Video: ಪೋಲೆಂಡ್‌ನಲ್ಲೊಬ್ಬಳು ಕಾವೇರಿ; ವಿಸ್ತುಲ ನದಿಯ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ವಿವರಣೆ
ನಾಗತಿಹಳ್ಳಿ ಚಂದ್ರಶೇಖರ ಸಾಹಿತಿ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲದೆ ಪ್ರವಾಸಪ್ರಿಯರು ಹೌದು. ಊರು-ಕೇರಿ, ದೇಶ ವಿದೇಶ ಸುತ್ತುತ್ತಾ ಅಲ್ಲಿನ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇತ್ತೀಚಿಗೆ ಅವರು ಪೊಲೇಂಡ್ ದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಜೀವನಾಡಿ ನದಿಯಾಗಿರುವ ವಿಸ್ತುಲ ನದಿಯ ಬಗ್ಗೆ ಸೊಗಸಾದ ವಿವರಣೆಯನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನದಿಗಳು ಜಲ ಮೂಲ ಮಾತ್ರವಲ್ಲದೆ ಇದು ಕೃಷಿ, ಜೀವನೋಪಾಯ ಮತ್ತು ಜೀವನಾಡಿ ಅಂತಾನೇ ಹೇಳಬಹುದು. ಪ್ರತಿಯೊಂದು ಊರು, ದೇಶದಲ್ಲೂ ನದಿಗಳು ಇದ್ದೇ ಇರುತ್ತವೆ. ಈ ನದಿಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿರುತ್ತವೆ. ನಾವು ಕನ್ನಡಿಗರಿಗೆ ಕಾವೇರಿ ನದಿ ಜೀವ ನದಿ ಇದ್ದ ಹಾಗೆ ಪೋಲೆಂಡ್ ದೇಶದಲ್ಲೂ ಒಬ್ಬಳು ಕಾವೇರಿ ಇದ್ದಾಳೆ. ಇದನ್ನು ಒಂದು ಲೆಕ್ಕದಲ್ಲಿ ಪೋಲೆಂಡ್ ದೇಶದ ಕಾವೇರಿ ನದಿ ಅಂತಾನೇ ಹೇಳಬಹುದು. ಇದು ಇಲ್ಲಿನ ಜನರ ಜೀವ ನದಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ವಿವರಿಸಿದ್ದಾರೆ. ಪ್ರವಾಸ ಪ್ರಿಯರಾದ ನಾಗತಿಹಳ್ಳಿ ಚಂದ್ರಶೇಖರ (Nagathihalli Chandrashekar) ತಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿಶೇಷತೆಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇತ್ತೀಚಿಗೆ ಅವರು ಪೋಲೆಂಡ್ ದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಜೀವನದಿ ಅಂತಾನೇ ಕರೆಯಲ್ಪಡುವ ವಿಸ್ತುಲ (Vistula River) ನದಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೋಲೆಂಡ್ ದೇಶದ ಜೀವ ನದಿ ವಿಸ್ತುಲ:
ನಾಗತಿಹಳ್ಳಿ ಚಂದ್ರಶೇಖರ್ ಒಂದೊಂದು ಊರು, ದೇಶಗಳ ವಿಶೇಷತೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಅವರು ಪೋಲೆಂಡ್ ದೇಶದ ಜೀವ ನದಿ ಅಂತಾನೇ ಕರೆಯಲ್ಪಡುವ ವಿಸ್ತುಲ ನದಿಯ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಈ ವಿಡಿಯೋವನ್ನು ನಾಗತಿಹಳ್ಳಿ ಚಂದ್ರಶೇಖರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನದಿಗಳು ನನಗಿಷ್ಟ, ಪೋಲೆಂಡ್‌ನಲ್ಲೊಬ್ಬಳು ಕಾವೇರಿ. ಹೆಸರು ವಿಸ್ತುಲ, ಪೋಲೆಂಡ್‌ನ ಜನಪದ, ಚರಿತ್ರೆ ಮತ್ತು ಐಹಿತ್ಯಗಳ ಭಾಗ ಇವಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ನದಿಗಳು ನನಗಿಷ್ಟ. ಪೋಲೆಂಡ್ ನಲ್ಲೊಬ್ಬಳು “ಕಾವೇರಿ”. ಹೆಸರು “ವಿಸ್ತುಲ”. ಪೋಲೆಂಡ್ ನ ಜನಪದ, ಚರಿತ್ರೆ ಮತ್ತು ಐತಿಹ್ಯಗಳ ಭಾಗ ಇವಳು. pic.twitter.com/MWd3q6kOY9
— Nagathihalli Chandrashekara (@NomadChandru) October 3, 2025
ವಿಡಿಯೋದಲ್ಲಿಅವರು ಸ್ವಚ್ಛಂದವಾಗಿ ಹರಿಯುತ್ತಿರುವ ವಿಸ್ತುಲ ನದಿಯ ಬಗ್ಗೆ ಸೊಗಸಾದ ವಿವರಣೆ ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ʼಈ ನದಿಯ ಹೆಸರು ವಿಸ್ತುಲ.ಇದು ದಕ್ಷಿಣದ ಝಕೋಪೇನ್‌ನಲ್ಲಿ ಹುಟ್ಟಿ, ಉತ್ತರಾಭಿಮುಖವಾಗಿ ಹರಿದು, ಉತ್ತರದ ಬಾಲ್ಟಿಕಾ ಸಮುದ್ರವನ್ನು ಸೇರಿತ್ತದೆ. ಇದು ಒಂದು ರೀತಿಯಲ್ಲಿ ಪೋಲೆಂಡ್ ದೇಶದ ಕಾವೇರಿ ನದಿ ಅಂತಾನೇ ಹೇಳಬಹುದು. ಯಾಕಂದ್ರೆ ಈ ನದಿ ಇಲ್ಲಿನ ಜೀವನಾಡಿ, ಜೀವನ ನದಿ. ಸುಮಾರು 1047 ಕಿಮೀ ಸಂಚರಿಸಿ, ಇಡೀ ಪೋಲೆಂಡ್ ದೇಶವನ್ನು ಇದು ಆಕ್ರಮಿಸಿಕೊಂಡಿದೆ. ಇದು ಇಲ್ಲಿನ ಬಹುಮುಖ್ಯ ನದಿʼ ಎಂದು ಸೊಗಸಾಗಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳು, ಇದು ಸನಾತನ ಧರ್ಮದ ಹೊಸ ಅಧ್ಯಾಯ
ಅಕ್ಟೋಬರ್ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನದಿ ಬಹಳ ಶುದ್ಧವಾಗಿದೆ, ಅಲ್ಲಿನ ಆಡಳಿತಕ್ಕೊಂದು ಸಲಾಂʼ ಎಂದು ಹೇಳಿದ್ದಾರೆ, ಇನ್ನೊಬ್ಬ ಬಳಕೆದಾರರು ʼಯುರೋಪಿಯನ್ ದೇಶಗಳು ನದಿಗಳನ್ನು ಗೌರವಿಸುತ್ತದೆ. ಅದಕ್ಕೆ ಈ ಸ್ಪಟಿಕ ಸ್ಪಷ್ಟದಂತೆ ಹರಿಯುವ ಈ ನದಿಯೇ ಸಾಕ್ಷಿʼ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








