
Online : ಎಲ್ಲವೂ ಆನ್ಲೈನ್ (Online) ಜೀವನವಾಗಿ ತಲೆ ಎಂಬುದು ಗೊಂದಲದ ಗೂಡಾಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಗಿರುತ್ತದೆ. ಅದರಲ್ಲಿಯೂ ಆನ್ಲೈನ್ ಮೂಲಕ ಹಣ ಪಾವತಿಸುವಾಗ ಎಷ್ಟೇ ಎಚ್ಚರ ವಹಿಸಿದರೂ ಸಾಲದು. ಇದೀಗ ವೈರಲ್ ಆಗಿರುವ ಈ ಸ್ಕ್ರೀನ್ ಶಾಟ್ ನೋಡಿ. ಮಹಿಳೆಯೊಬ್ಬಾಕೆ ಆಕಸ್ಮಿಕವಾಗಿ ಆನ್ಲೈನ್ ಮೂಲಕ ಬೆರೆಯವರಿಗೆ ಹಣ ಕಳಿಸಿಬಿಟ್ಟಿದ್ದಾರೆ. ಕಳಿಸಿದ ನಂತರ ಆಕೆಗೆ ತಾನು ಮಾಡಿದ್ದೇನು ಎನ್ನುವುದು ಹೊಳೆದಿದೆ. ತಕ್ಷಣವೇ ಆ ಬದಿಯ ವ್ಯಕ್ತಿಗೆ ಮೆಸೇಜ್ ಮಾಡಿ ಹಣ ಮರಳಿಸುವಂತೆ ಕೇಳಿಕೊಂಡಿದ್ದಾಳೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಸ್ವಾರಸ್ಯಕರವಾಗಿದ್ದು ಇದೀಗ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ಇದನ್ನೂ ಓದಿ : Viral Video: ಶ್! ಇದೀಗ ನಿದ್ದೆಯ ಸಮಯ; ಹುಲಿಕುಟುಂಬದ ವಿಡಿಯೋ ವೈರಲ್
X ಖಾತೆದಾರರೊಬ್ಬರು ಆಕಸ್ಮಿಕವಾಗಿ ಬೇರೊಬ್ಬರಿಗೆ ಹಣ ಟ್ರಾನ್ಸಫರ್ ಮಾಡಿದ್ದಾರೆ. ತಕ್ಷಣವೇ ಅವರು ಹಣ ಟ್ರಾನ್ಫಫರ್ ಮಾಡಿದವರೊಂದಿಗೆ ಚಾಟ್ ಮೂಲಕ ವಿಷಯ ತಿಳಿಸಿದ್ಧಾರೆ. ಪರಸ್ಪರರ ನಡುವೆ ನಡೆದ ಸೌಜನ್ಯಯುತ ಸಂಭಾಷಣೆಯನ್ನು ಗಮನಿಸಿದ ನೆಟ್ಟಿಗರು ಇವರಿಬ್ಬರನ್ನೂ ಶ್ಲಾಘಿಸಿದ್ದಾರೆ.
ತಪ್ಪಾದ ವ್ಯಕ್ತಿಗೆ ಹಣ ಕಳಿಸಿದ ನಂತರ ನಾನು ಒಂದು ನಿಮಿಷ ಅಕ್ಷರಶಃ ಬೆವರುತ್ತಿದ್ದೆ ಎಂದಿದ್ದಾರೆ @medusaflower. ಅಪರಿಚಿತ ವ್ಯಕ್ತಿಗೆ ಹಣ ಕಳಿಸುವಂತೆ ಮಹಿಳೆ ಕೇಳಿಕೊಂಡಾಗ, ಮೊದಲು ಹಣವನ್ನು ಮರಳಿಸಲಾಗುವುದಿಲ್ಲ! ಎಂದು ತಮಾಷೆ ಮಾಡಿದ್ದಾರೆ. ಹೀಗೆ ಅವರ ಸಂಭಾಷಣೆ ಸಾಗಿದೆ. ಈತನಕ ಈ ಪೋಸ್ಟ್ ಅನ್ನು ಸುಮಾರು 70,000 ಜನರು ನೋಡಿದ್ದಾರೆ. 500 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ ‘ಜೈಲರ್’ಗೆ ಹೆಜ್ಜೆ ಹಾಕಿದಾಗ
ಮಾನವೀಯತೆ ಇದೆ ಎನ್ನುವುದನ್ನು ಆ ಅಪರಿಚಿತ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ ಒಬ್ಬರು. ಒಮ್ಮೆ ನನಗೆ ಒಬ್ಬ ಮಹಿಳೆ ಭಾರೀ ಮೊತ್ತದ ಹಣವನ್ನು ಕಳಿಸಿದಳು. ನಂತರ ನನಗೆ ಫೋನ್ ಮಾಡಿದಳು. ಆಕೆಯ ಧ್ವನಿ ನಿಜಕ್ಕೂ ನಡಗುತ್ತಿತ್ತು. ಅಯ್ಯೋ ಇಷ್ಟೊಂದೇಕೆ ಭಯಪಡುತ್ತಿದ್ದೀರಿ? ಒಂದೇ ನಿಮಿಷ ಕಾಯಿರಿ, ನಿಮ್ಮ ಹಣವನ್ನು ನಿಮಗೆ ಮರಳಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದೆ. ಅಂದಿನಿಂದ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ತನ್ನ ವೈಯಕ್ತಿಕ ಸಮಸ್ಯೆಗಳನ್ನು; ಆಕೆ ಹಂಚಿಕೊಳ್ಳುತ್ತಾಳೆ ಎಂದಿದ್ದಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:53 pm, Mon, 11 September 23