AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೂವರೆ ವರ್ಷದ ಹೆಣ್ಣುಮಗುವಿನ ಈ ರೋಪ್​ಸ್ವಿಂಗ್​ ವಿಡಿಯೋ ಈಗ ವೈರಲ್

Girl Child Swings from a Mountain : ನೆಗೆಯಬೇಡ, ಹಾರಬೇಡ, ಓಡಬೇಡ ಎಂದು ಈಕೆಯ ಪೋಷಕರು ಹೇಳುವುದೇ ಇಲ್ಲ. ಯಾಕೆ ಎಂದು ತಿಳಿದುಕೊಳ್ಳಬೇಕೆ? ಓದಿ ಮತ್ತು ಈ ವಿಡಿಯೋ ನೋಡಿ. 38 ಮಿಲಿಯನ್​ ಜನ ಇದನ್ನು ಮೆಚ್ಚಿದ್ಧಾರೆ.

ಮೂರೂವರೆ ವರ್ಷದ ಹೆಣ್ಣುಮಗುವಿನ ಈ ರೋಪ್​ಸ್ವಿಂಗ್​ ವಿಡಿಯೋ ಈಗ ವೈರಲ್
3 year old swings from a mountain internet
TV9 Web
| Updated By: ಶ್ರೀದೇವಿ ಕಳಸದ|

Updated on:Nov 09, 2022 | 5:06 PM

Share

Viral Video : ಮೂರೂವರೆ ವರ್ಷದ ಈ ಹೆಣ್ಣುಮಗುವಿನ ಹೆಸರು ಸೈಲಾ. ಈಕೆಯ ಅಪ್ಪ ಅಮ್ಮ ಮೈಕ್​ ಸ್ಮೈಲಿ ಮತ್ತು ಜಾನೆಲ್ಲೆ ಸ್ಮೈಲಿ. ಈ ದಂಪತಿ ವೃತ್ತಿಪರ ಪರ್ವತಾರೋಹಿಗಳು. ಇದೀಗ ಅಪ್ಪಅಮ್ಮನ ಹಾದಿಯಲ್ಲಿಯೇ ಮಗಳು ಸೈಲಾ ಸಾಗುತ್ತಿದ್ದಾಳೆ. ಇಷ್ಟು ಎತ್ತರದ ಪರ್ವತದಿಂದ ರೋಪ್​ ಸ್ವಿಂಗ್ ಮಾಡುತ್ತಿರುವ ಈ ಪುಟಾಣಿಯ ವಿಡಿಯೋ ನೋಡಿ ನೆಟ್ಟಿಗರಂತೂ ಬಾಯಿಬಿಟ್ಟು ನೋಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸುತ್ತಾರೆ. ಜೋರಾಗಿ ಓಡದಂತೆ, ಕುಣಿಯದಂತೆ, ನೆಗೆಯದಂತೆ, ಹಾರದಂತೆ ಹೀಗೆ. ಆದರೆ ಈ ಮಗುವಿನ ವಿಷಯದಲ್ಲಿ ಎಲ್ಲವೂ ಉಲ್ಟಾ. ಏಕೆಂದರೆ ಇದು ಹುಟ್ಟಿರುವುದೇ ಸಾಹಸಪ್ರಿಯ ಅಪ್ಪ ಅಮ್ಮನ ಹೊಟ್ಟೆಯಲ್ಲಿ. ತಮ್ಮ ಮಗುವಿನ ಈ ವಿಡಿಯೋ ಹಾಕಿದ ಪೋಷಕರು, ‘ನಮ್ಮ ಮಗಳು ಸೈಲಾ ಈಗಾಗಲೇ ಸಣ್ಣಪುಟ್ಟ ರೋಪ್​ಸ್ವಿಂಗ್ ಮಾಡಿದ್ದಾಳೆ. ಈ ಚಟುವಟಿಕೆ ಈಕೆಗೆ ಬಹಳ ಇಷ್ಟ. ಇದೀಗ ಇವಳ ಈ ಹೊಸ ವಿಡಿಯೋ ನೋಡಿ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ’ ಎಂದು ಒಕ್ಕಣೆ ಬರೆದಿದ್ಧಾರೆ ಈ ವಿಡಿಯೋಗೆ. ​

ಈಗಾಗಲೇ 38 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 9 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ‘ಭಯ ಎನ್ನುವುದು ನಮ್ಮ ಪೋಷಕರಿಂದಲೇ ಬಂದಿರುವಂಥದ್ದು, ಆನುವಂಶಿಕವಾಗಿ. ಆದ್ದರಿಂದ ಹೀಗೆ ಮಕ್ಕಳನ್ನು ಇಂಥ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಆ ಭಯವನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಸಬೇಕು.’ ಎಂದಿದ್ಧಾರೆ ಒಬ್ಬರು. ‘ಇವಳು ಭಯವನ್ನು ಮೀರಿ ಸಂತೋಷದಿಂದ ತೂಗಾಡುತ್ತಿದ್ದಾಳೆ, ಮತ್ತಷ್ಟು ವಿಡಿಯೋಗಳನ್ನು ನೋಡಲು ಬಯಸುತ್ತೇನೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ಅತ್ಯಂತ ಅದ್ಭುತ, ನಿಮ್ಮ ಮಗಳು ನಿಮ್ಮಂಥ ಪೋಷಕರನ್ನು ಪಡೆದಿದ್ದು ಅದೃಷ್ಟಶಾಲಿ’ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:05 pm, Wed, 9 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್