
ಹಸಿವು (hunger) ಸಾವಿಗಿಂತಲೂ ಕ್ರೂರಿ. ಹೀಗಾಗಿ ಕೆಲವರು ತಮ್ಮ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಇತರರ ಮುಂದೆ ಕೈಯೊಡ್ಡಿ ಬೇಡುತ್ತಾರೆ. ಇನ್ನು ಕೆಲವರು ಕಸದ ತೊಟ್ಟಿಗೆ ಬಿಸಾಡಿದ ಹಳಸಿದ ಆಹಾರವನ್ನೇ ಹೆಕ್ಕಿ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಾರೆ. ಈ ದೃಶ್ಯವನ್ನೆಲ್ಲಾ ನೋಡುವಾಗ ಕಣ್ಣಂಚಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬ ಯುವಕ (young man) ತನ್ನ ಒಳ್ಳೆ ಮನಸ್ಸಿನಿಂದಲೇ ನೆಟ್ಟಿಗರ ಹೃದಯ ಗೆದ್ದುಕೊಂಡಿದ್ದಾನೆ. ಹಸಿವು ಎಂದ ವೃದ್ಧನಿಗೆ ತಿನ್ನಲು ಊಟ ಕೊಟ್ಟು ಪುಣ್ಯಾತ್ಮ ಎನಿಸಿಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
street_healear_somu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅರಕಲು ಬಟ್ಟೆ ತೊಟ್ಟ ವೃದ್ಧನೊಬ್ಬ ಯುವಕನ ಬೈಕನ್ನು ನಿಲ್ಲಿಸಿ ಊಟ ಕೊಡು ಕೈ ಸನ್ನೆ ಮಾಡುತ್ತಿರುವುದನ್ನು ಕಾಣಬಹುದು. ಇದನ್ನರಿತ ಯುವಕನು ಈ ಹಿರಿ ಜೀವಕ್ಕೆ ಊಟ ಕೊಡಿಸಲು ಸಣ್ಣದಾದ ಹೋಟೆಲ್‌ಗೆ ಹೋಗುವುದನ್ನು ಕಾಣಬಹುದು. ಯುವಕನು ಇಂತಿಷ್ಟು ಹಣ ನೀಡಿ ಹೋಟೆಲ್ ಮಾಲೀಕಳ ಬಳಿ ಈ ಪಾರ್ಸೆಲ್‌ನ್ನು ವೃದ್ಧನಿಗೆ ಕೊಡಲು ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ಈ ವಿಡಿಯೋದ ವಯೋವೃದ್ಧನು ಯುವಕನಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುವ ದೃಶ್ಯವನ್ನು ನೋಡಬಹುದು.
ಇದನ್ನೂ ಓದಿ: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ
ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಕೆಲಸ ಎಂದರೆ, ಇನ್ನೊಬ್ಬರು, ನಿಮ್ಮ ಕುಟುಂಬ ನೂರಾರು ಕಾಲ ಚೆನ್ನಾಗಿರಲಿ ಎಂದು ಕಾಮೆಂಟ್ ನಲ್ಲಿ ಹಾರೈಸಿದ್ದಾರೆ. ಮತ್ತೊಬ್ಬರು, ಸೂಪರ್ ಬ್ರೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ