Video: ದೂರದ ಊರಿನಲ್ಲಿ ವಾಸಿಸುವ ಹುಡುಗರ ವ್ಯಥೆ ಇದು; ಮನೆಗೆ ಹೋದ್ರೆ ಅಮ್ಮ ಹೇಳುವ ಕೆಲಸ

ಈ ಅಮ್ಮಂದಿರು ಗಂಡು ಮಕ್ಕಳ ಮುಂದೆ ಮುದ್ದು ಮುದ್ದಾಗಿ ಮಾತನಾಡಿ, ಇಲ್ಲಾಂದ್ರೆ ಬೈದಾದ್ರೂ ಸರಿಯೇ, ಮಗನ ಕೈಯಲ್ಲಿ ತಮ್ಮ ಕೆಲಸವನ್ನು ಮಾಡಿಸಿಕೊಂಡು ಬಿಡುತ್ತಾರೆ. ಇಲ್ಲೊಬ್ಬ ಯುವಕನಿಗೂ ಹೀಗೆಯೇ ಆಗಿದೆ. ಮುಂಬೈಯಿಂದ ಮನೆಗೆ ಬಂದಿರುವ ಮಗನಿಗೆ ವಿಶ್ರಾಂತಿ ಪಡೆದುಕೊಳ್ಳಲು ಸಮಯ ನೀಡದೇ ತಾಯಿ ಮನೆಕೆಲಸ ಮಾಡಿಸಿಕೊಳ್ಳುತ್ತಿದ್ದು, ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದೂರದ ಊರಿನಲ್ಲಿ ವಾಸಿಸುವ ಹುಡುಗರ ವ್ಯಥೆ ಇದು; ಮನೆಗೆ ಹೋದ್ರೆ ಅಮ್ಮ ಹೇಳುವ ಕೆಲಸ
ವೈರಲ್‌ ವಿಡಿಯೋ
Image Credit source: Instagram
Edited By:

Updated on: Sep 23, 2025 | 12:16 PM

ಕೆಲ ಅಮ್ಮಂದಿರೇ (mother) ಹಾಗೆ, ಮಗಳೋ ಅಥವಾ ಮಗನೋ ಸುಮ್ಮನೆ ಕುಳಿತುಕೊಂಡಿದ್ರೆ ಏನಾದ್ರೂ ಕೆಲಸ ಹೇಳುತ್ತಿರುತ್ತಾರೆ. ಆ ಕೆಲಸ ನನ್ನಿಂದ ಆಗಲ್ಲ ಅಂದ್ರೆ ಸಾಕು, ಮಂಗಳಾರತಿ ಶುರುವಾಗುತ್ತೆ. ಏನೇ ಹೇಳಿದ್ರೂ ಸರಿ ಎನ್ನುತ್ತಾ ಅಮ್ಮ ಹೇಳಿದ ಎಲ್ಲಾ ಕೆಲಸವನ್ನು ಚಾಚು ತಪ್ಪದೇ ಮಾಡುವ ಮಕ್ಕಳಿದ್ದಾರೆ. ಇದೀಗ ಮುಂಬೈಯಿಂದ (Mumbai) ರಜೆ ತೆಗೆದುಕೊಂಡು ಮನೆಗೆ ಬಂದ ಮಗನಿಗೆ ಅಮ್ಮ ರೆಸ್ಟ್ ಮಾಡಲು ಬಿಡದೇ ಮನೆ ಕೆಲಸ ವಹಿಸಿದ್ದಾಳೆ. ಮುಂಜಾನೆ 3 ಗಂಟೆಗೆ ಮನೆ ತಲುಪಿದ ಈ ಯುವಕ ರೆಸ್ಟ್ ಮಾಡದೇ ಅಮ್ಮನ ಹೇಳಿದ ಕೆಲಸ ಮಾಡುತ್ತಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋವನ್ನು ನಿಶಾಂತ್ ಗೆಹ್ಲೋಟ್‌ (Nishant Gahlot)ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ನನ್ನ ಸಹೋದರ ಮುಂಬೈಯಿಂದ ಪ್ರಯಾಣ ಬೆಳೆಸಿದ್ದು, ಕೆಲಸದ ವಿರಾಮಕ್ಕಾಗಿ ಅಲ್ಲ, ಬದಲಾಗಿ ಇದಕ್ಕಾಗಿ ನಾನು ಭಾವಿಸುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಯುವಕನು ಕರ್ಟನ್ ಜೋಡಿಸುತ್ತಿರುವುದು ಹಾಗೂ ಸೀಲಿಂಗ್ ಫ್ಯಾನ್ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಈ ಯುವಕನ ಹಿರಿಯ ಸಹೋದರ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.

ಇದನ್ನೂ ಓದಿ
ಗಂಡನ ಕಿಸೆಯಿಂದ ಹಣ ಕದಿಯುವುದು ತುಂಬಾ ಸುಲಭ
ಇಲ್ಲಿ ಸಿಗುತ್ತಾರೆ ನೋಡಿ ತಾತ್ಕಾಲಿಕ ಸುಂದರ ಪತ್ನಿಯರು
ಮಹಿಳೆಯರಿಗೆ ಪಕ್ಕದ ಮನೆಯ ಜಗಳಗಳನ್ನು ಕದ್ದು ನೋಡೋದೆಂದ್ರೆ ಎಷ್ಟು ಇಷ್ಟ ನೋಡಿ
ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಯುವಕನೊಬ್ಬ ಮೇಜಿನ ಮೇಲೆ ನಿಂತುಕೊಂಡಿದ್ದರೆ ಇತ್ತ ತಾಯಿ ಕಿಟಕಿಗೆ ಹಾಕಲು ಕರ್ಟನ್ ಗಳನ್ನು ನೀಡುತ್ತಿದ್ದಾರೆ. ಇದನ್ನು ನೋಡಿದ ಈ ಯುವಕನ ಸಹೋದರ, ಅವನು ಬೆಳಗ್ಗೆ 3 ಗಂಟೆಗೆ ಮನೆಗೆ ಬಂದಿದ್ದಾನೆ. ನೀವು ಅವನಿಂದ ಏನು ಮಾಡಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾನೆ. ಕಿರಿಯ ಮಗನ ಮೇಲೆ ಕರುಣೆ ತೋರದೇ, ಹಿರಿಯ ಮಗನಿಗೆ ಬೈದು ಆತನ ಬಾಯಿ ಮುಚ್ಚಿಸುವುದನ್ನು ನೋಡಬಹುದು.

ಇದನ್ನೂ ಓದಿ:Video: ಗಂಡನ ಕಿಸೆಯಿಂದ ಹಣ ಕದಿಯುವುದು ತುಂಬಾ ಸುಲಭ, ಇಲ್ಲಿದೆ ನೋಡಿ ಮಹಿಳೆಯ ಸಲಹೆ

ಈ ವಿಡಿಯೋ 3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನನ್ನ ಪರಿಸ್ಥಿತಿಯೂ ಇದೆ, ನಾವೂ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬಹುತೇಕ ಭಾರತೀಯ ಅಮ್ಮಂದಿರು ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ವಿಶ್ರಾಂತಿಗಿಂತ ತಾಯಿಯ ಮಾತೇ ವೇದ ವಾಕ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:05 pm, Tue, 23 September 25