Viral Video: 12 ಅಡಿ ಕಾಳಿಂಗ ಸರ್ಪದ ತಲೆಗೆ ಮುತ್ತು ಕೊಟ್ಟ ಯುವಕ

King Cobra : 'ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ಆದರೆ ನೀವು ಈ ಸಮಯವನ್ನು ಬಹುವಾಗಿ ಆನಂದಿಸಿದ್ದೀರಿ ಮತ್ತು ಹೀಗೊಂದು ಯಶಸ್ವಿ ಚುಂಬನಕ್ಕೆ ಸಾಕಷ್ಟು ಕಷ್ಟಪಟ್ಟಿರುತ್ತೀರಿ. ನಿಮ್ಮ ಸುರಕ್ಷತೆಯ ಬಗ್ಗೆ ಗಮನವಿರಲಿ'

Viral Video: 12 ಅಡಿ ಕಾಳಿಂಗ ಸರ್ಪದ ತಲೆಗೆ ಮುತ್ತು ಕೊಟ್ಟ ಯುವಕ
ಕಾಳಿಂಗ ಸರ್ಪಕ್ಕೆ ಮುತ್ತು ಕೊಡುತ್ತಿರುವ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 17, 2023 | 10:12 AM

Viral Video : ಈ ಹಿಂದೆ ಕೇರಳದ ಉರಗಪ್ರಿಯ ಸುರೇಶ ಹಾವಿಗೆ ಮುತ್ತು ಕೊಟ್ಟ ವಿಡಿಯೋ ನೋಡಿದ ನೆನಪಿರಬಹುದು. ಇದೀಗ ನಿಕ್​ ಎಂಬಾತ ಕೆರೆದಂಡೆಯ  ಮೇಲೆ ಕುಳಿತು ಕಾಳಿಂಗ ಸರ್ಪದ ತಲೆಗೆ ಮುತ್ತಿಟ್ಟು ಸುದ್ದಿಯಲ್ಲಿದ್ದಾನೆ. ದೂರದಿಂದ ಹಾವನ್ನು ಕಂಡರೆ ಅಥವಾ ನೆನಪಿಸಿಕೊಂಡರೆ ಬೆಚ್ಚಿಬೀಳುವ ಅನೇಕರಿಗೆ ಈ ಮುತ್ತುಕೊಡುವ ಪರಿ ಕನಸಿನಲ್ಲಿಯೂ ಕಾಡಬಹುದೇ? ನೋಡಿ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಕಳೆದವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದೆ. ಈ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿ ಉದ್ದ ಇದೆ. ನಿಧಾನವಾಗಿ ಚಲಿಸುವ ಅದನ್ನು ನಿಕ್​ ಹಿಡಿಯುತ್ತಾನೆ. ಅದು ಹೆಡೆಯೆತ್ತಿ ನಿಲ್ಲುತ್ತದೆ. ಅದು ಅವನಿಗೆ ಬೆನ್ನು ಮಾಡಿದಾಗ ಮೆಲ್ಲಗೆ ಅವ ಅದರ ತಲೆಗೆ ಮುತ್ತನ್ನು ಕೊಡುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿದ್ದಾರೆ. ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : ಟರ್ಕಿ: ‘ನೀನೇ ನನ್ನನ್ನು ರಕ್ಷಿಸಿದ್ದು, ಈಗ ಹೊರಟು ನಿಂತರೆ?’ ಬೆಕ್ಕಿನ ವಿಡಿಯೋ ವೈರಲ್

ಇಂಡಿಯಾನಾ ಜೋನ್ಸ್​ ಸಿನೆಮಾದ ದೃಶ್ಯಗಳು ನೆನಪಾಗುತ್ತಿವೆ ಎಂದು ಕೆಲವರು ಹೇಳಿದ್ದಾರೆ. ಓಹ್​ ಎಷ್ಟೊಂದು ನಿರಾಯಾಸವಾಗಿ ನೀವು ಚುಂಬಿಸಿದ್ದೀರಿ ಎಂದಿದ್ದಾರೆ ಮತ್ತೂ ಕೆಲವರು. ಇದೊಂದು ಝೆನ್​ಸಮಯ! ಆಹಾ ಎಂದಿದ್ದಾರೆ ಒಬ್ಬರು. ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ಆದರೆ ನೀವು ಈ ಸಮಯವನ್ನು ಬಹುವಾಗಿ ಆನಂದಿಸಿದ್ದೀರಿ ಮತ್ತು ಹೀಗೊಂದು ಯಶಸ್ವಿ ಚುಂಬನಕ್ಕೆ ಸಾಕಷ್ಟು ಕಷ್ಟಪಟ್ಟಿರುತ್ತೀರಿ. ಆದರೆ ನಿಮ್ಮ ಸುರಕ್ಷತೆಯ ಬಗ್ಗೆ ಗಮನವಿರಲಿ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಅಮ್ಮ ಎಲ್ಲಿ ಹೋದಳೋ?; ಪರ್ವಾಗಿಲ್ಲ, ಫೀಡಿಂಗ್​ ಟಂಬ್ಲರಮ್ಮ ಇದಾಳಲ್ಲ

ಹೀಗೆಲ್ಲ ಹುಚ್ಚು ಸಾಹಸಗಳನ್ನು ಮಾಡಿ ಸಾಧಿಸುವುದಾದರೂ ಏನಿದೆ? ಹೀಗೆಲ್ಲ ಪ್ರಾಣವನ್ನು ಪಣಕ್ಕಿಡಬೇಡಿ ಎಂದು ಕೆಲವರು ಬುದ್ಧಿ ಹೇಳಿದ್ದಾರೆ. ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ