Video Viral: ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ಪತ್ತೆಗೆ ಪ್ರಯಾಣಿಕರ ಸಹಾಯ ಕೇಳಿದ ಪೊಲೀಸರು
ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡಿರುವ ವ್ಯಕ್ತಿಯನ್ನು ಪತ್ತೆ ಮಾಡಲು ನಮಗೆ ಸಹಾಯ ಮಾಡಿ ಎಂದು ಡಿಸಿಪಿ ಮೆಟ್ರೋ ಸಾರ್ವಜನಿಕರ ಸಹಾಯವನ್ನು ಕೋರಿದೆ. ಆತನನ್ನು ಬಂಧಿಸಲು ಈಗಾಗಲೇ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವೀಡಿಯೊ ವೈರಲ್ ಆಗಿತ್ತು. ಈ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು (ಏ28) ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡುತ್ತಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದ್ದು, ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡಿರುವ ಯುವಕನ ಸುತ್ತಮುತ್ತಿನಲ್ಲಿ ಕುಳಿತಿದ್ದ ಇತರ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡಿದೆ, ಈ ಕಾರಣಕ್ಕೆ ಪಕ್ಕದಲ್ಲೇ ಕುಳಿತ ಪ್ರಯಾಣಿಕರು ದೂರ ಸರಿದಿದ್ದಾರೆ. ಇದೀಗ ಈ ಬಗ್ಗೆ ದೆಹಲಿ ಪೊಲೀಸರು ಹಸ್ತಮೈಥುನ ಮಾಡಿದ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವಂತೆ ತಿಳಿಸಿದ್ದಾರೆ.
ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡಿರುವ ವ್ಯಕ್ತಿಯನ್ನು ಪತ್ತೆ ಮಾಡಲು ನಮಗೆ ಸಹಾಯ ಮಾಡಿ ಎಂದು ಡಿಸಿಪಿ ಮೆಟ್ರೋ ಸಾರ್ವಜನಿಕರ ಸಹಾಯವನ್ನು ಕೋರಿದೆ. ಆತನನ್ನು ಬಂಧಿಸಲು ಈಗಾಗಲೇ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅವನ ಬಗ್ಗೆ ಮಾಹಿತಿ ಸಿಕ್ಕರೇ ದಯವಿಟ್ಟು SHO IGIA ಮೆಟ್ರೋಗೆ 8750871326 ಅಥವಾ 1511 (ನಿಯಂತ್ರಣ ಕೊಠಡಿ) ಅಥವಾ 112 (ಪೊಲೀಸ್ ಸಹಾಯವಾಣಿ) ಗೆ ತಿಳಿಸಿ. ಮಾಹಿತಿ ನೀಡಿವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಮೆಟ್ರೋ ಡಿಸಿಪಿ ಟ್ವೀಟ್ ಮಾಡಿದೆ. ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದು, ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನೂ ಓದಿ:Video News: ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ಯುವಕ, ತೀವ್ರ ಕಳವಳ ವ್ಯಕ್ತಪಡಿಸಿದ ಸ್ವಾತಿ ಮಲಿವಾಲ್
ಯುವಕನೊಬ್ಬ ಮೊಬೈಲ್ ಫೋನ್‌ನಲ್ಲಿ ನೀಲಿಚಿತ್ರ ನೋಡುತ್ತಾ ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡುತ್ತಿರುವ ಬಗ್ಗೆ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಆತನ ಸುತ್ತಲು ಕುಳಿತಿದ್ದ ಇತರ ಪ್ರಯಾಣಿಕರು ಆತನಿಂದ ದೂರ ಹೋಗಿದ್ದಾರೆ. ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಮತ್ತೊಬ್ಬ ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಆತನ ಈ ಕೃತ್ಯವನ್ನು ಯಾರು ವಿರೋಧಿಸಿಲ್ಲ ಮತ್ತು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.
This man was performing obscene act in Delhi metro and he is now wanted in FIR NO.02/23 PS IGIA metro. Please inform SHO IGIA metro on 8750871326 or 1511 (control room) or 112 (police helpline). Identity of the informer will be kept confidential. Help Delhi Police Thank You. pic.twitter.com/Idf6TRKd2n
— DCP Metro Delhi (@DCP_DelhiMetro) May 16, 2023
ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆಗಳು ಇದೆ ಮೊದಲೇನಲ್ಲ, ಇತ್ತೀಚಿನ ವೈರಲ್ ವೀಡಿಯೊದಲ್ಲಿ ಮಹಿಳೆಯೊಬ್ಬರು ಬ್ರಾ ಮತ್ತು ಮಿನಿಸ್ಕರ್ಟ್ ಹಾಕಿಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲು DMRC ಪ್ರಯಾಣಿಕರನ್ನು ಒತ್ತಾಯಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
Published On - 10:45 am, Wed, 17 May 23