AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗಾರ್ಬಾ ನೃತ್ಯದಲ್ಲಿ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿದ ಯುವಕರು

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುಜರಾತ್‍ನಲ್ಲಿ ಗಾರ್ಬಾ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿರುತ್ತದೆ. ಆಕರ್ಷಕ ಉಡುಗೆಯೊಂದಿಗೆ ಎನರ್ಜಿಟಿಕ್ ಸ್ಟೆಪ್ ಈ ಗಾರ್ಬಾ ನೃತ್ಯ ನೋಡಲು ಎರಡು ಕಣ್ಣು ಸಾಲದು. ಆದರೆ ಇದೀಗ ಯುವಕರಿಬ್ಬರೂ ಗಾರ್ಬಾ ನೃತ್ಯದ ವೇಳೆ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿದ್ದಾರೆ. ಈ ಗಾರ್ಬಾ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Video: ಗಾರ್ಬಾ ನೃತ್ಯದಲ್ಲಿ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿದ ಯುವಕರು
ವೈರಲ್‌ ವಿಡಿಯೋ Image Credit source: Instagram
ಸಾಯಿನಂದಾ
|

Updated on: Oct 04, 2025 | 2:54 PM

Share

ನವರಾತ್ರಿ (Navaratri) ಹಬ್ಬವೇನೋ ಮುಗಿದಿದೆ. ಆದರೆ ಈ ನವರಾತ್ರಿ ಹಬ್ಬಕ್ಕೆ ಉತ್ತರ ಭಾರತದ ಗಾರ್ಬಾ ಹಾಗೂ ದಾಂಡಿಯಾ ನೃತ್ಯಗಳೇ ಮತ್ತಷ್ಟು ರಂಗು ತರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ತರುಣ ತರುಣಿಯರು ಅತ್ಯದ್ಭುತವಾಗಿ ಗಾರ್ಬಾ ನೃತ್ಯ ಮಾಡುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮುಂಬೈ ಯುವಕರ ಗಾರ್ಬಾ ನೃತ್ಯದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, 2025 ರ ಏಷ್ಯಾಕಪ್ ಸಮಯದಲ್ಲಿ ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ಅನುಕರಿಸಿದ ನಡೆಯನ್ನು ಈ ಯುವಕರಿಬ್ಬರೂ ಮರುಸೃಷ್ಟಿಸಿದ್ದಾರೆ. ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿ ಇಂಟರ್ನೆಟ್‌ನಲ್ಲಿ ಅಲೆ ಸೃಷ್ಟಿಸಿದ್ದಾರೆ.

ಯುವಕರಿಬ್ಬರ ಆಕರ್ಷಕ ಗಾರ್ಬಾ ನೃತ್ಯ

ಗಾರ್ಬಾ ನೃತ್ಯದ ವೇಳೆ ಯುವಕರಿಬ್ಬರೂ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿರುವ ವಿಡಿಯೋವನ್ನು ಕ್ರಿಕೆಟಿಗ ರಾಜ್ ಗುಪ್ತಾ (raj-lifts09) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವಕರಿಬ್ಬರೂ ಎನರ್ಜಿಟಿಕ್ ಆಗಿ ಗಾರ್ಬಾ ನೃತ್ಯ ಪ್ರದರ್ಶಿಸುವುದನ್ನು ಕಾಣಬಹುದು. ಈ ವೇಳೆ ಏಷ್ಯಾಕಪ್ ಸಮಯದಲ್ಲಿ ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ನ್ನು ಗಾರ್ಬಾನೃತ್ಯದ ನಡುವೆ ಮರುಸೃಷ್ಟಿಸಿ ಎಲ್ಲರ ಗಮನ ಸೆಳೆದಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಮಾಲ್‌ನಲ್ಲಿ ಗೊಂಬೆಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ಪುಟಾಣಿ
Image
ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ
Image
ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು
Image
ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಮಗನ ಸಂಭ್ರಮ ಹೇಗಿತ್ತು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by RAJ GUPTA (@raj_lifts09)

ಇದನ್ನೂ ಓದಿ:Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ಈ ವಿಡಿಯೋ ಮೂವತ್ತೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಏಷ್ಯಾಕಪ್ 2025 ರ ಹೈ ಲೈಟ್ ವಿಚಾರವಿದು ಎಂದಿದ್ದಾರೆ. ಮತ್ತೊಬ್ಬರುಇದು ಕ್ರಿಕೆಟಿಗರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಏಷ್ಯಾ ಕಪ್ ನೊಂದಿಗೆ ಗಾರ್ಬಾ ರಿಮಿಕ್ಸ್ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ