ಹಳ್ಳಿ ಜೀವನವೇ ಬಲು ಸೊಗಸು. ಹಚ್ಚ ಹಸಿರಿನ ವಾತಾವರಣ, ನೀಲಿ ಅಕಾಶ, ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳು, ಅಲ್ಲಲ್ಲಿ ಓಡಾಡುವ ದನ ಕರು, ಜಾನುವಾರುಗಳು ಹಳ್ಳಿ ಜೀವನದ ಈ ಎಲ್ಲಾ ಸುಂದರ ದೃಶ್ಯಗಳು ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ. ಹಳ್ಳಿಯೆಂದರೆ ಸ್ವರ್ಗಕ್ಕೆ ಸಮಾನವಾದುದು ಅಂತಾನೇ ಹೇಳಬಹುದು. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಸುಂದರ ಹಳ್ಳಿಯೊಂದರಲ್ಲಿ ಗೋವುಗಳ ಮುಂದೆ ನವಿಲೊಂದು ಸಂತೋಷದಿಂದ ಗರಿ ಬಿಚ್ಚಿ ಕುಣಿದ ಈ ದೃಶ್ಯವನ್ನು ಕಂಡು ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು cowsblike ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬಲು ಸುಂದರವಾದ ಹಳ್ಳಿಯೊಂದರಲ್ಲಿ ಗೋವುಗಳೆರಡು ಮೇಯುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿಗೆ ಬಂದಂತಹ ಗಂಡು ನವಿಲೊಂದು ಬಹಳ ಖುಷಿಯಿಂದ ಗೋವುಗಳ ಮುಂದೆ ಗರಿ ಬಿಚ್ಚಿ ಕುಣಿದಿದೆ.
ಇದನ್ನೂ ಓದಿ: ಕಾಲುವೆಗೆ ಬಿದ್ದ ಯುವಕನ ಪ್ರಾಣ ರಕ್ಷಿಸಿದ ನೌಕಾಪಡೆಯ ನಿವೃತ್ತ ಅಧಿಕಾರಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 14.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮನಮೋಹಕ ದೃಶ್ಯವನ್ನು ಕಂಡು ನಿಜಕ್ಕೂ ಒಂದು ಬಾರಿ ದ್ವಾಪರ ಯುಗಕ್ಕೆ ಹೋಗಿ ಬಂದಂತಾಯಿತುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅರರೇ ಎಂತಹ ಸುಂದರ ದೃಶ್ಯವಿದುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ