ಸಿಹಿಯಾದ ರುಚಿಕರವಾದ ಬೆಂಗಾಲಿ ಆಹಾರದ ವಿಷಯಕ್ಕೆ ಬಂದಾಗ ರಸಗುಲ್ಲಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಸಕ್ಕರೆ ಪಾಕದಿಂದ ತುಂಬಿದ ಗೋಲಿಗಳಂತಹ ರಸಗುಲ್ಲಾ ಕಂಡಾಗ ಒಂದು ಕ್ಷಣ ಬಾಯಲ್ಲಿ ನೀರೂರುವುದಂತೂ ಖಂಡಿತಾ. ಇದೀಗ ಕಾಫಿಯಲ್ಲಿ ಅದ್ದಿ ತಯಾರಿಸಿದ ರಸಗುಲ್ಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ರಸಗುಲ್ಲಾ ಪ್ರಿಯರು ಶಾಕ್ ಆಗುವುದಂತೂ ಖಂಡಿತಾ.
bombaysweetshope ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರಸಗುಲ್ಲಾದ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ. 79,837 ಜನರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಕಷ್ಟು ಜನರು “ರುಚಿ ಅದ್ಭುತವಾಗಿದೆ” ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Joseph Radhik: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರ ಟೀಕೆಗೂ ಗುರಿಯಾಗಿದೆ. ಸಂಪ್ರದಾಯಿಕ ಸಿಹಿತಿಂಡಿಯಾದ ರಸಗುಲ್ಲಾದ ಜೊತೆಗೆ ಪ್ರಯೋಗ ಬೇಡ ಎಂದು ಕಾಮೆಂಟ್ ಮಾಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಆಹಾರದ ಜೊತೆಗೆ ವಿವಿಧ ಆಹಾರಗಳನ್ನು ಸೇರಿಸಿ ಪ್ರಯೋಗ ಮಾಡುವುದು ಹೆಚ್ಚಾಗಿ ಬಿಟ್ಟಿದೆ” ಎಂದು ಮತ್ತೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Wed, 10 July 24