Viral Video: ರೈಲುಹಳಿಗಳ ಮೇಲೆ ಡ್ಯಾನ್ಸ್ ಮಾಡಿದ ರೀಲ್​ ಕಲಾವಿದೆ, ಬೆಚ್ಚಿಬಿದ್ದ ಜನತೆ

| Updated By: ಶ್ರೀದೇವಿ ಕಳಸದ

Updated on: May 31, 2023 | 4:46 PM

Railway Track : ಈ ರೀಲ್ಸ್ ಟ್ಯಾಗ್ ಮಾಡಿ, ಕೂಡಲೇ ಈಕೆಯ ವಿರುದ್ಧ ಎಫ್​ಐಆರ್ ದಾಖಲಿಸಿ ಎಂದು ನೆಟ್ಟಿಗರು ಮುಂಬೈ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಈ ವಿಡಿಯೋ ರಿಪೋರ್ಟ್ ಮಾಡಿ ನೀವು ಕುಳಿತಲ್ಲಿಯೇ ಸಪೋರ್ಟ್ ಮಾಡಬಹುದಲ್ಲವೆ?

Viral Video: ರೈಲುಹಳಿಗಳ ಮೇಲೆ ಡ್ಯಾನ್ಸ್ ಮಾಡಿದ ರೀಲ್​ ಕಲಾವಿದೆ, ಬೆಚ್ಚಿಬಿದ್ದ ಜನತೆ
ರೈಲುಹಳಿಗಳ ಮೇಲೆ ನರ್ತಿಸುತ್ತಿರುವ ರೀಲ್​ ಕಲಾವಿದೆ
Follow us on

Dance : ನೀರಿನಾಳದೊಳಗೆ, ಎತ್ತರದ ಪರ್ವತದ ಮೇಲೆ, ಕಟ್ಟಡದ ಮೇಲೆ ನರ್ತಿಸಿದ ವಿಡಿಯೋಗಳನ್ನು ನೀವು ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ನಿಮಗೆ ಭಯವಾಗುವುದೋ ಏನೋ. ಏಕೆಂದರೆ ಈಕೆ ರೈಲು ಹಳಿಗಳ ಮೇಲೆ ನರ್ತಿಸಿದ್ದಾಳೆ. ಅತ್ತ ಕಡೆಯಿಂದ ರೈಲು (Train) ಬಂದರೆ ಏನು ಗತಿ? ಸಾರ್ವಜನಿಕ ಸ್ಥಳಗಳ ನಿಯಮಾವಳಿ ಈಕೆಗೆ ಗೊತ್ತಿಲ್ಲವೆ? ಕೂಡಲೇ ಈಕೆಯನ್ನು ಬಂಧಿಸಬೇಕು. ಈಕೆಯನ್ನು ನೋಡಿ ಇನ್ನುಳಿದವರೂ ಹೀಗೆಯೇ ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ ಎಂದು ಕೋಪಗೊಂಡಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ ಅವ್ನಿಕರೀಷ್​ ಎಂಬ ಖಾತೆಯಲ್ಲಿ ಕೆಲ ತಿಂಗಳುಗಳ ಹಿಂದೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.  ಹರ್ಯಾನ್ವಿ ಹಾಡಿಗೆ ಈಕೆ ಹೆಜ್ಜೆ ಹಾಕಿದ್ದಾಳೆ. 3,000ಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಇಷ್ಟಪಟ್ಟಿದ್ದಾರೇನೋ ನಿಜ. ಆದರೆ ಸಾಕಷ್ಟು ಜನ ಕೋಪದಿಂದ ಕುದಿಯುತ್ತಿದ್ದಾರೆ. ಅವಳ ಈ ಕೃತ್ಯದಿಂದ ಸಿಟ್ಟಿಗೆದ್ದ ಜನ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ, ಕೂಡಲೇ ಎಫ್​ಆರ್​ಐ ದಾಖಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ರೈಲ್ವೇ ಇಲಾಖೆಯು ಇಂಥ ರೀಲ್ಸ್​ ಕಲಾವಿದರ ಬಗ್ಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣವೆನ್ನುವುದೇ ದೊಡ್ಡ ಭ್ರಮಾಲೋಕ. ಈ ವಿಡಿಯೋ ನೋಡಿ ತಾವೂ ಹೀಗೆಯೇ ರೀಲ್ಸ್ ಮಾಡಲು ಮುಂದಾದರೆ ಏನು ಗತಿ, ಯಾರು ಹೊಣೆ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಒಂದು ನಿಮಿಷದ ರೀಲ್​ಗಾಗಿ ಪ್ರಾಣವನ್ನು ಬಲಿಕೊಡುವ ಗತಿ ಬಂದರೂ ಬರಬಹುದು, ಇಂಥವರಿಗೆ ಲೈಕ್ಸ್​ ಕೊಟ್ಟು ಪ್ರೋತ್ಸಾಹಿಸಬೇಡಿ ಎಂದು ಕೆಲವರು ಹೇಳಿದ್ದಾರೆ.

ಸ್ಕ್ರೋಲ್​ ಮಾಡುತ್ತ ಮನರಂಜನೆ ತೆಗೆದುಕೊಳ್ಳುವ ಬದಲು ಇಂಥ ಅರ್ಥಹೀನ ಕೃತ್ಯಗಳನ್ನು ರಿಪೋರ್ಟ್ ಮಾಡುವುದು ಮತ್ತು ಧ್ವನಿ ಎತ್ತುವುದನ್ನು ನೀವು ಮಾಡುತ್ತೀರಿ ಎಂಬ ಆಶಾಭಾವನೆ ನಮ್ಮದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:42 pm, Wed, 31 May 23