Video: ರೈಲಿನಲ್ಲಿ ಪರ್ಸ್, ಮೊಬೈಲ್ ಎಗರಿಸಲು ಯತ್ನ, ಪ್ರಯಾಣಿಕರಿಂದ ಕಳ್ಳನಿಗೆ ಸರಿಯಾಗಿ ಬಿತ್ತು ಗೂಸಾ
ರೈಲುಗಳಲ್ಲಿ ಕಳ್ಳ ಕಾಕರ ಹಾವಳಿ ಹೆಚ್ಚಿರುತ್ತೆ. ಕಳ್ಳರು ಪ್ರಯಾಣಿಕರಂತೆ ಬಂದು ತಮ್ಮ ಕೈಚಳಕ ಪ್ರದರ್ಶಿಸಿ ಇತರೆ ಪ್ರಯಾಣಿಕರ ಮೊಬೈಲ್, ಪರ್ಸ್, ಆಭರಣ ಇತ್ಯಾದಿಗಳನ್ನು ಕದಿಯುತ್ತಿರುತ್ತಾರೆ. ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಬ್ಬ ಕಳ್ಳ ಕೂಡಾ ಪ್ರಯಾಣಿಕರೊಬ್ಬರ ಪರ್ಸ್ ಎಗರಿಸಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಮಾಡಿದ ತಪ್ಪಿಗೆ ಸ್ವತಃ ಪ್ರಯಾಣಿಕರೇ ಆತನಿಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಎಷ್ಟು ಜಾಗ್ರತೆ ವಹಿಸಿದ್ರೂ ಕಡಿಮೆಯೇ. ಏಕೆಂದ್ರೆ ರೈಲುಗಳಲ್ಲಿ ಈ ಕಳ್ಳರ ಕಾಟ ದಿನದಿಂದ ದಿನಕ್ಕೆ ತೀರಾ ಹೆಚ್ಚಾಗುತ್ತಿದೆ. ಚಲಿಸುತ್ತಿರುವ ರೈಲಿಗೆ ಹತ್ತುವ ಈ ಕಳ್ಳರು ಪ್ರಯಾಣಿಕರಂತೆ ಬಂದು ಇತರ ಪ್ರಯಾಣಿಕರ ಮೊಬೈಲ್, ಚಿನ್ನಾಭರಣ, ಹಣ ಕದ್ದು ಮೆಲ್ಲನೆ ಎಸ್ಕೇಪ್ ಆಗ್ತಾರೆ. ಅದೇ ರೀತಿ ಇಲ್ಲೊಬ್ಬ ಚಾಲಾಕಿ ಖದೀಮ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲಿನಲ್ಲಿ ಕಳ್ಳತನ ಮಾಡಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತ ಮಾಡಿದ ಈ ತಪ್ಪಿಗೆ ಪ್ರಯಾಣಿಕರೆಲ್ಲರೂ ಸೇರಿ ಆತನಿಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಮೊಬೈಲ್ ಫೋನ್ ಮತ್ತು ವಾಲೆಟ್ ಕದಿಯಲು ಯತ್ನಿಸಿದಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
Kalesh inside Indian Railways (Passengers beats up a guy who was got caught stealing mobile phones and wallet) pic.twitter.com/QxnzMHadRM
— Ghar Ke Kalesh (@gharkekalesh) August 1, 2024
ವೈರಲ್ ವಿಡಿಯೋದಲ್ಲಿ ಪ್ರಯಾಣಿಕರೊಬ್ಬರ ಪರ್ಸ್ ಮತ್ತು ಮೊಬೈಲ್ ಕದಿಯಲು ಯತ್ನಿಸುತ್ತಿದ್ದಾಗ ಕಳ್ಳ ಸಿಕ್ಕಿ ಬಿದ್ದಿದ್ದು, ಈತನನ್ನು ಹೀಗೆ ಬಿಟ್ರೆ ಆಗದು ಎಂದು ಆ ಪ್ರಯಾಣಿಕ ಕಳ್ಳನ ಬಟ್ಟೆ ಬಿಚ್ಚಿಸಿ ಆತನಿಗೆ ಚಪ್ಪಲಿಯಲ್ಲಿ ಸರಿಯಾಗಿ ಏಟು ಕೊಡುವಂತಹ ದೃಶ್ಯವನ್ನು ಕಾಣಬಹುದು. ಸಹ ಪ್ರಯಾಣಿಕರು ಕೂಡಾ ನೀಚ ಕೆಲಸ ಮಾಡಿದ್ದಕ್ಕಾಗಿ ಕಳ್ಳನಿಗೆ ಥಳಿಸಿದ್ದಾರೆ.
ಇದನ್ನೂ ಓದಿ: ಮದುವೆಗೂ ಮುಂಚೆ ಇಲ್ಲಿ ವರನಿಗೆ ನಡೆಯುತ್ತೆ ಲೈಂಗಿಕ ಸಾಮರ್ಥ್ಯ ಪರೀಕ್ಷೆ!
ಆಗಸ್ಟ್ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರಯಾಣಿಕರೆಲ್ಲರೂ ಸೇರಿ ಒಳ್ಳೆಯ ಪಾಠ ಕಲಿಸಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಚಪ್ಪಲಿ ಅಲ್ಲ, ಆ ಕಳ್ ನನ್ ಮಗನಿಗೆ ಬೆಲ್ಟ್‌ನಿಂದ ಸರಿಯಾಗಿ ಜಾಡಿಸಬೇಕಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಕೆಲಸ ಇದು, ಇನ್ಮುಂದೆ ಕಳ್ಳತನ ಮಾಡೋ ಮುನ್ನ ನೂರು ಬಾರಿ ಯೋಚ್ನೆ ಮಾಡ್ಬೇಕುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ