Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ

|

Updated on: Jul 27, 2023 | 2:55 PM

Cabs : ರಾತ್ರಿಯಿಡೀ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಚಾಲಕನಿಗೆ ಹೇಳುತ್ತಲೇ ಹೋಗಿದ್ದಾಳೆ. ಬೇಸತ್ತ ಚಾಲಕ ಹಣ ಪಾವತಿಸುವಂತೆ ಕೇಳಿದಾಗ, ಆತನ ಮೇಲೆಯೇ ಸುಳ್ಳು ಕೇಸ್​ ದಾಖಲಿಸುವುದಾಗಿ ಬೆದರಿಸಿದ್ದಾಳೆ.

Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ
ಕ್ಯಾಬ್​ ಹಣ ಪಾವತಿಸದೆ ರಸ್ತೆಯಲ್ಲಿ ಜಗಳಕ್ಕಿಳಿದ ಗುರುಗ್ರಾಮ್​ನ ಜ್ಯೋತಿ
Follow us on

Haryana : ಹರಿಯಾಣದ ಗುರುಗ್ರಾಮ್​ನ (Gurugram) ಈ ಮಹಿಳೆ 13 ಗಂಟೆಗಳ ಕಾಲ ಕ್ಯಾಬ್​ನಲ್ಲಿ ಸುತ್ತಾಡಿ ಕ್ಯಾಬ್​ ಚಾಲಕನಿಗೆ ಹಣ ಪಾವತಿಸಲು ನಿರಾಕರಿಸಿದ್ದಾಳೆ. ಇಷ್ಟೇ ಅಲ್ಲ, ಅವನು ಕಿರುಕುಳ ನೀಡಿದ್ಧಾನೆಂದು ಸುಳ್ಳು ಕೇಸ್​​ ಹಾಕುವುದಾಗಿ ಬೆದರಿಸಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿದ್ದಾಳೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಆಕೆ  ಕ್ಯಾಬ್​ ಚಾಲಕ, ಪೊಲೀಸ್​ ಮತ್ತು ಪತ್ರಕರ್ತೆಯೊಂದಿಗೆ ಜಗಳವಾಡಿದ್ದಾಳೆ. ಪತ್ರಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಈ ವಿಡಿಯೋ​ ಟ್ವೀಟ್ ಮಾಡಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಕ್ಯಾಬ್​ ಚಾಲಕ ದೀಪಕ್​ ನೀಡಿದ ಮಾಹಿತಿಯ ಪ್ರಕಾರ ಈ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ರಾತ್ರಿ 9ರಸುಮಾರಿಗೆ ಮೇದಾಂತ ಆಸ್ಪತ್ರೆಯ ಬಳಿ ಈಕೆ ಓಲಾ ಆ್ಯಪ್​ ಮೂಲಕ ಕ್ಯಾಬ್​ ಬುಕ್ ಮಾಡಿದ್ದಾಳೆ. ಮರುದಿನ 9ಗಂಟೆಯತನಕ ಗುರುಗ್ರಾಮ್​ನ ವಿವಿಧ ಜಾಗಗಳಿಗೆ ಪ್ರಯಾಣಿಸಿದ್ದಾಳೆ. ನಂತರ ರೂ. 2000 ಕ್ಯಾಬ್​ ಶುಲ್ಕ ಭರಿಸಲು ಚಾಲಕ ಕೇಳಿಕೊಂಡಾಗ ಆತನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ಧಾಳೆ.

ಇದನ್ನೂ ಓದಿ : Viral: ಮುಂಬೈ: ಮರಾಠಿ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಮರಿಚಿರತೆ

ಕ್ಯಾಬ್​ ಚಾಲಕ ದೀಪಕ್​, ‘ಆಕೆ ನಿಖರವಾಗಿ ತಾನು ಯಾವ ಸ್ಥಳಕ್ಕೆ ಹೋಗಬೇಕು ಎನ್ನುವುದನ್ನು ತಿಳಿಸದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸೂಚಿನೆ ನೀಡುತ್ತಿದ್ದಳು. ನನಗೆ ಸಾಕಾಗಿ ಟ್ರಿಪ್​ ಮುಗಿಸುವಂತೆ ಆಕೆಗೆ ಕೇಳಿಕೊಂಡೆ. ಅಲ್ಲದೆ, ರೂ. 2,000 ಪ್ರಯಾಣ ಶುಲ್ಕವನ್ನೂ ಭರಿಸುವಂತೆ ಹೇಳಿದೆ. ಯುಪಿಐ ಮೂಲಕ ಭರಿಸುವುದಾಗಿ ಹೇಳುತ್ತಿದ್ದಳೇ ವಿನಾ 2 ಗಂಟೆ ಸಮಯ ಕಳೆದರೂ ನನ್ನ ಅಕೌಂಟ್​​ಗೆ ಹಣ ಬರಲಿಲ್ಲ. ಮತ್ತೆ ಮತ್ತೆ ಹಣ ಕೇಳಿದ್ದಕ್ಕೆ ನನ್ನ ಮೇಲೆಯೇ ಸುಳ್ಳು ಕೇಸ್​ ಹಾಕಿ ಸಿಲುಕಿಸುತ್ತೇನೆ ಎಂದು ಬೆದರಿಸಿದಳು’ ಎಂದಿದ್ದಾನೆ.

ಇದನ್ನೂ ಓದಿ : Viral Video: ಕೈಲಾಸ ಪರ್ವತದಲ್ಲಿ ಶಿವ; ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ

ಪತ್ರಕರ್ತೆ ದೀಪಿಕಾ ನಾರಾಯಣ ಭಾರದ್ವಾಜ ಈ ಪ್ರಕರಣವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳಲು ಶುರು ಮಾಡುತ್ತಿದ್ದಂತೆ ಅವರೊಂದಿಗೂ ಜ್ಯೋತಿ ಜಗಳಕ್ಕೆ ಇಳಿದಿದ್ಧಾಳೆ. ರಸ್ತೆಯಲ್ಲಿ ಜಗಳ ತಾರಕಕ್ಕೆ ಏರುತ್ತಿದ್ದಂತೆ ಗುರುಗ್ರಾಮ್​ ಪೊಲೀಸರ ತಂಡವು ಮಧ್ಯಪ್ರವೇಶಿಸಿ, ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:41 pm, Thu, 27 July 23