
ಕೇರಳ, ಜುಲೈ 07: ಕೇರಳದ ( Kerala) ಮಹಿಳಾ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ. ಅಷ್ಟಕ್ಕೂ ಈ ಲೇಡಿ ಸಿಂಗಂ ಮಾಡಿದ ಕೆಲಸ ಏನು ಗೊತ್ತಾ? ಇಲ್ಲಿದೆ ನೋಡಿ. ಕೇರಳದಲ್ಲಿ ಅರಣ್ಯ ಬೀಟ್ ಅಧಿಕಾರಿಯೊಬ್ಬರು ದೈತ್ಯ ಕಾಳಿಂಗ ಸರ್ಪವನ್ನು (king cobra) ರಕ್ಷಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ರಾಜನ್ ಮೇಧೇಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಪರುತಿಪಲ್ಲಿ ವಲಯದಲ್ಲಿ ಈ ಕಾರ್ಯಾಚರಣೆಯನ್ನು ಅರಣ್ಯ ಬೀಟ್ ಅಧಿಕಾರಿ ಜಿಎಸ್ ರೋಶ್ನಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪರುತಿಪಲ್ಲಿಯ ಹೊಳೆಯ ಒಂದು ಬದಿಯಲ್ಲಿ ಸಿಲುಕಿಕೊಂಡಿದ್ದ ದೈತ್ಯ ಕಾಳಿಂಗವನ್ನು ಕೋಲು ಬಳಸಿ, ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋವನ್ನು ರಾಜನ್ ಮೇಧೇಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ಹೀಗೆ ಬರೆದುಕೊಂಡಿದ್ದಾರೆ 18 ಅಡಿ ಉದ್ದದ ಕಿಂಗ್ ಕೋಬ್ರಾವನ್ನು ಕೇರಳದ ಪರುತಿಪಲ್ಲಿ ರೇಂಜ್‌ನ ಫಾರೆಸ್ಟ್ ಬೀಟ್ ಆಫೀಸರ್ ರೋಶ್ನಿ ನೋಡಿ, ರಕ್ಷಣೆ ಮಾಡಿದ್ದಾರೆ. ಈ ಕಿಂಗ್ ಕೋಬ್ರಾ ಕೇರಳದ ತಿರುವನಂತಪುರದ ಪೆಪ್ಪರಾದ ಅಂಚುಮರುತುಮೂಟ್‌ನ ವಸತಿ ಪ್ರದೇಶದಿಂದ ಕಂಡು ಬಂದಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೇರ್ ಕ್ಲಿಪ್, ಚಾಕು ಬಳಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಸೇನೆಯ ವೈದ್ಯ
கேரளா – திருவனந்தபுரம் ; குடியிருப்புப் பகுதியில் அருகில் உள்ள ஓடையில் பதுங்கியிருந்த 18 அடி நீளமுள்ள ராஜநாகத்தை
பருத்திப்பள்ளி ரேஞ்சின் வனப் பிரிவு பெண் அதிகாரி ரோஷ்னி அசால்டாக பிடித்த காட்சி. pic.twitter.com/wW0ey8dlmZ
— Kᴀʙᴇᴇʀ – தக்கலை கபீர் (@Autokabeer) July 7, 2025
ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಸರೀಸೃಪಗಳಲ್ಲಿ ಕಾಳಿಂಗ ಸರ್ಪ ಒಂದು, ಆದರೆ ಇದನ್ನು ಹಿಡಿಯುವುದು ಅಷ್ಟೊಂದು ಸುಲಭವಲ್ಲ, ಆದರೆ ಮಹಿಳಾ ಅಧಿಕಾರಿ ರೋಶ್ನಿ ಅವರು ಇದಕ್ಕೆ ಯಾವುದೇ ತೊಂದರೆ ಆಗದಂತೆ ಅದನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಇನ್ನು ಕಾರ್ಯಚರಣೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವೀಡಿಯೊ 54,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಈ ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ. ಅಧಿಕಾರಿ ರೋಶ್ನಿ ಅವರ ಧೈರ್ಯ ಮತ್ತು ತಾಳ್ಮೆಗೆ ನಮ್ಮ ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಇದು ಅನೇಕರಿಗೆ ಸ್ಫೂರ್ತಿ ಮೇಡಂ, ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಅವರ ಕೌಶಲ್ಯಗಳಿಗೆ ಹ್ಯಾಟ್ಸ್ ಆಫ್ ಎಂದು ಹೇಳಿದ್ದಾರೆ. ಇದು ಉತ್ತಮ ಕೆಲಸ, ಇನ್ನಷ್ಟು ಹೀಗೆ ಕೆಲಸ ಮಾಡುವ ಧೈರ್ಯ ನಿಮ್ಮಲ್ಲಿ ಇರಲಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ