Viral: ಪೊಲೀಸ್ ನಾಯಿಯನ್ನೇ ಕಚ್ಚಿದ ವ್ಯಕ್ತಿಯ ಬಂಧನ

|

Updated on: Jul 10, 2023 | 5:08 PM

Criminal : ಅನೇಕ ಅಪರಾಧಗಳಿಗೆ ಕಾರಣನಾದ ಇವನು ಪೊಲೀಸರು ಬಂಧಿಸಲು ಹೋದಾಗೆಲ್ಲ ವಿರೋಧಿಸುತ್ತಿದ್ದ ಮತ್ತು ಅವರ ಮೇಲೆಯೇ ಹಲ್ಲೆ ನಡೆಸುತ್ತಿದ್ದ. ಈ ಬಾರಿ ಇವನನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

Viral: ಪೊಲೀಸ್ ನಾಯಿಯನ್ನೇ ಕಚ್ಚಿದ ವ್ಯಕ್ತಿಯ ಬಂಧನ
ನಾಯಿಯನ್ನು ಕಚ್ಚಿದ ಅಮೆರಿಕದ ವ್ಯಕ್ತಿ
Follow us on

US : ಅಮೆರಿಕದ ಡೆಲಾವೆರ್​ನಲ್ಲಿ ವ್ಯಕ್ತಿಯೊಬ್ಬ ಪೊಲೀಸ್​ ನಾಯಿಯನ್ನು ಕಚ್ಚಿದ್ದಲ್ಲದೆ ಪೊಲೀಸರಿಬ್ಬರ ಮೇಲೆ ದಾಳಿ ಮಾಡಿ ಈಗ ಜೈಲಿನಲ್ಲಿದ್ದಾನೆ. 47 ವರ್ಷದ ಈ ಅಪರಾಧಿ ಜಮಲ್ ವಿಂಗ್​ ವಿಲ್ಮಿಂಗ್ಟನ್​ನ ನಿವಾಸಿ. ಪೊಲೀಸ್ ಇಲಾಖೆಯ ಪ್ರಕಾರ, ಜು.8ರಂದು ರಾತ್ರಿ 1.41 ನಿಮಿಷಕ್ಕೆ ಇವನು ಓಡಿಸುತ್ತಿದ್ದ ಟೊಯೋಟಾ ಮಿತಿಯನ್ನು ಮೀರಿ ಚಲಿಸುತ್ತಿತ್ತು. ಗಸ್ತು ತಿರುಗುತ್ತಿದ್ದ ಪೊಲೀಸರ ತಂಡ ಈ ವಾಹವನ್ನು ತಡೆದರು. ಆ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಮಾಕೋ ಎಂಬ ಪೊಲೀಸ್​ ನಾಯಿಯನ್ನು ಹಲವಾರು ಇವನು ಬಾರಿ ಕಚ್ಚಿದ. ಅವನ ಪ್ರತಿರೋಧದ ನಡುವೆಯೂ ಪೊಲೀಸರು ಅವನನ್ನು ಬಂಧಿಸಿದರು. ಅವನು ಮದ್ಯಪಾನ ಮಾಡಿದ್ದನೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ

ಬಂಧನವನ್ನು ಪ್ರತಿರೋಧಿಸುವ ಸಮಯದಲ್ಲಿ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡಲು ಇವನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೂ ಕೂಡ ಇವನು ತನ್ನ ಪ್ರತಿಯೋಧವನ್ನು ಮುಂದುವರಿಸಿದನು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದನು. ಒಬ್ಬ ಅಧಿಕಾರಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಪ್ರವಾಹ; ಐವರ ಸಾವು, ಆಟಿಕೆಗಳಂತೆ ತೇಲಿಹೋದ ಕಾರುಗಳು

ಪ್ರಾಣಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮತ್ತು ಇನ್ನಿತರೇ ಅಪರಾಧಗಳಡಿ ಇವನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಯಿತು. ಈ ವಿಷಯವನ್ನು ಡೆಲಾವೇರ್ ಸ್ಟೇಟ್​ ಪೊಲೀಸರು ತಮ್ಮ ಫೇಸ್​ಬುಕ್​ ಪುಟದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವ್ಯಕ್ತಿಯ ಕುಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಒಕ್ಕೊರಲಿನಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:06 pm, Mon, 10 July 23