Viral Video : ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ತನ್ನ ತೊಡೆಯ ಮೇಲೆ ಈ ಮಹಿಳೆಯನ್ನು ಈ ವ್ಯಕ್ತಿ ಮಲಗಿಸಿಕೊಂಡಿದ್ದಾರೆ. ಬಹುಶಃ ಆರೋಗ್ಯ ಸಮಸ್ಯೆ ಇದ್ದಿರಬಹುದು, ಆಕೆಯ ತಲೆಯನ್ನು ತಟ್ಟುತ್ತಿರುವ ಈ ವ್ಯಕ್ತಿಯ ಮುಖದಲ್ಲಿ ಕಾಳಜಿ ಸ್ಫುರಿಸುತ್ತಿದೆ ಜೊತೆಗೆ ನೋವೂ ಮಡುಗಟ್ಟಿದಂತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಇದು ನಿಜವಾದ ಪ್ರೀತಿ ಎಂದು ಭಾವುಕರಾಗುತ್ತಿದ್ದಾರೆ. ಇದು ಕರ್ನಾಟಕದ ಯಾವುದೋ ಬಸ್ಸ್ಟ್ಯಾಂಡಿನಲ್ಲಿ ಸೆರೆಹಿಡಿದ ವಿಡಿಯೋ.
हमसफर वही जो हर सफर में आपके साथ हो ❤️? pic.twitter.com/QbyVbZi4AE
ಇದನ್ನೂ ಓದಿ— ज़िन्दगी गुलज़ार है ! (@Gulzar_sahab) November 19, 2022
ಜಿಂದಗೀ ಗುಲ್ಝಾರ್ ಹೈ ಎಂಬ ಅಕೌಂಟ್ನಿಂದ ಈ ವಿಡಿಯೋ ಟ್ವೀಟ್ ಆಗಿದೆ. ಅತ್ಯಂತ ಪ್ರೀತಿಯಿಂದ ಈತ ಈಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದಾರೆ. ಹೊರಗಿನ ಗದ್ದಲ, ಬೆಳಕು ಆಕೆಗೆ ತೊಂದರೆ ಉಂಟುಮಾಡದಂತೆ ಆಕೆಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಈ ವಿಡಿಯೋ ಅನ್ನು 58,000ಕ್ಕಿಂತಲೂ ಹೆಚ್ಚು ಜನ ನೋಡಿದ್ಧಾರೆ. 4,700 ಜನರು ಇಷ್ಟಪಟ್ಟಿದ್ದಾರೆ. ದಾಂಪತ್ಯವೆಂದರೆ ಇದು ಎಂದು ಅನೇಕರು ಹೇಳಿದ್ದಾರೆ. ಶ್ರದ್ಧಾ ಪ್ರಕರಣದ ನಂತರ ಈ ದೃಶ್ಯ ನ್ಯೂಸ್ ಚಾನೆಲ್ನವರಿಗೆ ಕಾಣುತ್ತಿಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು. ಇದು ಕರ್ನಾಟಕದ ಬಸ್ ನಿಲ್ದಾಣದಲ್ಲಿ ಸೆರೆಹಿಡಿದ ದೃಶ್ಯ ಎಂದಿದ್ದಾರೆ ಯಾರೋ ಒಬ್ಬರು. ಇದು ಶತಮಾನದ ವಿಡಿಯೋ ಎಂದಿದ್ದಾರೆ ಮಗದೊಬ್ಬರು. ಸಂಬಂಧವೆಂದರೆ ಇದೇ ಎಂದಿದ್ದಾರೆ ಮತ್ತೂ ಒಬ್ಬರು. ಪ್ರೀತಿಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದಂತೆ ಮಾಡುತ್ತಿದೆ ಈ ವಿಡಿಯೋ ಎಂದಿದ್ದಾರೆ.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:42 pm, Thu, 24 November 22