಳಿದ್ದು, ಅದಕ್ಕೆ ಪ್ರತಿಯಾಗಿ ಗೊತ್ತಿಲ್ಲ ಎನ್ನುವ ಉತ್ತರ ನೀಡಲಾಗಿದೆ. ಪತ್ರಕರ್ತೆಯ ವರ್ತನೆ ಟ್ವಿಟರ್‌ನಲ್ಲಿ ಒಂದು ರೀತಿ ಸಂಚಲನ ಮೂಡಿಸಿದ್ದು, ಕೆಲವು ಬಳಕೆದಾರರು ಪತ್ರಕರ್ತೆಯನ್ನು ಬೆಂಬಲಿಸಿದರೆ, ಇತರೆ ನೆಟ್ಟಿಗರು ಬಾಲಕನಿಗೆ ಹೊಡಿಯುವುದೆ ಅನಿವಾರ್ಯವಿತ್ತ ಎಂದು ಪ್ರಶ್ನಿಸಿದ್ದಾರೆ. ಹೌದು ಬೇರೆ ಯಾರಿಗೊ ಸಂಬಂಧಿಸಿರುವ ಬಾಲಕನಿಗೆ ಪತ್ರಕರ್ತೆ ಕಪಾಳಮೋಕ್ಷ ಮಾಡುವ ಹಕ್ಕನ್ನು ನಿಮಗೆ ಯಾರು ನೀಡಿದರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬ ನೆಟ್ಟಿಗ ಬಾಲಕ ಕಿರಿಕಿರಿಯುಂಟು ಮಾಡುತ್ತಿದ್ದಾನೆಂದು ಹೇಳಿದ್ದಾರೆ. ಅದೇ ರೀತಿಯಾಗಿ ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದು, ಬಾಲಕ ನಿಜಕ್ಕೂ ದುರ್ವರ್ತನೆ ತೋರಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ; Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ಇದೆಲ್ಲವೂ ವೈರಲ್​ ಆದ ನಂತರ, ಪಾಕ್​ ಪತ್ರಕರ್ತೆ ಮೈರಾ ಹಶ್ಮಿ ಸ್ಪಷ್ಟನೆಯನ್ನು ನೀಡಿದ್ದು, ನೇರ ಪ್ರಸಾರದ ವೇಳೆ ಬಾಲಕ ತನ್ನ ಕುಟುಂಬ ಇತರೆ ವ್ಯಕ್ತಿಯನ್ನು ಪಿಡುಸಿತ್ತಿದ್ದ ಎಂದು ಎಂ.ಎಸ್ ಹಶ್ಮಿ ಟ್ವೀಟ್ ಮಾಡಿದ್ದು, ಈ ರೀತಿಯ ವರ್ತನೆಯನ್ನು ನಾನು ಸಹಿಸುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಪತ್ರಕರ್ತೆಗೆ ಟ್ವಿಟರ್‌ನಲ್ಲಿ 9,800 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.