AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಆದಿಪುರುಷ’ದ ಲಂಕೇಶ; ಸೈಫ್​ ಅಲಿ ಖಾನ್​ ಎಐ ಕಲಾವಿದರ ಕೈಗೆ ಸಿಕ್ಕಾಗ

Saif Ali Khan: ಆದಿಪುರುಷ ಸಿನೆಮಾದಲ್ಲಿರುವ ಲಂಕೇಶನಿಗಿಂತ ಉತ್ತಮವಾಗಿ ಇಲ್ಲಿ ಚಿತ್ರಿಸಲಾಗಿದೆ. ಕಲಾವಿದರಿಗೆ ಅಭಿನಂದನೆಗಳು ಎಂದು ನೆಟ್ಟಿಗರು ಎಐ ಕಲಾವಿದ ಸಾಹಿದ್ ಅವರನ್ನು ಶ್ಲಾಘಿಸುತ್ತಿದ್ಧಾರೆ.

Viral: 'ಆದಿಪುರುಷ'ದ ಲಂಕೇಶ; ಸೈಫ್​ ಅಲಿ ಖಾನ್​ ಎಐ ಕಲಾವಿದರ ಕೈಗೆ ಸಿಕ್ಕಾಗ
ಆದಿಪುರುಷದಲ್ಲಿ 'ರಾವಣ' ಪಾತ್ರಧಾರಿ ಸೈಫ್​ ಅಲಿ ಖಾನ್​ ಎಐ ಕಲಾವಿದರ ಸೃಷ್ಟಿಯಲ್ಲಿ
ಶ್ರೀದೇವಿ ಕಳಸದ
|

Updated on:Jun 26, 2023 | 1:44 PM

Share

Lankesh : ಇತ್ತೀಚಿನ ದಿನಗಳಲ್ಲಿ ಎಐ ಕಲಾವಿದರು ಸಾಕಷ್ಟು ಚುರುಕಿನಿಂದ ತಮ್ಮ ಕಲಾಪ್ರೌಢಿಮೆ ಮೆರೆಯುತ್ತಿದ್ದಾರೆ. ಎಲಾನ್​ ಮಸ್ಕ್​ನನ್ನು ಭಾರತೀಯ ಅಳಿಯನನ್ನಾಗಿಸಿದ್ದು, ಮಗುವಾಗಿಸಿದ್ದೂ ನಿಮಗೆ ನೆನಪಿರಬಹುದು. ಹಾಗೆಯೇ ವೃಂದಾವನಕ್ಕೆ ಝ್ಯೂಕರ್​ಬರ್ಗ್​, ಮುಕೇಶ್​ ಅಂಬಾನಿ, ಎಲಾನ್​ ಮಸ್ಕ್​ ಮುಂತಾದ ಪ್ರಸಿದ್ಧರು ಹೋಳಿಯಾಡಲು ಬಂದಿದ್ದೂ. ಇದೀಗ ಆದಿಪುರುಷ (Adipurush) ಸಿನೆಮಾದಲ್ಲಿ ಲಂಕೇಶ ಪಾತ್ರಧಾರಿ ಸೈಫ್​ ಅಲಿ ಖಾನ್​ನ ಎಐನಲ್ಲಿ ಸೃಷ್ಟಿಸಿದ್ಧಾರೆ ಈ ಕಲಾವಿದರು. ಭಲೇ ಭಲೇ ಜೈ ರಾವಣ್​! ಸಿನೆಮಾಕ್ಕಿಂತ ಇಲ್ಲಿಯೇ ಈ ರಾವಣನನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by SK MD ABU SAHID (@sahixd)

ಕೃತಕ ಬುದ್ಧಿಮತ್ತೆ (Artificial Intelligence) ಎನ್ನುವುದು ನಮ್ಮ ನಿತ್ಯಜೀವನದ ಪ್ರಮುಖ ಅಂಶ ಎಂಬಂತಾಗಿದೆ. ಡಿಜಿಟಲ್​ ಕಾಲದ ಕಲಾವಿದರಿಗಂತೂ ಇದು ಇನ್ನಿಲ್ಲದ ಹುರುಪು ತುಂಬುತ್ತಿದೆ. ಅಂತೆಯೇ ಟ್ರೆಂಡಿಂಗ್​​ನಲ್ಲಿರುವ ಸೆಲೆಬ್ರಿಟಿಗಳ ಚಿತ್ರಗಳನ್ನು ಮರುರೂಪಿಸುವಲ್ಲಿ ಕಲಾವಿದರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಹಿದ್​ ಎಂಬ ( SK MD ABU SAHID) ಕಲಾವಿದರ ಸೃಷ್ಟಿಸಿದ ಎಐ ಚಿತ್ರಗಳನ್ನು ಈ ಹಿಂದೆಯೂ ನೀವು ನೋಡಿದ್ದೀರಿ. ಇದೀಗ  ರಾವಣ ಪಾತ್ರಧಾರಿ ಸೈಫ್​ ಅಲಿ ಖಾನ್​ರನ್ನು ಮರುರೂಪಿಸಿದ್ದಾರೆ ಇದೇ ಕಲಾವಿದರು.

ಇದನ್ನೂ ಓದಿ : Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

ಜೂ. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 5,000 ಜನರು ಇಷ್ಟಪಟ್ಟಿದ್ದಾರೆ. ಆದಿಪುರುಷನ ಲಂಕೇಶನಿಗಿಂತಲೂ ಇದು ಅತ್ಯುತ್ತಮವಾಗಿದೆ. ತುಂಬಾ ಅಚ್ಚುಕಟ್ಟಾಗಿ ಕಲೆಯನ್ನು ನಿರ್ವಹಿಸಿದ್ದೀರಿ, ನಿಮಗೆ ಅಭಿನಂದನೆ ಎಂದು ನೆಟ್ಟಿಗರು ಕಲಾವಿದರನ್ನು ಪ್ರಶಂಸಿಸುತ್ತಿದ್ದಾರೆ. ರಾವಣನ ಈ ಅವತಾರಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Mon, 26 June 23

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ