Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋವು 19 ವರ್ಷದ ಲಾರೆನ್ ರೇ ಎಂಬ ಯುವತಿ ತನ್ನ ಸಾಕು ನಾಯಿ ಜತೆಗೆ ಮನೆಯ ಹೊರಗಡೆ ಇರುವಾಗ ಪಿಟ್​ ಬುಲ್​ ತಳಿಯ ಶ್ವಾನ ದಾಳಿ ಮಾಡುವುದನ್ನು ತೋರಿಸುತ್ತದೆ.

Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ
ಪಿಟ್ ಬುಲ್ ದಾಳಿ
Updated By: Digi Tech Desk

Updated on: Dec 27, 2021 | 10:28 AM

ಸಾಮಾನ್ಯವಾಗಿ ಇತ್ತೀಚೆಗೆ ನಾಯಿಗಳ ಮೇಲಿನ ಕ್ರೇಜ್​ ಹೆಚ್ಚಾಗಿದೆ. ಹೀಗಾಗಿ ವಿವಿಧ ತಳಿಯ ನಾಯಿಗಳನ್ನು ಸಾಕಲು ಮುಂದಾಗಿದ್ದಾರೆ. ಮನೆಯಲ್ಲಿ ಒಬ್ಬ ಸದನ್ಯನಾಗಿಯೇ ಶ್ವಾನಗಳು ತಮ್ಮ ಸ್ಥಾನವನ್ನು ಈಗ ಕಾಯ್ದಿರಿಸಿಕೊಂಡಿವೆ. ವಿಶೇಷ ಸತ್ಕಾರ, ಮಮತೆಯನ್ನು ನೀಡಿ ಮಗುವಿನಂತೆ ಕಾಣುವ ಶ್ವಾನದ ಮೇಲೆ ಯಾರಾದರು ದಾಳಿ ಮಾಡಿದರೆ ಸುಮ್ಮನೆ ಬಿಡುವ ಮಾತಿಲ್ಲ. ತಮ್ಮ ಪ್ರಾಣವನ್ನಾದರು ಒತ್ತೆಯಿಟ್ಟು ನಾಯಿಯನ್ನು ಕಾಪಾಡುತ್ತಾರೆ. ಇಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ಮನೆಯ ಮುಂದೆ ಇದ್ದ ಯುವತಿ ಮತ್ತು ಆಕೆ ಸಾಕಿದ ನಾಯಿಯ ಮೇಲೆ ಪಿಟ್​ ಬುಲ್ (Pit Bull) ತಳಿಯ ಶ್ವಾನ ಏಕಾಏಕಿ ದಾಳಿ ಮಾಡಿದೆ. ಇದರಿಂದ ಕಂಗಾಲಾದ ಯುವತಿ ಸಹಾಯಕ್ಕಾಗಿ ಕಿರುಚಾಡಿದ್ದು, ಅಲ್ಲಿಯೇ ಇದ್ದ ಅಮೇಜಾನ್ ಡೆಲಿವರಿ ವ್ಯಾನ್​ ಚಾಲಕಿ ಯುವತಿ ಮತ್ತು ಆಕೆಯ ನಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋವು 19 ವರ್ಷದ ಲಾರೆನ್ ರೇ ಎಂಬ ಯುವತಿ ತನ್ನ ಸಾಕು ನಾಯಿ ಜತೆಗೆ ಮನೆಯ ಹೊರಗಡೆ ಇರುವಾಗ ಪಿಟ್​ ಬುಲ್​ ತಳಿಯ ಶ್ವಾನ ದಾಳಿ ಮಾಡುವುದನ್ನು ತೋರಿಸುತ್ತದೆ. ಹೀಗೆ ದಾಳಿ ಮಾಡಿದ ಪಿಟ್​ ಬುಲ್​ ನಾಯಿಯಿಂದ ತನ್ನ ಸಾಕು ನಾಯಿ ಮರಿಯನ್ನು ರಕ್ಷಣೆ ಮಾಡಲು ಮುಂದಾದ ಯುವತಿ, ನಾಯಿ ಮರಿಯನ್ನು ಮೇಲೆತ್ತಿಕೊಂಡಿದ್ದಾಳೆ. ಆದರೆ ಇದನ್ನು ಸಹಿಸದ ಪಿಟ್​ ಬುಲ್​ ತನ್ನ ದಾಳಿಯನ್ನು ಮುಂದುವರಿಸಿದ್ದು, ತಡೆಯಲು ಬಂದ ಯುವತಿಯ ಮೇಲು ದಾಳಿ ಮಾಡಿದೆ. ಎಷ್ಟೇ ಪ್ರಯತ್ನ ಪಟ್ಟರು ನಾಯಿ ಮರಿಯನ್ನು ರಕ್ಷಣೆ ಮಾಡಲು ಕಷ್ಟ ಸಾಧ್ಯವಾದಾಗ ಯುವತಿ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾಳೆ.

ಯುವತಿ ಕೂಗುತ್ತಿರುವುದನ್ನು ಕೇಳಿ ಸ್ಥಳಕ್ಕೆ ಆಗಮಿಸಿದ ಅಮೆಜಾನ್ ಡೆಲಿವರಿ ವ್ಯಾನ್ ಚಾಲಕಿ ಸ್ಟೆಫನಿ ಲೊಂಟ್ಜ್, ಸಹಾಯಕ್ಕೆ ಮುಂದಾಗಿದ್ದಾರೆ. ಪಿಟ್​ ಬುಲ್​ ಅನ್ನು ತಡೆದು ಯುವತಿಯನ್ನು ಮನೆಯ ಒಳಗೆ ಹೋಗುವಂತೆ ಸೂಚಿಸಿದ್ದಾರೆ. ಅಂತಿಮವಾಗಿ ಯುವತಿ ಮತ್ತು ಆಕೆಯ ಸಾಕು ನಾಯಿ ಬಚಾವ್​ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಂಡ ನೆಟ್ಟಿಗರು ಸಹಾಯಕ್ಕೆ ಮುಂದಾದ ಮಹಿಳೆಯ ಧೈರ್ಯಕ್ಕೆ ಫಿದಾ ಆಗಿದ್ದಾರೆ.

ಈ ಘಟನೆಯ ನಂತರ ಲಾರೆನ್​ ಸಹಾಯಕ್ಕಾಗಿ ಬಂದ ಮಹಿಳೆಗೆ ಧನ್ಯವಾದ ಹೇಳಿದ್ದು. ಧನ್ಯವಾದ ಹೇಳಲು ನನಗೆ ಆಗ ಸಮಯವಿರಲಿಲ್ಲ. ಈಗ ಮತ್ತೆ ಅಂತಹ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾಳೆ.

ಕಿರುಚಾಡಿದ್ದು ನನ್ನ ಸ್ವಂತ ಮಗುವಿನ ಬಗ್ಗೆ ಯೋಚಿಸುವಂತೆ ಮಾಡಿತು. ಹೀಗಾಗಿ ಸಹಾಯಕ್ಕೆ ಮುಂದಾದೆ. ನನ್ನ ಮಗಳು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದರೆ ಯಾರಾದರೂ ಬಂದು ಅವಳಿಗೆ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಮಾತೃತ್ವ ಎಂದು ನಾನು ಭಾವಿಸುವುದಿಲ್ಲ. ಇದು ಕೇವಲ ಮಾನವೀಯತೆ ಎಂದು ಅಮೇಜಾನ್ ಡೆಲಿವರಿ ವ್ಯಾನ್ ಚಾಲಕಿ ಹೇಳಿದ್ದಾರೆ.

ಇದನ್ನೂ ಓದಿ:
ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Published On - 9:56 am, Mon, 27 December 21