Viral Video: ಜಿಮ್ನಾಸ್ಟ್‌ನಂತೆ ಬ್ಯಾಕ್‌ಫ್ಲಿಪ್ ಮಾಡಿದ ಪಾರಿವಾಳ; ನೋಡಿ ಶಾಕ್ ಆದ ನೆಟ್ಟಿಗರು

ಪರಿವಾಳದ ವಿಶಿಷ್ಟ ಕೌಶಲ್ಯವನ್ನು ಉಲ್ಲೇಖಿಸಿ, ಟ್ವಿಟರ್ ಬಳಕೆದಾರರು ಹೀಗೆ ಬರೆದಿದ್ದಾರೆ, ನಾನು ಇದನ್ನು ಮೊದಲ ಬಾರಿಗೆ ನೋಡುತ್ತಿದ್ದು, ಈ ರೀತಿಯ ಪಾರಿವಾಳವು ಹಾರುವಾಗ ಯಾವಾಗಲೂ ಮಾಡುತ್ತವೆ ಎಂದು ಹೇಳಿದ್ದಾರೆ.

Viral Video: ಜಿಮ್ನಾಸ್ಟ್‌ನಂತೆ ಬ್ಯಾಕ್‌ಫ್ಲಿಪ್ ಮಾಡಿದ ಪಾರಿವಾಳ; ನೋಡಿ ಶಾಕ್ ಆದ ನೆಟ್ಟಿಗರು
ಬ್ಯಾಕ್‌ಫ್ಲಿಪ್ ಮಾಡಿದ ಪಾರಿವಾಳ
Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2022 | 9:43 PM

Viral Video: ಪ್ರಾಣಿ ಪ್ರಿಯರು ಯಾವಾಗಲೂ ಮುದ್ದಾದ ವಿಡಿಯೋಗಳಿಗಾಗಿ ಹುಡುಕುತ್ತಿರುತ್ತಾರೆ. ಒಳ್ಳೆಯದು, ಅಂತಹ ಒಂದು ವಿಡಿಯೋ ಇಲ್ಲಿದೆ. ಅದು ಖಂಡಿತವಾಗಿಯೂ ನಿಮ್ಮ ಮುಖದಲ್ಲಿ ದೊಡ್ಡ ನಗು ಮತ್ತು ವಾವ್ ಎನ್ನುವ ಹಾಗೆ ಮಾಡುತ್ತದೆ. ಪಾರಿವಾಳವೊಂದು ಬ್ಯಾಕ್‌ಫ್ಲಿಪ್ ಮಾಡುವ ಬಗ್ಗೆ ನೀವು ಯೋಚಿಸಿದ್ದಿರಾ ಅಥವಾ ಎಂದ್ದಾರು ನೋಡಿದ್ದಿರಾ? ಜಿಮ್ನಾಸ್ಟಿಕ್ಸ್‌ನಲ್ಲಿ ಸಾಹಸ ಮಾಡುವವರಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪರಿವಾಳನ್ನೊಮ್ಮೆ ನೋಡಿ. ವೈರಲ್ ವಿಡಿಯೋವನ್ನು ಮೊದಲು ಪ್ರಿಸನರ್ಸ್ ಡಿಲೆಮಾ ಕ್ಲಬ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ನನ್ನನ್ನು ಮತ್ತು ನನ್ನ ಪಕ್ಷಿ ಪಲ್ಟಿ ಹೊಡೆಯೋದನ್ನ ತಲೆಕೆಡಿಸಿಕೊಳ್ಳಬೇಡಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಟ್ವಿಟರ್‌ನಲ್ಲಿ ಇದು ಈಗಾಗಲೇ 4,48,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1927 ಲೈಕ್‌ಗಳನ್ನು ಪಡೆದುಕೊಂಡಿದೆ. ಪಾರಿವಾಳ ಇಷ್ಟೊಂದು ಸುಲಭವಾಗಿ ಬ್ಯಾಕ್‌ಫ್ಲಿಪ್ ಮಾಡುವುದನ್ನು ನೋಡಿ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಈ ವಿಡಿಯೋ ಕುತೂಹಲಕಾರಿಯಾಗಿದ್ದು, ಪರಿವಾಳ ಒಮ್ಮೆಯೂ ವಿಫಲಗೊಳ್ಳದೆ ಒಂದಲ್ಲ ಎರಡಲ್ಲ ಮೂರು ಬಾರಿ ಬ್ಯಾಕ್‌ಫ್ಲಿಪ್ ಮಾಡುತ್ತದೆ.

ಪರಿವಾಳದ ವಿಶಿಷ್ಟ ಕೌಶಲ್ಯವನ್ನು ಉಲ್ಲೇಖಿಸಿ, ಟ್ವಿಟರ್ ಬಳಕೆದಾರರು ಹೀಗೆ ಬರೆದಿದ್ದಾರೆ, ನಾನು ಇದನ್ನು ಮೊದಲ ಬಾರಿಗೆ ನೋಡುತ್ತಿದ್ದು, ಈ ರೀತಿಯ ಪಾರಿವಾಳವು ಹಾರುವಾಗ ಯಾವಾಗಲೂ ಮಾಡುತ್ತವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪಕ್ಷಿಗಳು ಪಲ್ಟಿ ಹೊಡೆದಿರುವುದನ್ನು ನೋಡಿಲ್ಲ. ಇನ್ನೊಬ್ಬರು ಇದು ತುಂಬಾ ಚೆನ್ನಾಗಿದೆ ಮತ್ತು ನೋಡಲು ಕ್ಯೂಟ್​ ಇದೆ ಎಂದಿದ್ದಾರೆ.

ಇದನ್ನೂ ಓದಿ:

Adult course: ಅಮೆರಿಕದಲ್ಲಿ ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಪ್ರಾಯೋಗಿಕ ಸೆಕ್ಸ್​ ಎಜುಕೇಶನ್, ವಿಶೇಷತೆ ಏನು ಗೊತ್ತಾ?

ಬಾಡಿಗೆ ತಾಯ್ತನದ ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚನೆ; ಆರೋಪಿ ಅಂದರ್