Video: 15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕನ್ ರಾಜ, ಮುಂದೇನಾಯ್ತು ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ವಿಶೇಷತೆಯಿಂದ ಗಮನ ಸೆಳೆಯುತ್ತವೆ. ಇದೀಗ ಆಫ್ರಿಕನ್ ರಾಜ ಅಬುಧಾಬಿ ವಿಮಾನ ನಿಲ್ದಾಣಕ್ಕೆ ತನ್ನ ಪರಿವಾರದೊಂದಿಗೆ ಬಂದಿಳಿದಿದ್ದು, ಈ ಆಫ್ರಿಕನ್‌ ರಾಜನ ಅದ್ಧೂರಿ ಆಗಮನವು ಎಲ್ಲರನ್ನು ಅಚ್ಚರಿ ಮೂಡಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: 15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕನ್ ರಾಜ, ಮುಂದೇನಾಯ್ತು ನೋಡಿ
ಆಫ್ರಿಕನ್ ರಾಜ
Image Credit source: Instagram

Updated on: Oct 06, 2025 | 4:41 PM

ಅಬುಧಾಬಿ, ಅಕ್ಟೋಬರ್ 06: ಯಾವುದೇ ದೇಶದ ಪ್ರಮುಖ ವ್ಯಕ್ತಿಗಳು ತಮ್ಮ ನೆರೆಯ ದೇಶಕ್ಕೆ ಭೇಟಿ ನೀಡಿದಾಗ ಅವರ ಆಗಮನವು ಅದ್ದೂರಿಯಾಗಿರುತ್ತದೆ. ಆ ದೇಶದ ಪ್ರಮುಖ ನಾಯಕರು ರಾಷ್ಟ್ರಕ್ಕೆ ಬಂದ ವ್ಯಕ್ತಿಯನ್ನು ಆತ್ಮೀಯವಾಗಿ ಸ್ವಾಗತ ಕೋರುವ ದೃಶ್ಯವು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಆಫ್ರಿಕನ್ ರಾಜನ (African King) ಆಗಮನವು ಈ ಕಾರಣದಿಂದಲೇ ಸುದ್ದಿಯಾಗಿದೆ. ಹೌದು, ಆಫ್ರಿಕನ್ ರಾಜ ಎಂಸ್ವತಿ III ತನ್ನ 15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ (Abu Dhabi airport) ಖಾಸಗಿ ಜೆಟ್‌ನಲ್ಲಿ ಬಂದಿಳಿದಿದ್ದು, ಈ ವಿಡಿಯೋ  ಸದ್ಯ ಸಖತ್‌  ವೈರಲ್ ಆಗುತ್ತಿದೆ.

ಆಫ್ರಿಕನ್ ರಾಜನ ಆಗಮನದ ದೃಶ್ಯ

fun factorss ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುಎಇ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ನಲ್ಲಿ ಆಫ್ರಿಕನ್ ರಾಜ ಮ್ಸ್ವಾಟಿ ಬಂದು ಇಳಿಯುತ್ತಿರುವುದನ್ನು ಕಾಣಬಹುದು. ಅರ್ಧಂಬರ್ಧ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಈ ಆಫ್ರಿಕನ್ ರಾಜನಿಗೆ ಅಲ್ಲಿದ್ದ ವ್ಯಕ್ತಿ ತಲೆಬಾಗಿ ನಮಸ್ಕರಿಸುತ್ತಿರುವುದನ್ನು ನೀವು ನೋಡಬಹುದು. ರಾಜ ಮ್ಸ್ವಾಟಿ ಚಿರತೆ ಚರ್ಮದ ಮಾದರಿಯ ಸಾಂಪ್ರದಾಯಿಕ ಉಡುಪನ್ನು ಧರಿಸಿದರೆ, ಪತ್ನಿಯರು ಆಕರ್ಷಕವಾದ ಆಫ್ರಿಕನ್ ಉಡುಗೆಗಳನ್ನು ಧರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ
ಗಾರ್ಬಾ ನೃತ್ಯದಲ್ಲಿ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿದ ಯುವಕರು
ಶಾರ್ಟ್ಸ್‌ ಧರಿಸಿದ್ದಕ್ಕೆ ಮಹಿಳೆಗೆ ದೇವಾಲಯದೊಳಗೆ ಪ್ರವೇಶ ನಿರಾಕರಣೆ
ಪೋಲೆಂಡ್‌ನಲ್ಲೊಬ್ಬಳು ಕಾವೇರಿ
ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ


ಆರ್ಥಿಕ ಒಪ್ಪಂದಗಳ ಕುರಿತು ಮಾತುಕತೆ

ಯುಎಇಯೊಂದಿಗೆ ಆರ್ಥಿಕ ಒಪ್ಪಂದಗಳ ಕುರಿತು ಮಾತುಕತೆ ನಡೆಸುವುದು ಈ ಭೇಟಿಯ ಮೂಲ ಉದ್ದೇಶವಾಗಿತ್ತು. ಆದರೆ ಏಕಾಏಕಿ ಖಾಸಗಿ ಜೆಟ್ ನಲ್ಲಿ ರಾಜ ಎಂಸ್ವತಿ III ಅವರು ತಮ್ಮ 15 ಪತ್ನಿಯರು, 30 ಮಕ್ಕಳು ಹಾಗೂ ತನ್ನ 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು. ರಾಜ ಸೇರಿದಂತೆ ಪತ್ನಿಯರು ಹಾಗೂ ಸೇವಕರ ಸಂಖ್ಯೆಯೂ ಹೆಚ್ಚಿದ್ದರಿಂದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮೂರು ಟರ್ಮಿನಲ್‌ಗಳನ್ನು ಮುಚ್ಚಿ ತಾತ್ಕಾಲಿಕ ಲಾಕ್‌ಡೌನ್ ಜಾರಿಗೊಳಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.

ಇದನ್ನೂ ಓದಿ:Video: ಗಾರ್ಬಾ ನೃತ್ಯದಲ್ಲಿ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿದ ಯುವಕರು

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಎಷ್ಟು ಸರಳವಾದ ವ್ಯಕ್ತಿ, ಧರಿಸಿರುವ ಉಡುಗೆಯಲ್ಲಿ ಕಂಫರ್ಟ್ಬಲ್ ಇದ್ದಂತಿದೆ ಎಂದಿದ್ದಾರೆ. ಅತ್ಯದ್ಭುತ ಅಷ್ಟು ಪತ್ನಿಯರನ್ನು ಹೇಗೆ ಸಂಭಾಳಿಸಲು ಸಾಧ್ಯ ಎಂದು ಮತ್ತೊಬ್ಬರು ಕೇಳಿದ್ದಾರೆ. ಇನ್ನೊಬ್ಬರು ಈ ವ್ಯಕ್ತಿಗಳು ಇಡೀ ಪುರುಷರಿಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Mon, 6 October 25