60 ಸೆಕೆಂಡುಗಳಲ್ಲಿ 7 ಹೃದಯಗಳನ್ನು ಈ ಚಿತ್ರದಲ್ಲಿ ಖಂಡಿತ ಹುಡುಕುತ್ತೀರಿ
Optical Illusion : ಅಮೆರಿಕದ ಜಿಮ್ ವಾರೆನ್ ಈ ಚಿತ್ರದ ಕಲಾವಿದರು. ಮೋಡದಲ್ಲಿ ಕೊಳದಲ್ಲಿ, ಮರಗಳಲ್ಲಿ ಹೀಗೆ ಎಲ್ಲೆಲ್ಲೂ ಪ್ರೇಮವೇ ತುಂಬಿ ತುಳುಕುತ್ತಿದೆ. ನಿಮ್ಮ ಸಮಯ ಈಗ ಆರಂಭ. ಒಂದು ನಿಮಿಷದಲ್ಲಿ 7 ಹೃದಯಗಳನ್ನು ಪತ್ತೆ ಹಚ್ಚಿ.

Optical Illusion : ಇತ್ತೀಚೆಗೆ ಇಂಥ ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರಗಳು ಬಹಳ ಕಷ್ಟಕರವಾಗಿರುತ್ತವೆ ಎಂದು ನೆಟ್ಟಿಗರು ಬೇಸರಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಸರಳವಾದ ಚಿತ್ರಗಳನ್ನು ಕೊಡಿ ಎನ್ನುತ್ತಿದ್ದಾರೆ. ಹಾಗಾಗಿ ಈ ಸಂಜೆಗೆ ಪ್ರಶಾಂತವಾದ ಈ ನದೀತಟದ ಚಿತ್ರವನ್ನು ನಿಮಗಾಗಿ ಕೊಡಲಾಗುತ್ತಿದೆ. ಬೆಟ್ಟ, ಕೊಳ, ಆಕಾಶ, ಗಿಡಮರ ಹೀಗೆ ಎಲ್ಲೆಲ್ಲೂ ಹೃದಯಗಳು ಅಡಗಿವೆ. ಆ ಹೃದಯಗಳ ಆಕಾರವನ್ನು ನೀವು ಪತ್ತೆ ಹಚ್ಚಬೇಕಿದೆ. ಒಂದು ನಿಮಿಷದಲ್ಲಿ ಒಟ್ಟು 7 ಹೃದಯಗಳನ್ನು ಹುಡುಕಬೇಕು.

Optical Illusion Can You Find All 7 Hearts In This Picture Within 60 Seconds
ಈ ಚಿತ್ರದ ಕಲಾವಿದರು ಅಮೆರಿಕದ ಜಿಮ್ ವಾರೆನ್. ಕೆಲವರು ಇದೂ ಕೂಡ ಕಷ್ಟವಾಗಿದೆ ಎನ್ನುತ್ತಿದ್ಧಾರೆ. ನಮಗೆ ಅನ್ನಿಸಿದಂತೆ ಈತನಕ ಕೊಟ್ಟ ಇಂಥ ಚಿತ್ರಗಳ ಪೈಕಿ ಇದು ಅತ್ಯಂತ ಸರಳವಾಗಿದೆ. ಹಾಗಿದ್ದರೆ ನಿಮ್ಮ ಮೆದುಳಿಗೂ, ಕಣ್ಣಿಗೂ ಗುದ್ದಾಟ ಶುರುವಾಗಲಿ.
ಕೆಲವರಿಗೆ ಕೊಟ್ಟ ಅವಧಿಯಲ್ಲಿ ಕಂಡುಹಿಡಿಯಲು ಆಗಿಲ್ಲ. ಮತ್ತೂ ಒಂದು ನಿಮಿಷ ಹೆಚ್ಚಿಗೆ ತೆಗೆದುಕೊಂಡು ಅಂತೂ 5 ಹೃದಯಗಳನ್ನು ಗುರುತಿಸಿದ್ದಾರೆ. ಉಳಿದವರು ಕೈಚೆಲ್ಲಿ ಕುಳಿತಿದ್ದಾರೆ. ನಿಮ್ಮ ಹುಡುಕಾಟ ಶುರುವಾಗಿದೆಯಾ?
ಉತ್ತರ ಇಲ್ಲಿದೆ
ಹಂಸಗಳು, ಮೋಡಗಳು, ಮರದ ಟೊಂಗೆಗಳು, ಬೆಟ್ಟಗಳು, ಕೊಳಗಳು, ಬಂಡೆಗಳು, ಬಲೂನುಳು. ಎಲ್ಲದರಲ್ಲಿಯೂ ಹೃದಯ ಸಿಕ್ಕಿರಬೇಕಲ್ಲ?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:55 pm, Wed, 9 November 22