
ಈಗಿನ ಕಾಲದಲ್ಲಿ ಯಾರು ಕೂಡ ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಖುಷಿಯಾಗಲಿ, ಸಂತೋಷವಾಗಲಿ ಬಯಸುವುದು ಕಡಿಮೆಯೇ. ಕೆಲವರಿಗೆ ಸದಾ ನಗುತ್ತಾ ಖುಷಿಯಾಗಿದ್ದವರನ್ನು ಕಂಡರೆ ಸಹಿಸಿಕೊಳ್ಳಲು ಖಂಡಿತ ಆಗಲ್ಲ. ಆದರೆ ಈ ಕಲಾವಿದರು ಆಗಲ್ಲ ಬಿಡಿ, ದಾರಿಹೋಕರು ಅಥವಾ ಅಪರಿಚಿತ ವ್ಯಕ್ತಿಗಳ ಚಿತ್ರ ಬಿಡಿಸಿ ಅವರಿಗೆ ಕೊಟ್ಟು ಅವರ ಮೊಗದಲ್ಲಿ ನಗು ತರಿಸಿ, ತಾವು ಅದರಲ್ಲೇ ಖುಷಿ ಪಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕಲಾವಿದ (Artist) ನೇಲ್ ಆರ್ಟಿಸ್ಟ್ (Nail Artist) ಆಗಿರುವ ಯುವತಿಯ ಚಿತ್ರ ಬರೆದು ಆಕೆಯ ಮೊಗದಲ್ಲಿ ನಗುತರಿಸಿದ್ದಾನೆ. ತನ್ನ ಸ್ಕೆಚ್ ನೋಡುತ್ತಿದ್ದಂತೆ ಯುವತಿಯೂ ಯುವ ಕಲಾವಿದನ ಕೈಚಳಕಕ್ಕೆ ಫಿದಾ ಆಗಿದ್ದು, ಏನು ಮಾಡಿದ್ದಾಳೆ ಗೊತ್ತಾ?. ಇಲ್ಲಿದೆ ಸ್ಟೋರಿ.
ವೈರಲ್ ವಿಡಿಯೋದಲ್ಲಿ ಏನಿದೆ?
spreading happiness ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವಕಲಾವಿದನೊಬ್ಬನು ನೇಲ್ ಆರ್ಟಿಸ್ಟ್ ಆಗಿರುವ ಯುವತಿಯ ಚಿತ್ರ ಬಿಡಿಸಿದ್ದಾಳನೆ. ಈ ಸ್ಕೆಚ್ ಆಕೆಯ ಕೈಗೆ ನೀಡುತ್ತಿದ್ದಂತೆ ಒಂದು ಕ್ಷಣ ಶಾಕ್ ಆಗಿದ್ದು ನಗುವ ಮೂಲಕ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ. ಆ ಬಳಿಕ ಯುವ ಕಲಾವಿದನಿಗೆ ಶೇಕ್ ಹ್ಯಾಂಡ್ ನೀಡುವ ಮೂಲಕ ಅಭಿನಂದನೆ ವ್ಯಕ್ತಪಡಿಸುವುದನ್ನು ನೋಡಬಹುದು. ತನ್ನ ಸುಂದರ ಸ್ಕೆಚ್ ಬಿಡಿಸಿದ ಯುವ ಕಲಾವಿದನಿಗೆ ನೇಲ್ ಆರ್ಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: Viral: CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ, ಹೇಗೆ ಗೊತ್ತಾ?
ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಅಪರಿಚಿತ ವ್ಯಕ್ತಿಗಳನ್ನು ಖುಷಿಪಡಿಸುವ ಈ ಯುವಕಲಾವಿದನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಕಣ್ಣ ಕಣ್ಣ ಸಲಿಗೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನೀನೇ ಭಾಗ್ಯವಂತ ಎಂದು ತಮಾಷೆ ಮಾಡಿದ್ದಾರೆ. ತುಮಕೂರಿಗೆ ಕೊರಿಯನ್ ಸೊಸೆ ಲೋಡಿಂಗ್ ಎಂದು ಕಲಾವಿದನ ಕಾಲೆಳೆದಿದ್ದಾರೆ. ಇನ್ನು ಕೆಲವರು ಲವ್ ಆಗೋಯ್ತು ಅಂದರೆ, ಮತ್ತೆ ಕೆಲವರು ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ