Video: ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ

ನಾಗರ ಹಾವಿನ ತಲೆಯ ಮೇಲೆ ಮಾಣಿಕ್ಯದಂತೆ ಇಲಿಯೊಂದು ಕುಳಿತಿದ್ದು, ಪ್ರಾಣ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೌದು ಈ ಇಲಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪ್ರಾಣ ತೆಗೆಯುವ ಹಾವಿನ ತಲೆಯ ಮೇಲೆಯೇ ಹೋಗಿ ಕುಳಿತಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Video: ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ
ವೈರಲ್​​​ ವಿಡಿಯೋ
Edited By:

Updated on: Jul 14, 2025 | 2:35 PM

ಇಲಿಗಳು ( Rat) ತುಂಬಾ ಚಾಣಕ್ಷ ಪ್ರಾಣಿ. ಹಾವು, (snake) ಬೆಕ್ಕಿಗೆಲ್ಲ ಆಹಾರವಾಗಿರುವ ಈ ಇಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ಉಪಯೋಗಿಸುತ್ತಿರುತ್ತವೆ. ಇಲಿಗಳಲ್ಲಿರುವ ಈ ಜಾಣ್ಮೆಗೆ ಮೆಚ್ಚಲೇಬೇಕು ನೋಡಿ. ಇಲ್ಲೊಂದು ಇಂತಹದ್ದೇ  ಇಲಿಯ ಚಾಣಾಕ್ಷತೆಗೆ ಸಂಬಂಧಿಸಿದ  ವಿಡಿಯೋವೊಂದು ವೈರಲ್‌ ಆಗಿದೆ. ಇಲಿ ತನ್ನ ಜೀವ ಉಳಿಸಿಕೊಳ್ಳಲು ಹಾವಿನ ತಲೆಯ ಮೇಲೆಯೇ ಹೋಗಿ ಕೂತಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಹಾವಿನ ಮುಂದೆ ಇಲಿಯೊಂದು ತನ್ನ ಜೀವವನ್ನು ಉಳಿಸಿಕೊಂಡದ್ದನ್ನು ನೋಡಿ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಹಾವಿನ ಮುಂದೆ ಇಲಿ ಬಂದರೆ, ಹಾವಿಗೆ ಅದು ಅಂದಿನ ಆಹಾರವಾಗಿರುತ್ತದೆ. ಆದರೆ ಇಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಬೇರೆ ಬೇರೆ ರೀತಿಯ ಪ್ಲಾನ್​​ಗಳನ್ನು ಮಾಡುತ್ತದೆ, ಇಲ್ಲಿ ಕೂಡ ಇಲಿ ಮತ್ತು ಹಾವು ಮುಖಮುಖಿಯಾಗಿದೆ. ಈ ವೇಳೆ ಇಲಿ ತನ್ನ ಪ್ಲಾನ್​​​​ನ್ನು ಉಪಯೋಗಿಸಿದೆ.

ಈ ವಿಡಿಯೋದಲ್ಲಿ ಇಲಿ ನಾಗರ ಹಾವಿನ ತಲೆಯ ಮೇಲೆ ಕೂತಿರುವುದನ್ನು ಕಾಣಬಹುದು. ಹಾವು ಎಲ್ಲ ಕಡೆ ಈ ಇಲಿಯನ್ನು ಹುಡುಕುತ್ತಿದೆ. ಆದರೆ ಹಾವಿಗೆ ಇಲಿ ಮಾತ್ರ ಸಿಗುತ್ತಿಲ್ಲ. ಇಲಿ ತನ್ನ ತಲೆ ಉಪಯೋಗಿಸಿಕೊಂಡ ಹಾವಿನ ತಲೆಯ ಮೇಲೆಯೇ ಹೋಗಿ ಕುಳಿತಿದ್ದರೆ, ಹಾವು ತನ್ನ ಆಹಾರ ಎಲ್ಲಿ ಹೋಗಿದೆ ಎಂದು ಹುಡುಕುತ್ತಿದೆ. ಇಲಿ ಕೂಡ ಒಂದು ಬಾರಿ ಕೆಳಗೆ ಹೋಗಿ, ಮತ್ತೆ ತಲೆಯ ಮೇಲೆ ಬರುತ್ತದೆ. ಇಲ್ಲಿ ಇಲಿಯೇ ಹಾವನ್ನು ಆಟವಾಡಿಸಿದ್ದು,  ಹಾವು- ಇಲಿಯ ಈ ಆಟದಲ್ಲಿ ಹಾವು ಮಾತ್ರ ಸಿಕ್ಕಪಟ್ಟೆ ಸುಸ್ತಾಗಿದೆ.

ಇದನ್ನೂ ಓದಿ
ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ
ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರಂತೆ ಬಾಸ್
ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹಂಚಿಕೊಂಡ ಯುವತಿ
ಉದ್ಯಾನವನಕ್ಕೆ ಭೇಟಿ ನೀಡಿದ ಮಹಿಳೆಯ ಕೆನ್ನೆಗೆ ಚುಂಬಿಸಿದ ಮರಿಯಾನೆ

ಇದನ್ನು ಓದಿ:ಈ ಹಳ್ಳಿಯಲ್ಲಿ ಕೇಳಿ ಬರುತ್ತೆ ವಿಚಿತ್ರ ಶಬ್ದ, ಆ ನಿಗೂಢ ಸ್ಥಳ ಎಲ್ಲಿದೆ ಗೊತ್ತಾ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ ಎಕ್ಸ್​​​ನಲ್ಲಿ ಭಾರೀ ವೈರಲ್​​ ಆಗಿದೆ.  ವಿಡಿಯೋವನ್ನು ಶಿಖರ್ ಬರನ್ವಾಲ್ ಎಂಬುವವರು ಹಂಚಿಕೊಂಡಿದ್ದಾರೆ. ಹಲವು ಎಕ್ಸ್​​​ ಬಳಕೆದಾರರು ಕಾಮೆಂಟ್​​ ಮಾಡಿದ್ದಾರೆ. ಇಲ್ಲಿ ಇಲಿಯ ಬುದ್ಧಿವಂತಿಕೆಯನ್ನು ಹೊಗಳುತ್ತಿದ್ದಾರೆ. ಒಬ್ಬ ಬಳಕೆದಾರ ಎಂತಹ ಅದ್ಭುತ ಮನಸ್ಸು ಸಹೋದರ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ ಉಸಿರು ಉಳಿದಿರುವವರೆಗೆ, ಭರವಸೆಯೂ ಜೀವಂತವಾಗಿರುತ್ತದೆ ಎಂದು ಹೇಳಿದ್ದಾರೆ. ಸಾವು ಕೂಡ ಪಾದಗಳ ಕೆಳಗೆ ಇರುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ