Shark Attack : ಜಲವಿಹಾರ ಎನ್ನುವುದು ಕೌತುಕ ಹೇಗೋ ಹಾಗೆಯೇ ಭಯಾನಕವೂ. ಯಾವಾಗ ಏನಾಗುತ್ತದೆ ಎಂದು ಊಹಿಸಲಸಾಧ್ಯ. ಏಕೆಂದರೆ ಜಲಚರಗಳು ಯಾವಾಗ ಎಲ್ಲಿಂದ ಹೇಗೆ ಆಕ್ರಮಿಸುತ್ತವೆ ಎನ್ನುವುದನ್ನು ಯಾರು ಬಲ್ಲವರು? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಯಾಕ್ ಬೋಟಿನೊಳಗೆ ಹೊರಟಿದ್ದಾನೆ. ಎಲ್ಲಿಂದಲೋ ಬಂದ ಶಾರ್ಕ್ ಮೀನು ಆಕ್ರಮಣ ಮಾಡಲೆತ್ನಿಸಿದೆ.
ಮೇ 12 ರಂದು ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ತೀರದಿಂದ ಸುಮಾರು 2 ಮೈಲಿಯಷ್ಟು ದೂರದಲ್ಲಿ ಈ ಕಯಾಕ್ ಚಲಿಸುತ್ತಿದೆ. ನೀರಿನಾಳ ಸುಮಾರು 55 ಅಡಿ ಇದೆ. ಹೀಗಿರುವಾಗ ಧುತ್ತನೇ ಪ್ರತ್ಯಕ್ಷವಾದ ದೊಡ್ಡದೊಂದು ಶಾರ್ಕ್ ಕಯಾಕ್ ಅನ್ನು ಆಕ್ರಮಿಸಲು ನೋಡಿದೆ. ಆಕ್ರಮಿಸಲು ನೋಡಿದ ಶಾರ್ಕ್ನ ತಲೆಯನ್ನು ತತ್ಕ್ಷಣವೇ ತಳ್ಳಿದ್ದಾನೆ. ಅದೃಷ್ಟವಶಾತ್ ಕಯಾಕ್ ನಡೆಸುತ್ತಿರುವವ ಪಾರಾಗಿದ್ದಾನೆ!
ಇದನ್ನೂ ಓದಿ : Viral Video: 12 ಅಡಿ ಕಾಳಿಂಗ ಸರ್ಪದ ತಲೆಗೆ ಮುತ್ತು ಕೊಟ್ಟ ಯುವಕ
ಈತನಕ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ನಿಮ್ಮ ಅದೃಷ್ಟ ಚೆನ್ನಾಗಿದೆ ಶಾರ್ಕ್ ಎದುರಿನಿಂದ ಬಂದು ಅಟ್ಯಾಕ್ ಮಾಡಿದೆ. ಹಿಂದಿಂನಿಂದ ಬಂದಿದ್ದರೆ? ಎಂದು ಕೇಳಿದ್ದಾರೆ ಕೆಲವರು. ನೀವು ಗಾಬರಿಗೊಳ್ಳದೆ ಅದನ್ನು ತಳ್ಳಿದ್ದೀರಲ್ಲ, ನಿಮ್ಮ ಧೈರ್ಯ ಮೆಚ್ಚಬೇಕು ಎಂದಿದ್ದಾರೆ ಒಬ್ಬರು. ಸದ್ಯ ನೀವು ಪಾರಾದಿರಲ್ಲ ಎಂದು ಅನೇಕರು ನಿಟ್ಟುಸಿರು ಬಿಟ್ಟಿದ್ಧಾರೆ. ನನಗೆ ನಿದ್ದೆಯೇ ಬರುವುದಿಲ್ಲ ಇನ್ನು ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ಹೃದಯಾಘಾತವೇ ಆಯಿತು ಎಂದು ಮಗದೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿ ನಿಮಗೇನು ಅನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ