ತನ್ನ ಮಗ ಯಾವುದೇ ರೀತಿಯ ಕೆಟ್ಟ ಚಟದ ಗೀಳಿಗೆ ಬಲಿಯಾಗಬಾರದು ಎಂದು ಪೋಷಕರು ಯಾವಾಗಲು ಬಯಸುತ್ತಾರೆ. ಮಕ್ಕಳು ಕುಡಿತ, ಸಿಗರೆಟ್ ಸೇದುವುದು ಇತ್ಯಾದಿ ಚಟಗಳಿಗೆ ಕೈ ಹಾಕದಂತೆ ಪೋಷಕರು ನೋಡಿಕೊಳ್ಳುತ್ತಿರುತ್ತಾರೆ. ಆದರೆ ಅಪ್ಪಿತಪ್ಪಿ ಏನಾದರೂ ಮಗ ಕುಡಿದಿದ್ದಾನೆ ಎಂದು ತಂದೆತಾಯಿಗೆ ಗೊತ್ತಾದರೆ, ಮನೆಯಲ್ಲಿ ಮಹಾಭಾರತವೇ ನಡೆದುಬಿಡುತ್ತದೆ. ಹಾಗೂ ಇನ್ನು ಮುಂದೆ ಕುಡಿಯದಂತೆ ಬೈಯುತ್ತಾ ಬುದ್ಧಿವಾದ ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಅಕಸ್ಮಾತಾಗಿ ತನ್ನ ಕುಟುಂಬದ ವಾಟ್ಸ್ಆಪ್ ಗ್ರೂಪ್ನಲ್ಲಿ ಬೀಯರ್ ಬಾಟಲಿ ಫೋಟೊವನ್ನು ಶೇರ್ ಮಾಡಿ ಆತ ಪೋಷಕರ ಕೋಪಕ್ಕೆ ಗುರಿಯಾಗಿದ್ದಾನೆ.
ವಾಟ್ಸ್ಆಪ್ ಗ್ರೂಪ್ನಲ್ಲಿ ತಂದೆ ತಾಯಿ ಹಾಗೂ ಮಗನ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್ಶಾಟ್ನ್ನು ಆ ಯುವಕನ ಸಹೋದರಿ ಸಾನಿಯಾ ಧವನ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಶುಕ್ರವಾರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯದ ಉತ್ಸಾಹದಲ್ಲಿ, ಯುವಕ ಕುಟುಂಬದ ವಾಟ್ಸ್ಆಪ್ ಗ್ರೂಪಿಗೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದ ಫೋಟೋವನ್ನು ಕಳುಹಿಸಿದನು. ಜೊತೆಗೆ ‘ಮುಂಬೈ ಗೆಲುವಿಗಾಗಿ…. ಹೋಗೋಣ’ ಎಂದು ಬರೆದುಕೊಂಡಿದ್ದಾನೆ.
ಮಕ್ಕಳ ಕೈಯಲ್ಲಿ ಸಾರಾಯಿ ಬಾಟಲಿಗಳನ್ನು ಕಂಡರೆ ಸಹಜವಾಗಿ ಪೋಷಕರು ಕೋಪಗೊಳ್ಳುತ್ತಾರೆ ಅಲ್ಲವೆ ಅದೇ ರೀತಿ ಈತನ ಪೋಷಕರು ಕೂಡಾ ಮಗ ಬೀಯರ್ ಬಾಟಲಿಯ ಫೋಟೋವನ್ನು ಹಂಚಿಕೊಂಡಿದ್ದಕ್ಕೆ ಕೋಪಗೊಂಡು ತಕ್ಷಣ ವಾಟ್ಸ್ಆಪ್ ಗ್ರೂಪಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆತನ ತಂದೆ ‘ಏನಿದು’ ಎಂದು ಪ್ರಶ್ನಿಸಿದ್ದಾರೆ. ತಾಯಿ ‘ನೀನು ಬಿಯರ್ ಕುಡಿದಿದ್ದೀಯಾ’ ಎಂದು ಕೇಳಿದ್ದಾರೆ. ಮತ್ತೊಂದೆಡೆ ಸಾನಿಯಾ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಗ್ರೂಪ್ಗೆ ಕಳುಹಿಸಿದ ಬೀಯರ್ ಫೋಟೋವನ್ನು ತಕ್ಷಣ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಅವರ ಪೋಷಕರು ಆ ಫೋಟೊವನ್ನು ಆಗಲೇ ನೋಡಿ ಬಿಟ್ಟಿದ್ದರು.
No way my brother sent this on the family group ? pic.twitter.com/FKnrcYiu3K
— Saniya Dhawan (@SaniyaDhawan1) May 26, 2023
ಇದನ್ನೂ ಓದಿ; Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ&;.ವೈರಲ್ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ
ಈ ಪೋಸ್ಟ್ ಟ್ವಿಟರ್ನಲ್ಲಿ ವೈರಲ್ ಆಗಿದ್ದು, 1.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 20.8 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಈ ವೀಡಿಯೋಗೆ ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಆ ಯುವಕ ಇನ್ನೂ ಬದುಕಿದ್ದಾನಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಕೂಡಾ ಇದೇ ರೀತಿ ಒಮ್ಮೆ ಕಾಲೇಜು ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಸ್ನೇಹಿತ ಸಿಗರೇಟ್ ಸೇದುವ ಫೋಟೊವನ್ನು ಹಂಚಿಕೊಂಡು ಪಜೀತಿಗೆ ಸಿಲುಕಿದ್ದೆ’ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ