ನಾವು ಸಂಕಷ್ಟದಲ್ಲಿರುವಾಗ ನಮ್ಮ ಸಹಾಯಕ್ಕೆ ದೇವರು ಯಾವುದಾದರೂ ರೂಪದಲ್ಲಿ ಬಂದೇ ಬರುತ್ತಾರೆ ಎಂದು ಹಿರಿಯರು ಹೇಳುವ ಮಾತೊಂದಿದೆ. ಇಲ್ಲೊಬ್ಬ ಯುವಕನ ಜೀವನದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಹೌದು ಯಾರೋ ಪಾಪಿಗಳು ಈ ಯುವಕನಿಗೆ ಮನ ಬಂದಂತೆ ಥಳಿಸಿ ಆತನನ್ನು ಜೀವಂತ ಸಮಾಧಿ ಮಾಡಿದ್ದು, ಕೆಲ ಹೊತ್ತಿನ ಬಳಿಕ ರಕ್ತದ ವಾಸನೆಗೆ ಈ ಸ್ಥಳಕ್ಕೆ ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆಯುವ ಮೂಲಕ ಯುವಕನನ್ನು ಎಚ್ಚರ ಗೊಳಿಸಿ ಆತನಿಗೆ ಪ್ರಾಣ ಉಳಿಸಿಕೊಳ್ಳಲು ಪರೋಕ್ಷವಾಗಿ ಸಹಾಯವನ್ನು ಮಾಡಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಯಾರೋ ದುಷ್ಕರ್ಮಿಗಳು ಯುವಕನೊಬ್ಬನನ್ನು ಜೀವಂತ ಸಮಾಧಿ ಮಾಡಿದ್ದು, ಆ ಸ್ಥಳಕ್ಕೆ ಬಂದ ಬೀದಿ ನಾಯಿಗಳು ಯುವಕನ ಪ್ರಾಣ ರಕ್ಷಣೆಗೆ ಪರೋಕ್ಷವಾಗಿ ಸಹಾಯ ಮಾಡಿದೆ. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು 24 ವರ್ಷದ ರೂಪ್ ಕಿಶೋರ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿ ಆತನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ನಡೆಸಲು ಯತ್ನಿಸಿದ್ದಾರೆ. ಪಾಪಿಗಳು ಕೊಟ್ಟ ಏಟಿಗೆ ಆ ಯುವಕ ಪ್ರಜ್ಞೆ ತಪ್ಪಿದ್ದಾನೆ. ಈತ ಸತ್ತು ಹೋಗಿದ್ದಾನೆ ಎಂದು ಭಾವಿಸಿದ ಆ ದುಷ್ಕರ್ಮಿಗಳು ಯುವಕನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಸುಮಾರು ಮಧ್ಯರಾತ್ರಿ ಹೊತ್ತಿಗೆ ರಕ್ತದ ವಾಸೆಯನ್ನು ಹಿಡಿದು ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆದು, ಮಣ್ಣಿನಡಿಯಲ್ಲಿದ್ದ ಯುವಕನ ದೇಹವನ್ನು ಎಳೆದಾಡಿ ತಿನ್ನಲು ಯತ್ನಿಸಿದೆ. ಈ ಸಂದರ್ಭದಲ್ಲಿ ಯುವಕನಿಗೆ ಪ್ರಜ್ಞೆ ಬಂದಿದ್ದು, ತಕ್ಷಣ ಅಲ್ಲಿಂದ ಎದ್ದು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾನೆ. ನಂತರ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಮನೆಯವರನ್ನು ಸಂಪರ್ಕಿಸಿದ್ದಾನೆ. ಬಳಿಕ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಪರ್ಸ್, ಮೊಬೈಲ್ ಎಗರಿಸಲು ಯತ್ನ, ಪ್ರಯಾಣಿಕರಿಂದ ಕಳ್ಳನಿಗೆ ಸರಿಯಾಗಿ ಬಿತ್ತು ಗೂಸಾ
ಈ ಬಗ್ಗೆ ರೂಪ್ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಆಧಾರರ ಮೇರೆಗೆ ಸೆಕ್ಷನ್ 109, ಸೆಕ್ಷನ್ 115. ಸೆಕ್ಷನ್ 351 ರ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ