ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಜನರ ಜೀವನಶೈಲಿಯ ಒಂದು ಭಾಗವಾಗಿ ಬಿಟ್ಟಿದೆ. ತರಕಾರಿ, ಇತರ ದಿನಸಿ ಪದಾರ್ಥಗಳಿಂದ ಹಿಡಿದು ಟಿವಿ-ಫ್ರಿಜ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಬಟ್ಟೆಗಳು ಸಹ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದರಿಂದ ಮನೆಯಲ್ಲೇ ಕುಳಿತು ಬೇಕಾಗಿರುವ ವಸ್ತುಗಳನ್ನು ಖರೀದಿಸಲು ಸಾಧ್ಯವಿರುವುದರಿಂದ ನೇರವಾಗಿ ಖರೀದಿಸುವದಕ್ಕಿಂತ ಆನ್‌ಲೈನ್‌ನಲ್ಲಿ ಶಾಪಿಂಗ್‌ನಲ್ಲಿ ಮಾಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಮೋಸ ಹೋಗುವುದುಂಟು. ಅಂತಹದ್ದೇ ಮೋಸಕ್ಕೆ ಬಲಿಯಾದ ಘಟನೆಯೊಂದು ಇಲ್ಲಿದೆ.
ವಾಸ್ತವವಾಗಿ, ಯಶ್ ಓಜಾ ಎಂಬ ವ್ಯಕ್ತಿ ಆನ್‌ಲೈನ್ ಶಾಪಿಂಗ್ ಕಂಪನಿ ಅಮೆಜಾನ್‌ನಿಂದ ಹೆಡ್‌ಫೋನ್‌ಗಳನ್ನು ಆರ್ಡರ್ ಮಾಡಿದ್ದರು. ವೈರ್‌ಲೆಸ್ ಹಾಗೂ ಒಳ್ಳೆಯ ಗುಣಮಟ್ಟದ ಬ್ರಾಂಡ್ ಆಗಿದ್ದರಿಂದ ಹೆಡ್ಫೋನ್ಗೆ 19,900ರೂಪಾಯಿಗಳನ್ನು ಪಾವತಿಸಿದ್ದರು. ಆದರೆ ಬಂದ ಪಾರ್ಸೆಲ್‌ನಲ್ಲಿ ಸೋನಿ ಹೆಡ್‌ಫೋನ್ ಬಾಕ್ಸ್ ಒಳಗಡೆ ಹೆಡ್‌ಫೋನ್ ಬದಲಿಗೆ ಕೋಲ್ಗೇಟ್ ಟೂತ್‌ಪೇಸ್ಟ್ ಕಂಡು ಶಾಕ್ ಆಗಿದ್ದಾರೆ.
ಆನ್‌ಲೈನ್ ವಂಚನೆಯ ಸಂಪೂರ್ಣ ವೀಡಿಯೊವನ್ನು @Yashuish ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿಯು ಸಂಪೂರ್ಣವಾಗಿ ಪ್ಯಾಕ್ ಮಾಡಿದ ಪಾರ್ಸೆಲ್ ಅನ್ನು ತೆರೆಯುವುದನ್ನು ನೀವು ಕಾಣಬಹುದು. ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ,ಅಮೆಜಾನ್ ವ್ಯಕ್ತಿಗೆ ಕ್ಷಮೆಯಾಚಿಸಿದೆ. ಜೊತೆಗೆ ಮುಂದೆ ಈ ರೀತಿ ಆಗಲ್ಲ ಎಂದು ಭರವಸೆ ನೀಡಿದೆ.
Well I ordered sony xb910n and got Colgate lmafao. pic.twitter.com/GpsiLWemwl
— Yash ojha (@Yashuish) December 8, 2023
ಇದನ್ನೂ ಓದಿ: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ
ಎರಡು ನಿಮಿಷದ 20 ಸೆಕೆಂಡ್‌ನ ಈ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಟ್ವಿಟರ್ ಬಳಕೆದಾರನೊಬ್ಬ ಈ ವೀಡಿಯೊವನ್ನು ‘ಸ್ಕ್ರಿಪ್ಟ್’ ಎಂದು ವಿವರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಆನ್‌ಲೈನ್ ಶಾಪಿಂಗ್‌ನಲ್ಲಿ ಇಂತಹ ವಂಚನೆಗಳು ಆಗಾಗ್ಗೆ ನಡೆಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: