AI : ಎಲಾನ್ ಮಸ್ಕ್, ಮುಕೇಶ್ ಅಂಬಾನಿ, ಝುಕರ್ಬರ್ಗ್ ವೃಂದಾವನದಲ್ಲಿ ಹೋಳಿ ಆಡುತ್ತಿದ್ದಾರೆಯೇ… ಎಂದು ಅಚ್ಚರಿಯಾಗುತ್ತಿದೆಯಾ? ಇವರಷ್ಟೇ ಅಲ್ಲ ಇವರೊಂದಿಗೆ ಮೈಕ್ರೋಸಾಫ್ಟ್ನ (Microsoft) ಸ್ಟೀವ್ ಬಲ್ಮರ್, ಆನಂದ ಮಹೀಂದ್ರಾ, ಜೆಫ್ ಬೆಜೋಸ್, ಗೌtಮ್ ಅದಾನಿ, ವಾರೆನ್ ಬಫೆಟ್, ಬಿಲ್ಗೇಟ್ಸ್ ಮುಂತಾದವರೂ ಇದ್ದಾರೆ. ಇದೇನು ಅಡ್ಡಮಳೆಯಂತೆ ಅಡ್ಡಹೋಳಿ ಎಂದು ಹುಬ್ಬೇರಿಸುತ್ತಿದ್ದೀರಾ? ಹೌದು ಈ ಹೋಳಿಯನ್ನು ಸೃಷ್ಟಿಸಿರುವುದು AI ಕಲಾವಿದರು. ಜಗತ್ತಿನ ಕೋಟ್ಯಾಧಿಪತಿಗಳನ್ನು ಹೀಗೆ ವೃಂದಾವನದ ಬೀದಿಯಲ್ಲಿ ಹೋಳಿಯ ಬಣ್ಣಗಳಲ್ಲಿ ಮುಳುಗೇಳಿಸಿದ್ದಾರೆ.
ಡೋನಾಲ್ಡ್ ಟ್ರಂಪ್, ರಿಚರ್ಡ್ ಬ್ರ್ಯಾನ್ಸರ್ ಎಲ್ಲಿ ಕಾಣೆಯಾಗಿದ್ದಾರೆ ಎಂದು ಒಬ್ಬರು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಾಕುವ ಪೋಸ್ಟ್ನಲ್ಲಿ ಅವರಿಬ್ಬರೂ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಚಿತ್ರಗಳನ್ನು ಪೋಸ್ಟ್ ಮಾಡಿದ ವೈಲ್ಡ್ ಟ್ರಾನ್ಸ್ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಉತ್ತರಿಸಿದ್ದಾರೆ. ವೃಂದಾವನಕ್ಕೆ ನಡೆಯಿರಿ ಎಲ್ಲರೂ ಇವರೊಂದಿಗೆ ರಾಧೆಯನ್ನು ಜಪಿಸೋಣ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ: Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ
ದಯವಿಟ್ಟು, AI ಸಹಾಯದಿಂದ ಹೀಗೆಯೇ ನನ್ನ ತಂದೆತಾಯಿಯ ಫೋಟೋ ಸೃಷ್ಟಿಸಿ ಕೊಡಿ. ಏಕೆಂದರೆ ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಆದರೆ ಇಬ್ಬರೂ ನನಗೆ ಬೇಕು ಎಂದಿದ್ದಾರೆ ಒಬ್ಬರು. ಆಗಲಿ ಮೆಸೇಜ್ ಮಾಡಿ ಎಂದಿದ್ದಾರೆ AI ಕಲಾವಿದರು. ಹೀಗೆ ಕಣ್ಣಾಡಿಸುವಾಗ ನೀವು ಮಾಡಿದ ಚಿತ್ರಗಳನ್ನು ಗಮನಿಸಿದೆ. ನಾನು ಖರೀದಿಸಲು ಇವುಗಳಲ್ಲಿ ಕೆಲವನ್ನು ಖರೀದಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.
ಇದನ್ನೂ ಓದಿ : Viral Video: ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್ಗಳ ವಿಡಿಯೋ ವೈರಲ್
ಅಂತೂ ಇತ್ತೀಚಿನ ದಿನಗಳಲ್ಲಿ ಎಐ ಕಲಾವಿದರು ಮಾರುಕಟ್ಟೆ ಸೃಷ್ಟಿಸಲು ಹೀಗೆ ಈ ಪ್ರಸಿದ್ಧ ವ್ಯಕ್ತಿಗಳಿಗೆಲ್ಲ ವೇಷ ಹಾಕಿಸುತ್ತಿದ್ದಾರೆ. ಈ ಇನ್ಸ್ಟಾ ಖಾತೆಯಲ್ಲಿ ಹೀಗೆ ಇನ್ನೂ ಹಲವಾರು ಪ್ರಚಲಿತ ವ್ಯಕ್ತಿಗಳ ಎಐ ಸೃಷ್ಟಿಯನ್ನು ನೋಡಬಹುದಾಗಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:40 pm, Mon, 19 June 23