ಫ್ಯಾನ್ ಮೇಲೆ ಗೂಡು ಕಟ್ಟಿಕೊಂಡಿದ್ದ ಜೇನು ನೊಣಗಳಿಗೆ ತೊಂದರೆ ಕೊಟ್ಟ ಯುವಕ

ಸವಿದವನಿಗೆ ಮಾತ್ರ ಗೊತ್ತು ಈ ಜೇನಿನ ಸಿಹಿ. ಹೌದು, ಈ ಜೇನು ಎಷ್ಟು ಸಿಹಿಯೋ ಜೇನುನೊಣಗಳ ಕಡಿತವು ಅಷ್ಟೇ ಅಪಾಯಕಾರಿಯಾಗಿದೆ. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಜೇನುನೊಣಗಳು ಗೂಡು ಕಟ್ಟಿಕೊಂಡಿದ್ದರೆ ಯಾರು ಕೂಡ ಅದರ ತಂಟೆಗೆ ಹೋಗುವುದಿಲ್ಲ. ಇದೀಗ ಫ್ಯಾನ್ ಮೇಲೆ ಗೂಡು ಕಟ್ಟಿಕೊಂಡಿದ್ದ ಜೇನುನೊಣಗಳಿಗೆ ಯುವಕನೊಬ್ಬನು ತೊಂದರೆ ಕೊಡುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆ ದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಫ್ಯಾನ್ ಮೇಲೆ ಗೂಡು ಕಟ್ಟಿಕೊಂಡಿದ್ದ ಜೇನು ನೊಣಗಳಿಗೆ ತೊಂದರೆ ಕೊಟ್ಟ ಯುವಕ
ವೈರಲ್ ವಿಡಿಯೋ
Image Credit source: Twitter

Updated on: May 07, 2025 | 11:55 AM

ಸೋಷಿಯಲ್‌ ಮೀಡಿಯಾ (social media) ದಲ್ಲಿ ರಾತ್ರೋ ರಾತ್ರಿ ಫೇಮಸ್‌ ಆಗಲು, ಲೈಕ್ಸ್‌ ಫಾಲೋವರ್ಸ್‌ ಗಿಟ್ಟಿಸಲು ಕೆಲವೊಬ್ಬರು ಏನಾದರೊಂದು ಸರ್ಕಸ್‌ ಮಾಡುತ್ತಿರುತ್ತಾರೆ. ಈ ಯುವಕ ಯುವತಿಯರು ಎಂತಹ ಕೆಲಸಕ್ಕೂ ಕೈ ಹಾಕುತ್ತಾರೆ. ಹೀಗೆ ಭಂಡ ಧೈರ್ಯದಿಂದ ಕೆಲವರು ಸಾಹಸಗಳಿಗೆ ಕೈ ಹಾಕುವ ಮೂಲಕ ಜೀವಕ್ಕೆ ಕುತ್ತು ತಂದುಕೊಳ್ಳುವುದಿದೆ. ಆದರೆ ಇಲ್ಲೊಬ್ಬ ಯುವಕನು ಜೇನುನೊಣ (bees) ಕ್ಕೆ ಸ್ವಲ್ಪ ಕೂಡ ಹೆದರದೇ ಫಾನ್ ನಲ್ಲಿ  ಗೂಡು ಕಟ್ಟಿಕೊಂಡಿರುವ ಜೇನುನೊಣಗಳನ್ನು ಕೈಯಿಂದ ಮೆಲ್ಲನೆ ತೆಗೆದು ಕೆಳಗೆ ಬಿಸಾಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

@Jhantu jetha ಹೆಸರಿನ ಖಾತೆಯಲ್ಲಿ ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಸೀಲಿಂಗ್ ಫ್ಯಾನ್ ಮೇಲೆ ಜೇನು ನೊಣಗಳು ಗೂಡು ಕಟ್ಟಿಕೊಂಡಿದೆ. ಈ ವೇಳೆಯಲ್ಲಿ ಯುವಕನೊಬ್ಬನು ಈ ಜೇನುನೊಣಗಳಿಗೆ ತೊಂದರೆ ಕೊಡಲು ಮುಂದಾಗಿದ್ದಾನೆ. ಈ ಜೇನುನೊಣಗಳನ್ನು ಕೈಯಿಂದ ಮೆಲ್ಲನೆ ತೆಗೆದು ಕೆಳಗೆ  ಬಿಸಾಡಿದ್ದು, ಯುವಕನ ಸುತ್ತಮುತ್ತ ಜೇನುನೊಣಗಳು ಹಾರಾಡುತ್ತಿರುವುದನ್ನು ನೋಡಬಹುದು. ಆದರೆ ಈ ಯುವಕನ ಮುಖದಲ್ಲಿ ಯಾವುದೇ ಭಯವಾಗಲಿ ಕಾಣುತ್ತಿಲ್ಲ. ಬದಲಾಗಿ ನಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರೈಲಿನ ಎಸಿ ಕೋಚ್​​ ಟಾಯ್ಲೆಟ್​​ನಲ್ಲಿ ಹಾವು ಪತ್ತೆ; ಆಮೇಲೇನಾಯ್ತು?
ನಿಮ್ಗೊತ್ತಾ ಬ್ರೇಕಪ್‌ನಿಂದಲೂ ಹಲವಾರು ಪ್ರಯೋಜನಗಳಿವೆಯಂತೆ
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್

ಇದನ್ನೂ ಓದಿ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ; ಶಾಕಿಂಗ್ ವಿಡಿಯೋ ಇಲ್ಲಿದೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ವೊಂದು 68 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಈ ಯುವಕನ ಭಂಡ ಧೈರ್ಯ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ‘ಈ ರೀತಿ ಜೇನುನೊಣಗಳ ಜೊತೆಗೆ ಚೆಲ್ಲಾಟ ಬೇಡ, ಜೇನು ಎಷ್ಟು ಸಿಹಿಯೋ, ಜೇನುನೊಣಗಳು ಅಷ್ಟೇ ಅಪಾಯಕಾರಿ’ ಎಂದಿದ್ದಾರೆ. ಇನ್ನೊಬ್ಬರು, ‘ಜೇನುನೊಣಗಳು ಯಾಕೆ ಈ ಯುವಕನಿಗೆ ಯಾಕೆ ಕಚ್ಚುತ್ತಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ತನ್ನ ಪಾಡಿಗೆ ಇರುವ ಜೀವಿಗಳಿಗೂ ತೊಂದರೆ ಕೊಡುವ ಈ ಮನುಷ್ಯನ ಕೆಟ್ಟ ಬುದ್ಧಿಗೆ ಏನು ಹೇಳೋದು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಅಳುವ ಎಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ