ಆಪರೇಷನ್ ಸಿಂಧೂರ್ ನಂತರ ಪಾಕ್ ಜನರಿಗೆ ನಕ್ಷತ್ರ ನೋಡಿದ್ರು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ

ಪಹಾಲ್ಗಮ್ ನಲ್ಲಿ ನಡೆದ ಉಗ್ರರು ನಡೆಸಿದ ದಾಳಿಗೆ 26 ಭಾರತೀಯ ನಾಗರಿಕರು ಸಾವಿಗೀಡಾಗಿದ್ದರು. ಈ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಯಶಸ್ವಿಯಾಗಿದೆ. ಆದರೆ ಭಾರತದ ಪ್ರತೀಕಾರದ ದಾಳಿಗೆ ಪಾಕಿಸ್ತಾನದ ಜನರು ಬೆಚ್ಚಿ ಬಿದಿದ್ದು ಇದೀಗ ಆಕಾಶದಲ್ಲಿ ನಕ್ಷತ್ರ ನೋಡಿದ್ರು ಅವರಿಗೆ ಕ್ಷಿಪಣಿಯಂತೆ ಕಾಣುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ

ಆಪರೇಷನ್ ಸಿಂಧೂರ್ ನಂತರ ಪಾಕ್ ಜನರಿಗೆ ನಕ್ಷತ್ರ ನೋಡಿದ್ರು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ
ವೈರಲ್ ವಿಡಿಯೋ
Image Credit source: Twitter

Updated on: May 08, 2025 | 3:10 PM

ಜಮು-ಕಾಶ್ಮೀರದ ಪಹಲ್ಗಾಮ್‌ (pahalgam of jammu kashmir) ನಲ್ಲಿ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ (operation sindoor) ಹೆಸರಿನಲ್ಲಿ ದಾಳಿ ನಡೆಸಿ ತಿರುಗೇಟು ನೀಡಿದೆ. ಪಾಕಿಸ್ತಾನ (pakistan) ದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು ಈ ದಾಳಿಯಿಂದ ಪಾಕಿಸ್ತಾನದ ಜನರು ಬೆಚ್ಚಿ ಬಿದಿದ್ದಾರೆ. ಈಗಾಗಲೇ ಪಾಕಿಸ್ತಾನದಲ್ಲಿ ಭಯದ ವಾತಾವರಣ ಹೇಗೆ ನಿರ್ಮಾಣವಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಭಾರತದ ಕ್ಷಿಪಣಿ ದಾಳಿಯಿಂದ ನಕ್ಷತ್ರ ಕೂಡ ಕ್ಷಿಪಣಿಯಂತೆ ಕಾಣುತ್ತಿದ್ದು ಪಾಕ್ ಜನರು ಭಯಭೀತರಾಗಿದ್ದಾರೆ. ನಕ್ಷತ್ರವನ್ನು ಕಂಡು ಹೆದರುವ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

@gajendrakalal ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಭಾರತವು ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕ್ ಜನರು ಭಯಭೀತರಾಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರೂ ನಾವು ಮನೆಯ ಛಾವಣಿ ಮೇಲೆ ನಿಂತಿದ್ದೇವೆ. ಆಕಾಶದಲ್ಲಿ ಏನೋ ಹೊಳೆಯುತ್ತಿದೆ. ಅದು ನಮ್ಮ ಕಡೆಗೆ ಬರುತ್ತಿದೆ ಎನ್ನುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಪಾಕ್ ಜನರು ನಕ್ಷತ್ರ ಕಂಡರೂ ಕೂಡ ಅದು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ.

ಇದನ್ನೂ ಓದಿ
ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ ಎಂದ ಬೆಂಗಳೂರಿನ ಮಹಿಳೆ
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಪಾಕ್ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ

ಇದನ್ನೂ ಓದಿ : ಭಾರತೀಯ 5 ಜೆಟ್​​​​​ಗಳನ್ನು ಹೊಡೆದುರುಳಿಸಿರುವುದು ನಿಜವೇ? ನಿರೂಪಕಿ ಕೇಳಿದ ಪ್ರಶ್ನೆಗೆ ತಬ್ಬಿಬಾದ ಪಾಕ್ ರಕ್ಷಣಾ ಸಚಿವ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಈಗಾಗಲೇ ಒಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ‘ಪಾಕ್ ಜನರು ಭಯದಲ್ಲೇ ಬದುಕುವಂತಾಗಿದೆ. ನಕ್ಷತ್ರ ನೋಡಿ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ನೋಡಿ’ ಎಂದಿದ್ದಾರೆ. ಇನ್ನೊಬ್ಬರು, ‘ಭಾರತೀಯರ ತಂಟೆಗೆ ಬಂದರೆ ಹೀಗೆ ಆಗುವುದು ಭಾರತೀಯರು ಸದಾ ಸತ್ಯದ ಪರವೇ ಇರುತ್ತಾರೆ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಜನರು ಎಷ್ಟು ಹುಚ್ಚರು ನೋಡಿ, ಇವರಿಗೆ ನಕ್ಷತ್ರ ಕೂಡ ಕ್ಷಿಪಣಿಯಂತೆ ತೋರುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ನಗುವ ಎಮೋಜಿ ಕಳುಹಿಸಿದ್ದಾರೆ.

 

ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ