ಸಿಂಗಾರ ಸಿರಿಯೇ ನಿನಗಾಗಿ ನನ ಕೈಯ್ಯ ಬಾಚಣಿಕೆ ಮಾಡೇನ; 4 ಲಕ್ಷ ಜನಮನಗೆದ್ದ ಈ ವಿಡಿಯೋ

Dogs Lover : ಅಲಾ ನಾಯಿಯೇ! ಮನುಷ್ಯನನ್ನು ಅನುಕರಿಸಲು ಕಲಿತೆಯಾ? ನೆಟ್ಟಿಗರು ಬಾಯಿಬಿಟ್ಟುಕೊಂಡು ನೋಡುತ್ತಿದ್ದಾರೆ. ಯಾರನ್ನು ಅಂತ ಕೇಳಬೇಡಿ. ನೀವೇ ನೋಡಿ ವಿಡಿಯೋದಲ್ಲಿ.

ಸಿಂಗಾರ ಸಿರಿಯೇ ನಿನಗಾಗಿ ನನ ಕೈಯ್ಯ ಬಾಚಣಿಕೆ ಮಾಡೇನ; 4 ಲಕ್ಷ ಜನಮನಗೆದ್ದ ಈ ವಿಡಿಯೋ
Adorable Video Of Dog Caressing Woman's Hair Will Melt Your Heart
Updated By: ಶ್ರೀದೇವಿ ಕಳಸದ

Updated on: Nov 09, 2022 | 6:02 PM

Viral Video : ಶ್​! ನಾಯಿ ಪ್ರೀತಿಯಲ್ಲಿ ಮುಳುಗಿದೆ. ಹೌದು ಈ ವಿಡಿಯೋ ನೋಡಿದ ಯಾರಿಗೂ ಈ ಅನಿಸಿಕೆ ಹೊಮ್ಮಲು ಸಾಕು. ತನ್ನ ಪಾಡಿಗೆ ಈ ಯುವತಿ ಸ್ಕ್ರೀನ್ ನೋಡುತ್ತ ಮುಳುಗಿದ್ದಾಳೆ. ಆಕೆಯ ಮುಗುರುಳು ಕಣ್ಣಬಳಿ ಜಾರುತ್ತಿದ್ದಂತೆ ನಾಯಿ ಆಕೆಯ ಆ ಕೂದಲನ್ನು ಕೈಯಿಂದ ಹಿಂದೆ ಸರಿಸುತ್ತಿದೆ. ಎಂಥ ನಿಧಾನದಲ್ಲಿ, ಎಂಥ ನಯವಾಗಿ. ಇದರ ನಯವಂತಿಕೆಗೆ, ಹಗೂರ ಸ್ಪರ್ಶಕ್ಕೆ ಯುವತಿ ಕರಗಿ ಹೋಗಿದ್ದಾಳೆ. ನೋಡಿ ಈ ವಿಡಿಯೋ ನೋಡಿ.

ನಾಲ್ಕೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 21,400ಕ್ಕಿಂತಲೂ ಹೆಚ್ಚು ಜನ ಇದನ್ನು ಮೆಚ್ಚಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಮನುಷ್ಯನನ್ನು ಅನುಕರಿಸಲು ಕಲಿತಿದೆ ಈ ನಾಯಿ! ಎಂದಿದ್ದಾರೆ ಒಬ್ಬರು. ಖಂಡಿತ ಇದು ಈ ಯುವತಿಯೊಂದಿಗೆ ಪ್ರೀತಿಯಲ್ಲಿ ಕರಗಿ ಹೋಗುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಮಧುರವಾದ ದೃಶ್ಯವಿದು, ಅದಕ್ಕೇ ನಾಯಿಗಳನ್ನು ಸಾಕಬೇಕು ಎಂದಿದ್ದಾರೆ ಇನ್ನೂ ಒಬ್ಬರು.

ಅನೇಕರು ತಮ್ಮ ತಮ್ಮ ಮನೆಯ ನಾಯಿ, ಪ್ರಾಣಿಗಳ ವಿಡಿಯೋಗಳನ್ನು ಟ್ವೀಟ್ ಮಾಡಿ ಪ್ರಾಣಿಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಮನೆಯ ನಾಯಿಯೂ ಇಷ್ಟು ಸೂಕ್ಷ್ಮದಲ್ಲಿ ನಿಮ್ಮೊಂದಿಗೆ ಸ್ಪಂದಿಸಿದ ನೆನಪಿದೆಯೇ? ನಾವು ಅವುಗಳನ್ನು ಹೇಗೆ ನೋಡಿಕೊಳ್ಳುತ್ತೇವೆ ಅವೂ ನಮ್ಮನ್ನು ಹಾಗೇ ನೋಡಿಕೊಳ್ಳುತ್ತವೆ.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:58 pm, Wed, 9 November 22