ಮಳೆಗಾಲದಲ್ಲಿ ಒಂದೊಳ್ಳೆಯ ಹಾಡಿಗೆ ರೀಲ್ಸ್ ಮಾಡಬೇಕಾ? ಇಲ್ಲಿದೆ ನೋಡಿ ವೈರಲ್ ಸಾಂಗ್

ರೀಲ್ಸ್​ನಲ್ಲಿ ಹಳೆಯ ಸಾಂಗ್​ಗಳು, ದೇಶ ವಿದೇಶದ ಹಾಡುಗಳು ವೈರಲ್ ಆಗುತ್ತವೆ. ಅದಕ್ಕೆ ಕಾರಣ ಬೇಕಿರುವುದಿಲ್ಲ. ಹಾಡಿನ ಮ್ಯೂಸಿಕ್ ಚೆನ್ನಾಗಿದ್ದರೆ ಅಷ್ಟೇ ಸಾಕಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ‘ಬಾದಲ್ ಬರ್ಸಾ ಬೀಜುಲಿ..’ ಹಾಡು.

ಮಳೆಗಾಲದಲ್ಲಿ ಒಂದೊಳ್ಳೆಯ ಹಾಡಿಗೆ ರೀಲ್ಸ್ ಮಾಡಬೇಕಾ? ಇಲ್ಲಿದೆ ನೋಡಿ ವೈರಲ್ ಸಾಂಗ್
ವೈರಲ್ ಸಾಂಗ್
Follow us
ರಾಜೇಶ್ ದುಗ್ಗುಮನೆ
|

Updated on:Jul 27, 2023 | 1:09 PM

ಇತ್ತೀಚೆಗೆ ಇನ್​ಸ್ಟಾಗ್ರಾಮ್ ರೀಲ್ಸ್ ಸಖತ್ ಟ್ರೆಂಡಿಂಗ್​ನಲ್ಲಿದೆ. ಪ್ರವಾಸಿ ಸ್ಥಳಕ್ಕೆ ತೆರಳಿದರೆ ಸಾಕು ಅನೇಕರು ರೀಲ್ಸ್ ಮಾಡೋಕೆ ಆರಂಭಿಸುತ್ತಾರೆ. ಈಗ ಮಳೆಗಾಲ ಆರಂಭ ಆಗಿದೆ. ಹೊರಗೆ ಸುರಿವ ಮಳೆಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ ಒಳ್ಳೆಯ ಸಾಂಗ್ ಸಿಕ್ಕಿರುವುದಿಲ್ಲ. ಹಾಗಾದರೆ, ನಾವು ಆ ರೀತಿಯ ಒಂದು ಹಾಡಿನ ಬಗ್ಗೆ ವಿವರಿಸುತ್ತಿದ್ದೇವೆ. ಇದು ನೇಪಾಳಿ (Nepali) ಭಾಷೆಯ ಹಾಡು. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಯಾವುದು ಆ ಹಾಡು? ‘ಬಾದಲ್ ಬರ್ಸಾ ಬೀಜುಲಿ..’ (Badal Barsa Bijuli).

ರೀಲ್ಸ್​ನಲ್ಲಿ ಹಳೆಯ ಸಾಂಗ್​ಗಳು, ದೇಶ ವಿದೇಶದ ಹಾಡುಗಳು ವೈರಲ್ ಆಗುತ್ತವೆ. ಅದಕ್ಕೆ ಕಾರಣ ಬೇಕಿರುವುದಿಲ್ಲ. ಹಾಡಿನ ಮ್ಯೂಸಿಕ್ ಚೆನ್ನಾಗಿದ್ದರೆ ಅಷ್ಟೇ ಸಾಕಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ‘ಬಾದಲ್ ಬರ್ಸಾ ಬೀಜುಲಿ..’ ಹಾಡು. ಇದು ನೇಪಾಳಿ ಸಿನಿಮಾ ‘ಕರ್ತಬ್ಯ’ ಸಿನಿಮಾದ ಹಾಡು. ಈ ಸಿನಿಮಾ ತೆರೆಗೆ ಬಂದಿದ್ದು 2004ರಲ್ಲಿ ಅನ್ನೋದು ವಿಶೇಷ. ಇದರ ಕವರ್ ವರ್ಷನ್​ನ ಆನಂದ ಕರ್ಕಿ ಹಾಗೂ ಪ್ರಶ್ನಾ ಶಕ್ಯ ಹಾಡಿದ್ದಾರೆ.

‘ಬಾದಲ್ ಬರ್ಸಾ ಬೀಜುಲಿ..’ ಮಾನ್ಸೂನ್ ಬಗ್ಗೆ ಇರುವ ಸಾಂಗ್. ಪೂರ್ತಿ ಹಾಡು ಮುಂಗಾರು ಮಳೆ, ತಂಪಾದ ವಾತಾವರಣದ ಬಗ್ಗೆಯೇ ಇದೆ. ಈ ಕಾರಣದಿಂದಲೇ ಮಳೆಗಾಲದಲ್ಲಿ ಈ ಹಾಡು ವೈರಲ್ ಆಗುತ್ತಿದೆ. ಆದರೆ, ಬಹುತೇಕರಿಗೆ ಇದು ನೇಪಾಳಿ ಸಿನಿಮಾದ ಹಾಡು ಎಂಬ ವಿಚಾರ ಗೊತ್ತಿಲ್ಲ.

ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಕನ್ನಡದ ಕಿರುತೆರೆ ನಟಿಯರು ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ನಟಿ ಸಾರಾ ಅಣ್ಣಯ್ಯ ಮೊದಲಾದವರು ಈ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಈ ರೀಲ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಾಡಿಗೆ ನೀವು ಕೂಡ ಡ್ಯಾನ್ಸ್ ಮಾಡಬಹುದು.

(ವಿ.ಸೂ: ರೀಲ್ಸ್ ಮಾಡುವಾಗ ಎಚ್ಚರಿಕೆಯಿಂದ ಇರಿ. ಇದರಿಂದ ಪ್ರಾಣಕ್ಕೆ ತೊಂದರೆ ಆಗಬಹುದು. ಅಪಾಯ ಸ್ಥಳಗಳಲ್ಲಿ ರೀಲ್ಸ್ ಮಾಡುವುದನ್ನು ಟಿವಿ9 ಪ್ರೋತ್ಸಾಹಿಸುವುದಿಲ್ಲ.)

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:07 pm, Thu, 27 July 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು