Viral Video: ಮೆಟ್ರೋದಲ್ಲಿ ಹೇರ್‌ ಸ್ಟ್ರೈಟನಿಂಗ್​​ನಲ್ಲಿ ಬ್ಯುಸಿಯಾದ ಯುವತಿ; ವಿಡಿಯೋ ವೈರಲ್

ಇಲೊಬ್ಬಳು ಯುವತಿ ಮೆಟ್ರೋದಲ್ಲಿ ಹೇರ್‌ ಸ್ಟ್ರೈಟನಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಮೆಟ್ರೋದಲ್ಲಿ  ಹೇರ್‌ ಸ್ಟ್ರೈಟನಿಂಗ್​​ನಲ್ಲಿ ಬ್ಯುಸಿಯಾದ ಯುವತಿ; ವಿಡಿಯೋ ವೈರಲ್
Hair Straightening in metro
Image Credit source: twitter

Updated on: Jun 18, 2023 | 1:14 PM

ಮೆಟ್ರೋದಲ್ಲಿ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಬರುವುದು, ಡಾನ್ಸ್​​​​ ಮಾಡುವುದು ಇಂತಹ ಸಾಕಷ್ಟು ವಿಡಿಯೋಗಳು ಸದಾ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿರುತ್ತದೆ. ಆದರೆ ಇಲೊಬ್ಬಳು ಯುವತಿ ಮೆಟ್ರೋದಲ್ಲಿ ಹೇರ್‌ ಸ್ಟ್ರೈಟನಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಪ್ರಶಾಂತ್​​ ಕುಮಾರ್​​ ಎಂಬ ಟ್ವಿಟರ್​​ ಬಳಕೆದಾರರು ಜೂನ್​​​ 17ರಂದು ಮೆಟ್ರೋದಲ್ಲಿ ಹೇರ್‌ ಸ್ಟ್ರೈಟನಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 410,000 ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ

ಮುಂಬೈನ ಮೆಟ್ರೋದಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆ ಮೆಟ್ರೋವನ್ನೇ ಬ್ಯೂಟಿ ಸ್ಪಾ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ಬಳಕೆದಾರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಪವರ್​​ ಆಫ್​​​​ ವುಮೆನ್ ಎಂದು ಬರೆದುಕೊಂಡಿದ್ದಾರೆ. ​​ ಜೊತೆಗೆ ಈಕೆಯ ವಿಚಿತ್ರ ಅವತಾರ ಕಂಡು ಮೆಟ್ರೋದಲ್ಲಿರುವ ಪ್ರಯಾಣಿಕರು ಆಕೆಯನ್ನು ದಿಟ್ಟಿಸಿ ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us