
ಜಾಬ್ ಹುಡುಕುವಾಗ, ಕೆಲಸಕ್ಕೆ (job) ಅರ್ಜಿ ಹಾಕುವಾಗ ರೆಸ್ಯೂಮ್ ಬೇಕೇ ಬೇಕು. ಇದರಲ್ಲಿ ಉದ್ಯೋಗ ಹುಡುಕುವ ವ್ಯಕ್ತಿಯ ಕೌಶಲ್ಯಗಳು, ಅನುಭವ ಹಾಗೂ ಅರ್ಹತೆಗಳನ್ನು ಉಲ್ಲೇಖಿಸಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ವಿಭಿನ್ನವಾದ ರೆಸ್ಯೂಮ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾನೆ. ಹೌದು, ವಿವರವಾದ ಮಾಹಿತಿಯಿಲ್ಲದ ಅರ್ಧ ಫೋಟೋವಿರುವ ರೆಸ್ಯೂಮ್ ಕಳುಹಿಸಿ ನನ್ನ ಟ್ಯಾಲೆಂಟ್ ತಿಳಿಯಬೇಕು ಅಂದ್ರೆ ನನಗೆ ಕೆಲಸ ಕೊಡಿ ಎಂದು ಬರೆದಿರುವ ರೆಸ್ಯೂಮ್ ಸದ್ಯ ವೈರಲ್ ಆಗಿದೆ. ಈ ಉದ್ಯೋಗಕಾಂಕ್ಷಿಯ ಐಡಿಯಾಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ರಿಕ್ರೂಟಿಂಗ್ ಹೆಲ್ (r/recruitinghell) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ರೆಸ್ಯೂಮ್ ಹಂಚಿಕೊಂಡಿದ್ದಾನೆ. ಈ ಸಿವಿಯಲ್ಲಿ ವ್ಯಕ್ತಿಯ ವಿದ್ಯಾರ್ಹತೆ, ಕೆಲಸದ ಅನುಭವ, ಕೌಶಲ್ಯಗಳು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಇಲ್ಲದಿರುವುದನ್ನು ಕಾಣಬಹುದು. ಅರ್ಧ ಫೋಟೋದ ಜತೆಗೆ ನನ್ನ ಟ್ಯಾಲೆಂಟ್ ಬಗ್ಗೆ ತಿಳಿಯಲು ಮೊದ್ಲು ಕೆಲಸ ಕೊಡಿ ಎಂದು ಬರೆದಿರುವುದನ್ನು ನೋಡಬಹುದು.
Resume printed halfway and said: ‘Hire me to unlock full potential.’ 😂
by
u/eloanmask in
recruitinghell
ಇದನ್ನೂ ಓದಿ: ಕೆಲಸ ಕಳೆದುಕೊಂಡದ್ದು ನಷ್ಟಕ್ಕಿಂತ ಲಾಭವೇ ಹೆಚ್ಚು; ಭಾರತೀಯ ಯುವತಿ ಹೀಗೆನ್ನಲು ನೀಡಿದ ಕಾರಣ ಇಲ್ಲಿದೆ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿ ಎಷ್ಟು ಬುದ್ಧಿವಂತ ನೋಡಿ ಎಂದಿದ್ದಾರೆ. ಇನ್ನೊಬ್ಬರು, ನಮ್ಮದೇ ಸ್ವಂತ ಕಂಪನಿಯಿದ್ದರೆ ಉದ್ಯೋಗಕ್ಕೆ ಆಹ್ವಾನಿಸುತ್ತಿದ್ದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಾನೆಂದು ನೋಡಿರದ ಸಿವಿ ಇದು, ಉದ್ಯೋಗ ನೀಡುವವರಿಗೂ ಇದೊಂದು ಚಾಲೆಂಜ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ