
ಈಗಿನ ಕಾಲದಲ್ಲಿ ಕೆಲಸ (job) ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಒಳ್ಳೆಯ ಪ್ರತಿಭೆ, ಕೆಲಸ ಮಾಡುವ ಆಸಕ್ತಿಯಿದ್ರು ಸಂದರ್ಶನದ ಕೊನೆಯಲ್ಲಿ ಕೆಲಸ ಇಲ್ಲ, ನೀವು ಫೇಲ್ ಆದ್ರಿ ಎಂದಾಗ ಆಗುವ ಬೇಜಾರು ಅಷ್ಟಿಷ್ಟಲ್ಲ. ಕೆಲವೊಮ್ಮೆ ಸಂದರ್ಶಕರು ಕೇಳುವ ಪ್ರಶ್ನೆಗೆ ಉತ್ತರಿಸಲು ಆಗುವುದಿಲ್ಲ. ಈ ವೇಳೆಯಲ್ಲಿ ಆ ವ್ಯಕ್ತಿಯಿಂದ ಅವಮಾನ ಆಗುವಂತಹ ಮಾತು ಬಂದು ಬಿಟ್ಟರೆ, ಉತ್ಸಾಹವೇ ಹೋಗಿ ಬಿಡುತ್ತದೆ. ಆದರೆ ಅರ್ಪಿತಾ ದಾಸ್ (Arpita Das) ಎಂಬ ಹೆಸರಿನ ಯುವತಿಯೊಬ್ಬಳು ಗೂಗಲ್ ನಲ್ಲಿ ಕೆಲಸ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕೆಲಸ ಸಿಗುವ ಮೊದಲು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಸಂದರ್ಶನದಲ್ಲಿ ಆದ ಅವಮಾನವನ್ನು ವಿವರಿಸಿದ್ದಾಳೆ. ತನ್ನನ್ನು ಅವಮಾನಿಸಿದ ಕಂಪನಿಯಲ್ಲಿ ಸಂದರ್ಶಕರು ಹೇಳಿದ ಮಾತಿಗೆ ವಿರುದ್ಧವಾಗಿ, ಇಂದು ಸೆಡ್ಡು ಹೊಡೆಯುವಂತೆ ನಾನು ಕೆಲಸ ಗಿಟ್ಟಿಸಿಕೊಂಡೆ ಎಂದು ವಿವರಿಸಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಯುವತಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ.
@Apritha01 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನಾನು ಇತ್ತೀಚೆಗಷ್ಟೇ ಸ್ಟಾರ್ಟ್‌ಅಪ್ ಕಂಪನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದೆ. ಆ ವೇಳೆಯಲ್ಲಿ ತುಂಬಾ ಕಷ್ಟಕರವಾದ ಪ್ರಶ್ನೆಗಳನ್ನು ಕೇಳಿದ್ದರು. ಸಿಸ್ಟಮ್ ಡಿಸೈನ್ ರೌಂಡ್ ಸಮಯದಲ್ಲಿ ಇನ್‌ಫ್ರಾಸ್ಟ್ರಕ್ಚರ್ ವಿನ್ಯಾಸಗೊಳಿಸಲು, ಸಿಪಿಯು ವೆಚ್ಚವನ್ನು ಅಂದಾಜು ಮಾಡಲು, ಮೂಲತಃ ಡೇಟಾ ಸೆಂಟರ್‌ನ ಫಿಸಿಕಲ್ ಕನ್ಸ್ಟ್ರಕ್ಷನ್ ಹೊರತುಪಡಿಸಿ ಉಳಿದ ಎಲ್ಲವನ್ನೂ ನನಗೆ ಕೇಳಿದರು. ಆದರೆ ಸಂದರ್ಶಕರ ಪ್ರಶ್ನೆಗೆ ಉತ್ತರ ಕೊಡಲು ಆಗಲಿಲ್ಲ. ಈ ವೇಳೆಯಲ್ಲಿ ‘ನಿಮ್ಮಂತಹ ಜನರು ಗೂಗಲ್ ಅಥವಾ ಮೆಟಾದಂತಹ ದೊಡ್ಡ ಕಂಪನಿಗಳಿಗೆ ಎಂದಿಗೂ ಪ್ರವೇಶಿಸಲು ಸಾಧ್ಯವಾಗದ ಕಾರಣವೇ ಇದು ಈ ಎಂದು ವ್ಯಂಗ್ಯವಾಡಿದರು ಎಂದು ಹೇಳಿಕೊಂಡಿದ್ದಾಳೆ.
Was grilled by a mid-level startup interviewer in a system design round – he made me design infra, estimate CPU costs, basically everything except physically build the data center.
When I stumbled, he smirked and said, “This is why people like you won’t make it to big companies… https://t.co/fDKU3blwJS
— Arpita Das (@Arpitaaa01) July 27, 2025
ತಾನು ನಿರುತ್ಸಾಹಗೊಳ್ಳದೇ ಅವರ ಮಾತಿಗೆ ಹೇಗೆ ವಿರುದ್ಧವಾಗಿ ನಾನು ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಕಂಪನಿಯಲ್ಲಿ ತಮ್ಮ ಆನ್‌ಬೋರ್ಡಿಂಗ್, ಆ ಕಂಪನಿಯಿಂದ ತಮಗೆ ಬಂದ ವೆಲ್‌ಕಂ ಐಟಮ್ಸ್, ಅದ್ಭುತವಾದ ಗೂಗಲ್ ಪಿಕ್ಸೆಲ್ ಫೋನ್ ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ಈ ಮೂಲಕ ತನಗೆ ಅವಮಾನ ಮಾಡಿದ ಸಂದರ್ಶಕರಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾಳೆ ಈ ಯುವತಿ.
ಇದನ್ನೂ ಓದಿ:Viral: ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಜಾಲಿ ಟ್ರಿಪ್ ಹೋದ ಉದ್ಯೋಗಿ, ಮುಂದೇನಾಯ್ತು ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಸಂದರ್ಶಕರಿಗೆ ಮೂಲಭೂತ ಕೌಶಲ್ಯದ ಕೊರತೆಯಿದೆ ಎಂದಿದ್ದಾರೆ. ಇನ್ನೊಬ್ಬರು ಇಂದು ಹೆಚ್ಚಿನ ಸಂದರ್ಶಕರು ಕಲಿಯುವ ಮನೋಭಾವ ಹಾಗೂ ಉತ್ಸಾಹವನ್ನು ನೋಡುತ್ತಾರೆ. ಆದರೆ ಒಬ್ಬ ವ್ಯಕ್ತಿಯನ್ನು ಹತ್ತರಿಂದ ಹದಿನೈದು ನಿಮಿಷಗಳಲ್ಲೇ ಸಂಪೂರ್ಣವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ನಿಮಗೆ ಗೂಗಲ್ ಕೆಲಸ ಸಿಕ್ಕಿದ್ದಕ್ಕಾಗಿ ಅಭಿನಂದನೆಗಳು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಭವಿಷ್ಯದಲ್ಲಿ ನಿಮಗೆ ಆ ಸಂದರ್ಶಕನನ್ನು ಸಂದರ್ಶಿಸಲು ಅವಕಾಶ ಸಿಗುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Mon, 25 August 25