Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್​ ಎರಚಿದ ಮಹಿಳೆಯ ಬಂಧನ

|

Updated on: Aug 19, 2023 | 11:14 AM

Arrest: ಮನುಷ್ಯರಿಗೆ ತಮ್ಮ ಮನಸ್ಸೇ ತಮಗೆ ಅರ್ಥವಾಗದಷ್ಟು ಸಂಕೀರ್ಣ, ಇನ್ನು ಸಾಕುಪ್ರಾಣಿಗಳು ಅದರಲ್ಲೂ ನಾಯಿ ಬೆಕ್ಕು ಎನ್ನುವ ಬದ್ಧ ವೈರಿಗಳಿಗೆ ಬುದ್ಧಿಮಾತು ಹೇಳಲಾದೀತೆ? ತನ್ನ ಬೆಕ್ಕನ್ನು ಪಕ್ಕದ ಮನೆಯ ನಾಯಿ ಪದೇಪದೇ ಬೆನ್ನಟ್ಟುತ್ತಿದೆ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಮಲಗಿದ ನಾಯಿಯ ಮೇಲೆ ಎಸಿಡ್ ಎರಚಿದ್ದಾಳೆ.

Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್​ ಎರಚಿದ ಮಹಿಳೆಯ ಬಂಧನ
1. ಪ್ರಾತಿನಿಧಿಕ ಚಿತ್ರ, 2. ಎಸಿಡ್​ ಎರಚಿಸಿಕೊಂಡು ಓಡಾಡುತ್ತಿದ್ದ ನಾಯಿ
Follow us on

Mumbai : ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಮಹಿಳೆಯೊಬ್ಬಳು ಎಸಿಡ್ ಎರಚಿದ ಅಮಾನುಷ ಘಟನೆ ಮುಂಬೈನಲ್ಲಿ ನಡೆದಿದೆ. ಬುಧವಾರದಂದು 35 ವರ್ಷದ ಶಬಿಸ್ತಾ ಸುಹೇಲ್ ಅನ್ಸಾರಿ ಎಂಬಾಕೆ ನೆರೆಮನೆಯ ಸಾಕುನಾಯಿ ಬ್ರೌನಿ ಮಲಗಿದ ಹೊತ್ತಿನಲ್ಲಿ ಈ ಕೃತ್ಯ ಎಸಗಿದ್ದಾಳೆ. ತನ್ನ ಬೆಕ್ಕನ್ನು ಆ ನಾಯಿಯು ಅನೇಕ ಸಲ ಬೆನ್ನಟ್ಟುತ್ತಿರುವುದನ್ನು ಪೋಷಕರ ಗಮನಕ್ಕೆ ತಂದ ಮೇಲೂ ನಾಯಿಯ ಪೋಷಕರು ನಿರ್ಲಕ್ಷಿಸಿದ್ದಾರೆ ಎನ್ನುವ ಕಾರಣಕ್ಕೆ ನಾಯಿಯು ಮಲಗಿದ ವೇಳೆ ಈಕೆ ಎಸಿಡ್ ದಾಳಿ (Acid Attack) ನಡೆಸಿದ್ದಾಳೆ. ಪ್ರಾಣಿಹಿಂಸೆಯಡಿಯಲ್ಲಿ ಪೊಲೀಸರು ಈ ಮಹಿಳೆಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Viral Video: ‘ನನ್ನದು ವಿಶೇಷ ಕಣ್ಣು ಗೊತ್ತಾ?” ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಯು ನೋವಿನಿಂದ ದಿಕ್ಕೆಟ್ಟು ಓಡಾಡುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ದಾಳಿಯ ನಂತರ ವಸತಿಗೃಹದ ಮ್ಯಾನೇಜರ್ ಬಾಳಾಸಾಹೇಬ್ ತುಕಾರಾಂ ಗಾಯಗೊಂಡ ನಾಯಿಯನ್ನು ಸಂಜೆ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಈ ನಾಯಿ ಒಂದು ಕಣ್ಣನ್ನು ಕಳೆದುಕೊಂಡಿದೆ.

ಎಸಿಡ್​ ಎರಚಿಸಿಕೊಂಡ ನಾಯಿ ಕಂಗಾಲಾಗಿ ಓಡಾಡುತ್ತಿರುವುದು

ತುಕಾರಾಂ ಸಿಸಿಟಿವಿಯ ದೃಶ್ಯಾವಳಿಗಳ ಆಧಾರದ ಮೇಲೆ ಶಬಿಸ್ತಾಳ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಭಾರತಿಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 429 ಮತ್ತು 11 (1) ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೆಕ್ಷನ್ 119 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಅನ್ನು ಆ. 18ರಂದು ಟ್ವೀಟ್ ಮಾಡಲಾಗಿದೆ. 1,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಆ ಮಹಿಳೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಬಾಳೆಹಣ್ಣಿಗೆ ಇನ್ನುಮುಂದೆ ಕರ್ಮಫಲವೆಂದು ಮರುನಾಮಕರಣ ಮಾಡಬೇಕೆ? 

ಸಾಕುಪ್ರಾಣಿಗಳೇ ಆದರೂ ಅವುಗಳು ಸದಾ ನಮ್ಮ ನಿಯಂತ್ರಣದಲ್ಲಿ ಇರಲಾರವು. ಮನುಷ್ಯರ ಸ್ವಭಾವಗಳು ಹೇಗೆ ಭಿನ್ನವೋ ಹಾಗೆಯೇ ಪ್ರಾಣಿಗಳ ಸ್ವಭಾವದಲ್ಲಿಯೂ ಭಿನ್ನತೆ ಇರುತ್ತದೆ. ಅಪರೂಪಕ್ಕೆ ಬೆಕ್ಕು ನಾಯಿಗಳು ಸ್ನೇಹಿತರಂತೆ ಇರುತ್ತವೆ. ಉಳಿದಂತೆ ನಾಯಿಗಳಿಗೆ ಬೆಕ್ಕನ್ನು ಕಂಡರೆ ವೈರತ್ವವೇ. ಆದರೆ ಮಲಗಿದ ನಾಯಿಯ ಮೇಲೆ ಎಸಿಡ್ ಎರಚುವ ಮಟ್ಟಿಗೆ ಈ ಮಹಿಳೆ ಇಳಿಯಬಾರದಾಗಿತ್ತು. ಬೆಕ್ಕನ್ನು ಸಾಕಿ ಕೂಡ ಈಕೆ ಕಲಿತ ಮಾನವೀಯತೆ ಏನು? ಎನ್ನುವ ಪ್ರಶ್ನೆ ಇಲ್ಲಿ ಉಂಟಾಗುತ್ತದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 10:29 am, Sat, 19 August 23