Cat : ಲೈಕ್ಸ್ ಶೇರ್ ಕಮೆಂಟಿಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ನಿನ್ನೆಯಷ್ಟೇ ನೀವೆಲ್ಲಾ ರಾಜಸ್ಥಾನದ ಸಾಹಸೀ ಯುವಕನಿಗೆ ಬುದ್ಧಿ ಹೇಳಿದಿರಿ. ಈಗ ಈ ಇಬ್ಬರೂ ಒಂಟಿಗಾಲಿನ ಸಾಹಸಿಗರಿಗೆ (Adventure) ಏನು ಹೇಳುತ್ತೀರಿ. ನಾಲ್ಕು ಕಾಲಿನ ಸೊಕ್ಕಿನ ಮುದ್ದುವಿನ ಈ ಸಾಹಸ ನೋಡಿ. ಹಾಗೆಯೇ ಆ ಜಂಭದ ಕೋಳಿಯನ್ನೂ. ಬ್ಯಾಲೆನ್ಸ್ ತಪ್ಪಿದರೆ ನೇರ ಬೆಕ್ಕಿನ ಬಾಯಿಗೆ ಕೋಳಿ? ಈ ವಿಡಿಯೋ ನೋಡಿ ನೆಟ್ಟಿಗರಂತೂ ಅಚ್ಚರಿಯಿಂದ ಬಿದ್ದುಬಿದ್ದು ನಗುತ್ತಿದ್ದಾರೆ.
ಇವುಗಳಿಗೆ ಹೀಗೆ ತರಬೇತಿ ಕೊಟ್ಟವರು ಯಾರು? ಅವು ಹೀಗೆ ತರಬೇತಿಗೆ ಒಳಪಡಬೇಕಾದರೆ ಇವುಗಳಿಗೆ ಏನು ಕೊಟ್ಟು ವಶೀಕರಿಸಿಕೊಂಡಿದ್ದಾರೆ? ಈ ಇಬ್ಬರೂ ಸಾಹಸಿಗರು ಎಲ್ಲಿ ವಾಸಿಸುವುದು? ಅಂತೆಲ್ಲ ಪ್ರಶ್ನಿಸಿದ್ದಾರೆ ನೆಟ್ಟಿಗರು. ಇದೆಲ್ಲ ಎಡಿಟೆಡ್ ವಿಡಿಯೋ ಸುಮ್ಮನೇ ಲೈಕ್ಸ್ ಗಾಗಿ ಅಂತ ಒಬ್ಬರು. ಇಲ್ಲ ಇವು ನಿಜವಾಗಲೂ ಇಂಥ ಸಾಹಸದಲ್ಲಿ ತರಬೇತಿ ಪಡೆದು ತೊಡಗಿಕೊಂಡಿವೆ ಎಂದು ಮತ್ತೊಬ್ಬರು. ಹೌದು ಅವುಗಳ ಎಕ್ಸ್ಪ್ರೆಷನ್ ನೋಡಿ ಹೇಗಿದೆ ಎಂದು ಕೆಲವರು. ರಾಧೇ ರಾಧೇ ಜೈ ಎಂದು ಮತ್ತೊಬ್ಬರು.
ಇದನ್ನೂ ಓದಿ : Viral: ಪೊಲೀಸ್ ನಾಯಿಯನ್ನೇ ಕಚ್ಚಿದ ವ್ಯಕ್ತಿಯ ಬಂಧನ
ಒಂದು ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 34,000 ಜನರು ಇಷ್ಟಪಟ್ಟಿದ್ದಾರೆ. ಈ ಸಾಹಸಿಗರಿಗೆ ಯಾವುದೇ ಅವಾರ್ಡ್ ಕೊಡಲ್ಲವೋ? ಎಂದು ಕೇಳಿದ್ದಾರೆ ಕೆಲವರು. ಇನ್ಸ್ಟಾನಲ್ಲಿರೋ ಸಾಹಸೀ, ಕುಶಲಿ ಪ್ರಾಣಿ ಪಕ್ಷಿಗಳಿಗೆಂದೇ ಒಂದು ಅವಾರ್ಡ್ ಸ್ಥಾಪಿಸೋಣ ಬಿಡಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಯಿತು ಹಾಗೇ ಆಗಲಿ, ಇದಕ್ಕೆ ನನ್ನ ಸಹಮತವಿದೆ ಎಂದು ಅನೇಕರು ಬೆಂಬಲಿಸಿದ್ದಾರೆ.
ಇದನ್ನೂ ಓದಿ : Viral Video: ಫ್ರೀಸ್ಟೈಲ್ ಫುಟ್ಬಾಲ್ನಲ್ಲಿ ಲಿವ್ ಕುಕ್ ಗಿನ್ನೀಸ್ ವಿಶ್ವ ದಾಖಲೆ
ನಮ್ಮ ಮನೆಯ ಬೆಕ್ಕಗಳನ್ನೂ ಇಂಥ ತರಬೇತಿಗೆ ಒಳಪಡಿಸಬೇಕು, ಫೋನ್ ನಂಬರ್ ಕೊಡಿ ಎಂದು ತಮಾಷೆ ಮಾಡಿದ್ದಾರೆ ಕೆಲವರು. ಆದರೆ ಈ ವಿಡಿಯೋದ ಮೂಲಕ ಎಲ್ಲಿ ಏನು ಎನ್ನುವುದು ಇನ್ಸ್ಟಾನಲ್ಲಿ ನಮೂದಾಗಿಲ್ಲ. ಒಟ್ಟಾರೆಯಾಗಿ ನಿಮ್ಮ ಅಭಿಪ್ರಾಯವೇನು ಈ ವಿಡಿಯೋದ ಬಗ್ಗೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ