ಟ್ರೆಡ್​ ಮಿಲ್​ ಮೇಲೆ ‘ಹಾಯ್​ ರಾಮಾ’; ಶಭಾಷ್​ ಅಲೋಕ್ ಶರ್ಮಾ

| Updated By: ಶ್ರೀದೇವಿ ಕಳಸದ

Updated on: Dec 01, 2022 | 5:01 PM

Rangeela : 1995ರಲ್ಲಿ ಬಿಡುಗಡೆಯಾದ ರಂಗೀಲಾ ಸಿನೆಮಾದ ‘ಹಾಯ್​ ರಾಮಾ’ ಇಂದಿಗೂ ಕಾವನ್ನು ಉಳಿಸಿಕೊಂಡಿದೆ. ಇದೀಗ ಈ ಯುವಕ ಹೀಗೆ ನರ್ತಿಸಿ ಅದಕ್ಕೆ ಇನ್ನಷ್ಟು ಕಿಚ್ಚನ್ನು ಹಚ್ಚಿದ್ದಾರೆ.

ಟ್ರೆಡ್​ ಮಿಲ್​ ಮೇಲೆ ‘ಹಾಯ್​ ರಾಮಾ’; ಶಭಾಷ್​ ಅಲೋಕ್ ಶರ್ಮಾ
ಟ್ರೆಡ್​ಮಿಲ್​ ಮೇಲೆ ಹಾಯ್​ ರಾಮಾ ಹಾಡಿಗೆ ನರ್ತಿಸುತ್ತಿರುವ ಯುವಕ
Follow us on

Viral Video : ಜಿಮ್ ಸಾಧನಗಳೊಂದಿಗೆ ವ್ಯಾಯಾಮ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅದರಲ್ಲಿಯೂ ಟ್ರೆಡ್ ಮಿಲ್ ಮೇಲೆ ಬಹಳೇ ಹುಷಾರಾಗಿರಬೇಕು. ಅಂಥದ್ದರಲ್ಲಿ ಈ ಯುವಕ ಟ್ರೆಡ್​ಮಿಲ್​ ಮೇಲೆ ನರ್ತಿಸಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡುತ್ತಿದ್ದಾನೆ. ಏಕೆಂದರೆ ಕಲೆ ಇದ್ದಲ್ಲಿ ಸಾಹಸ ಇರಲೇಬೇಕು. ಈ ಎರಡೂ ಇವನಲ್ಲಿವೆ. ಈತನ ಹೆಸರು ಅಲೋಕ್ ಶರ್ಮಾ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

1995ರಲ್ಲಿ ಬಿಡುಗಡೆಯಾದ ರಂಗೀಲಾ ಸಿನೆಮಾದ ‘ಹಾಯ್​ ರಾಮಾ’ ಹಾಡಿಗೆ ಈತ ನರ್ತಿಸಿದ್ದಾನೆ. 30,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, 2,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನಾನು ಗುಜರಾತಿನಲ್ಲಿ ವಾಸಿಸುತ್ತೇನೆ, ಈ ರೀಲ್​ ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ ಒಬ್ಬರು. ಈ ಹಾಡು ಇಂದಿಗೂ ಅದೇ ಬಿಸುಪನ್ನು ಉಳಿಸಿಕೊಂಡಿದೆ ಜೊತೆಗೆ ನಿಮ್ಮ ಈ ಸಾಹಸಮಯ ದೃಶ್ಯ! ಎಂದು ಇನ್ನೊಬ್ಬರು ಹೇಳಿದ್ಧಾರೆ.

ಸಾಮಾಜಿಕ ಜಾಲತಾಣದಲ್ಲಿ ಇಂತಹ ಸಾಕಷ್ಟು ಸಾಹಸಮಯ ರೀಲ್​ಗಳು ನೋಡಲು ಸಿಗುತ್ತವೆ. ಆದರೆ ಎಲ್ಲವನ್ನೂ ಎಲ್ಲರೂ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಸ್ತುತ ರೀಲ್ ನೋಡಿ ಉತ್ತೇಜನಗೊಂಡು ಅನುಕರಿಸಲು ಹೋಗದಿರುವುದು ಒಳ್ಳೆಯದು. ನಿಮ್ಮ ಜಾಗ್ರತೆಯಲ್ಲಿ ನೀವಿರಬೇಕು. ಮನರಂಜನೆಗಾಗಿ ಮಾತ್ರ ನೋಡಬೇಕು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:01 pm, Thu, 1 December 22