ದನಗಳು ಇತರೆ ಪ್ರಾಣಿಗಳಿಗೆ ಹಾಲುಣಿಸುವುದನ್ನು ಕಂಡಿದ್ದೇವೆ. ಅದೇ ರೀತಿ ಪ್ರಾಣಿ ಅಥವಾ ಪಕ್ಷಿಯೊಂದು ಬೇರೆ ಜಾತಿಯ ಪ್ರಾಣಿಗಳಿಗೆ ಅಥವಾ ಹಕ್ಕಿಗಳಿಗೆ ಆಶ್ರಯ ನೀಡಿದ ಫೋಟೋಗಳನ್ನೂ ಕಂಡಿದ್ದೇವೆ. ಇದೀಗ ಕೋಳಿ (Hen)ಯೊಂದು ಬೆಕ್ಕು (Cat)ಗಳಿಗೆ ಆಶ್ರಯ ನೀಡಿದ ಮುಗ್ದ ಫೋಟೋ (Photo)ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದ್ದು, ಕೋಳಿಯ ಅಮ್ಮನಂಥ ಪ್ರೀತಿಗೆ ನೆಟ್ಟಿಜನ್ಗಳು ಮನಸೋತಿದ್ದಾರೆ. ಕೋಳಿ ಬೆಕ್ಕಿನ ಮರಿಗಳಿಗೆ ಆಶ್ರಯ ನೀಡಿದ್ದರ ಹಿಂದೆಯೊಂದು ಸಣ್ಣ ಘಟನೆಯೊಂದು ಇದೆ. ಅದೇನೆಂದು ಮುಂದಕ್ಕೆ ಹೇಳುತ್ತೇವೆ ಓದಿ.
Buitengebieden ಎಂಬವರು ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಇರುವಂತೆ, ಕೋಳಿಯೊಂದು ಎರಡು ಬೆಕ್ಕಿನ ಮರಿಗಳನ್ನು ತನ್ನ ಮರಿಗಳಿಗೆ ಕಾವು ನೀಡಿದಂತೆ ರೆಕ್ಕೆಗಳ ಅಡಿಯಲ್ಲಿ ಇರಿಸಿ ಕುಳಿತುಕೊಂಡಿರುವುದನ್ನು ಕಾಣಬಹುದು. ಅಷ್ಟಕ್ಕೂ ಕೋಳಿ ಬೆಕ್ಕುಗಳಿಗೆ ಆಶ್ರಯ ನೀಡಲು ಕಾರಣವೆಂದರೆ, ಬಿರುಗಾಳಿಯಲ್ಲಿ ಬೆಕ್ಕುಗಳಿಗೆ ತೊಂದರೆಯಾಗಬಾರದು ಎಂದು ಕೋಳಿ ತನ್ನ ರೆಕ್ಕೆಗಳ ಅಡಿಯಲ್ಲಿ ಆಶ್ರಯ ನೀಡಿದೆ.
ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್ನ ಮೃಗಾಲಯ
”ಬಿರುಗಾಳಿ ಸಮಯದಲ್ಲಿ ಭಯಭೀತವಾದ ಬೆಕ್ಕಿನ ಮರಿಗಳನ್ನು ಕೋಳಿ ಆರೈಕೆ ಮಾಡುತ್ತಿರುವುದು” ಎಂದು Buitengebieden ಫೋಟೋ ಹಂಚಿಕೊಳ್ಳುವಾಗ ಶೀರ್ಷಿಕೆ ಬರೆದುಕೊಂಡಿದ್ದಾರೆ. ನೋಡಿದರೆ ಸಾಕು ಕೋಳಿಯನ್ನು ಹಿಡಿಯಲು ಹೋಗುವ ಬೆಕ್ಕು ಮತ್ತು ಕೋಳಿಯ ಸೌಹಾರ್ದತೆಗೆ ನೆಟ್ಟಿಜನ್ ವಿಸ್ಮಯಗೊಂಡಿದ್ದು, ಕಮೆಂಟ್ ಬಾಕ್ಸ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ಬಲವಂತರು ದುರ್ಬಲರನ್ನು ರಕ್ಷಿಸುತ್ತಾರೆ. ಸುಂದರವಾದ ಪ್ರಾಣಿಗಳಿಂದ ಮನುಷ್ಯರು ತುಂಬಾ ಕಲಿಯಬಹುದು” ಎಂದು ಬಳಕೆದಾರರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ದಯವಿಟ್ಟು ನಮಗೆ ಇದು ಹೆಚ್ಚು ಅಗತ್ಯವಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Story: ಅಚ್ಚರಿಯಾದರೂ ಇದು ಸತ್ಯ: ಭಾರತದ ಈ ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ..!
A hen taking care of frightened kittens during a storm.. ? pic.twitter.com/f6osykKBnk
— Buitengebieden (@buitengebieden) June 1, 2022
ಇದನ್ನೂ ಓದಿ: Viral News: ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಈ ಯುವತಿ; ಗೋವಾದಲ್ಲಿ ಒಬ್ಬಳೇ ಹನಿಮೂನ್ ಮಾಡ್ತಾಳಂತೆ!
When in trouble, having mother over is vital. As You see, being mother of the same kind is not necessary. Having kind mother is enough… https://t.co/Ns8DgYJKFJ
— MINIMICROECONOMICS (@AccuracyDollars) June 2, 2022
ಇದನ್ನೂ ಓದಿ: ಟ್ರಾಕ್ಟರ್ ಓಡಿಸುತ್ತಿರುವ ಸಾಯಿ ಪಲ್ಲವಿ; ಹಳೆಯ ವಿಡಿಯೋ ವೈರಲ್
The strong protecting the weak. Different species with wonderful sympathy. Humans can learn so much from beautiful animals. https://t.co/nGrlhcjOzt
— Denise Krusche (@DeniseKrusche) June 2, 2022
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Thu, 2 June 22