Bandipur : ಬಾಲ್ಯದಲ್ಲಿ ಧೋ ಎಂದು ಸುರಿದು ನಿಂತ ಮಳೆಗೆ ಅಂಗಳದಲ್ಲಿ ಅಲ್ಲಲ್ಲಿ ಸಣ್ಣಸಣ್ಣ ನೀರಗುಂಡಿಗಳು ಸೃಷ್ಟಿಯಾಗುತ್ತಿದ್ದವು. ಆಕಾಶ ಕಾಣುವಷ್ಟು ತಿಳಿಯಾದ ಆ ನೀರಿನಲ್ಲಿ ಗುಬ್ಬಚ್ಚಿಗಳು ಸ್ನಾನ ಮಾಡಿ ನೀರು ಕುಡಿದು ಪುರ್ ಎಂದು ಹಾರಿ ಹೋಗುತ್ತಿದ್ದವು. ಪ್ರಕೃತಿಯ ಇಂಥ ಸಣ್ಣಪುಟ್ಟ ಬೆರಗು ಮೈಮನಸ್ಸೆಲ್ಲ ಪುಳಕಗೊಳಿಸುತ್ತಿತ್ತು. ಈ ದೃಶ್ಯಗಳು ಈಗಲೂ ಇವೆ. ಆದರೆ ನಾವು ಎಲ್ಲಿ ಕಳೆದುಹೋಗಿದ್ದೇವೆ? ಮತ್ತೆ ಮತ್ತೆ ಹೇಳಬೇಕಿಲ್ಲ. ಚೈತನ್ಯ ತುಂಬುವ ಇಂಥ ದೃಶ್ಯಗಳಿಗಾಗಿ ಖಂಡಿತ ಸಮಯ ಮಾಡಿಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ (Bandkpur National Park) ಬಿದ್ದ ಮಳೆ ಮತ್ತು ಅದರಿಂದ ಉಂಟಾದ ನೀರಗುಂಡಿಯಲ್ಲಿ ಹುಲಿಯೊಂದು ನೀರು ಕುಡಿಯುತ್ತಿದೆ.
Tiger sighting in Monsoons. This comes from Bandipur.
ಇದನ್ನೂ ಓದಿVC: FD Bandipur pic.twitter.com/OIgak01xV9
— Ramesh Pandey (@rameshpandeyifs) July 26, 2023
ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈತನಕ 3,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, ಸುಮಾರು 400 ಜನರು ರೀಟ್ವೀಟ್ ಮಾಡಿದ್ದಾರೆ. ಮಳೆಗಾಲದಲ್ಲಿ ವನ್ಯಜೀವಿಗಳನ್ನು ಮತ್ತು ಅವುಗಳ ಜೀವನಶೈಲಿಯನ್ನು ನೋಡಬೇಕೆಂದರೆ ಬಂಡೀಪುರಕ್ಕೆ ಹೋಗಲೇಬೇಕು ಎನ್ನುವಂತಿದೆ ಈ ವಿಡಿಯೋ.
ಇದನ್ನೂ ಓದಿ : Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು
ಇಡೀ ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಕರ್ನಾಟಕ. ಅಷ್ಟೇ ಏಕೆ ಚಿರತೆ, ಆನೆ, ಕರಡಿ, ಸಾಂಬಾರ್ ಪ್ರಾಣಿಗಳನ್ನು ಬಂಡೀಪುರ ಅರಣ್ಯದಲ್ಲಿ ಕಾಣಬಹುದು. ಹಲವಾರು ಥರದ ಪಕ್ಷಿಗಳನ್ನೂ. ತಂಪಾದ ವಾತಾವರಣ ಮತ್ತು ಪ್ರಯಾಣ ಜೊತೆಗೆ ಪ್ರಾಣಿ ಪಕ್ಷಿಗಳ ಅಪರೂಪದ ದೃಶ್ಯಗಳನ್ನೂ ಇಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್; ಈ ಕಾರ್ನಿಂದ ಅದೆಷ್ಟು ಅಪಘಾತಗಳಾಗಿವೆಯೋ
ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಇದು ಅಪರೂಪದ ದೃಶ್ಯ, ಹೀಗೆ ಸೆರೆಹಿಡಿದಿರುವ ಅರಣ್ಯ ಸಿಬ್ಬಂದಿ ಕಾರ್ಯ ಮೆಚ್ಚುವಂಥದ್ದು. ಕಾಡಿನ ಸೌಂದರ್ಯವನ್ನು ಸೆರೆಹಿಡಿಯಲು ಅಪಾರ ತಾಳ್ಮೆ ಮತ್ತು ಜ್ಞಾನ ಬೇಕು, ಇದು ಕೆಲವರಿಗಷ್ಟೇ ಸಿದ್ಧಿಸುತ್ತದೆ. ಈ ವಿಡಿಯೋಗಾಗಿ ಧನ್ಯವಾದ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:03 pm, Sat, 29 July 23