Smuggling : ಪೊಲೀಸರು ಚಾಪೆಯ ಕೆಳಗೆ ತೂರಿದರೆ ಕಳ್ಳರು ರಂಗೋಲಿ ಕೆಳಗೆ ತೂರಿಕೊಳ್ಳುತ್ತಾರೆ. ಪ್ರತೀ ಸಲ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದಾಗ ಅವರ ಚೌರ್ಯಚಾತುರ್ಯ ಅಚ್ಚರಿ ಮೂಡಿಸುವಂತಿರುತ್ತದೆ. ವಿಮಾನ ಮತ್ತು ಇತರೇ ಸಾರಿಗೆ ವ್ಯವಸ್ಥೆಯ ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಿದ್ಧಹಸ್ತರಾದ ಇವರು ಆಗೊಮ್ಮೆ ಈಗೊಮ್ಮೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ಪ್ರಕರಣ ಗಮನಿಸಿ. ಚೀನಾದ ಗಡಿಯಲ್ಲಿ 5 ಜೀವಂತ ಹಾವುಗಳನ್ನು (Live Snakes) ತನ್ನ ಎದೆಭಾಗದ ಬಳಿ ಬಚ್ಚಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ ಮಹಿಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.
A woman attempting to conceal five live corn snakes on her body has been stopped by Shenzhen Customs in South China’s Guangdong Province while crossing the border at Futian Port in Shenzhen. https://t.co/ZpMA060Vws pic.twitter.com/sCUflGdrHb
ಇದನ್ನೂ ಓದಿ— Global Times (@globaltimesnews) July 9, 2023
ಚೀನಾದ ಗುವಾಂಗ್‌ಡಾಂಗ್ (Guangdong) ಪ್ರಾಂತ್ಯದ ಶೆನ್ಝೆನ್ನ ಫ್ಯೂಟಿಯನ್ ಬಂದರಿನಲ್ಲಿ (Futian Port, Shenzhen) ಗಡಿ ದಾಟುತ್ತಿದ್ದಾಗ ಈಕೆಯನ್ನು ಅಧಿಕಾರಿಗಳು ಅನುಮಾನಿಸಿ ತಡೆಹಿಡಿದಿದ್ದಾರೆ. ತಕ್ಷಣವೇ ಈಕೆಯ ಇಡೀ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ಸ್ಟಾಕಿಂಗ್ಸ್ನಲ್ಲಿ ಐದು ಹಾವುಗಳನ್ನು ಸುತ್ತಿಕೊಂಡು ತನ್ನ ಎದೆಯ ಭಾಗದಲ್ಲಿ ಈಕೆ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಇದನ್ನೂ ಓದಿ : Viral Video: ಇಡೀ ಹಳ್ಳಿಗೇ ಮೊಮೊ ಪಾರ್ಟಿ ಕೊಟ್ಟ ಯೂಟ್ಯೂಬರ್
ಈ ಘಟನೆಯು ಕೆಲ ದಿನಗಳ ಹಿಂದೆ ನಡೆದಿದ್ದು, ಮಹಿಳೆಯ ದೇಹದ ಆಕಾರ ಅಸಹಜ ರೀತಿಯಲ್ಲಿ ಇದ್ದುದನ್ನು ಕಂಡು ಅಧಿಕಾರಿಗಳಿಗೆ ಅನುಮಾನ ಉಂಟಾಗಿ ನಂತರದ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಆಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಹಾವುಗಳನ್ನು ಕಾರ್ನ್ ಹಾವುಗಳು (Corn Snakes) ಎಂದು ಗುರುತಿಸಲಾಗಿದ್ದು ಸಂಬಂಧಿಸಿದ ಇಲಾಖೆಗೆ ರವಾನಿಸಲಾಗಿದೆ.
ನೆಟ್ಟಿಗರು ಅಪಾಯಕಾರಿ ಮತ್ತು ಹೀನ ಕೃತ್ಯದ ಬಗ್ಗೆ ದಿಗ್ಭ್ರಮೆ, ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:42 pm, Tue, 11 July 23