Viral Video: ‘ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​

|

Updated on: Oct 06, 2023 | 3:17 PM

Traffic Police: ಸಂಚಾರ ನಿಯಮ ಮುರಿದವರಿಗೆ ಶಿಕ್ಷಿಸಲು ಪರ್ಯಾಯ ಮಾರ್ಗಗಳಿದ್ದವು. ಆದರೆ ಪೊಲೀಸ್ ಹೀಗೆ ಕಾರಿನಲ್ಲಿರುವ ವ್ಯಕ್ತಿಗೆ ಹೊಡೆದಿರುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹಾಗೆಯೇ ಈ ವಿಡಿಯೋ ಚಿತ್ರೀಕರಿಸಿರುವ ಬೈಕ್​ ಸವಾರನಿಗೆ ಶಿಕ್ಷೆಯಾಯಿತೆ? ಎಂದು ಕೆಲವರು ಕೇಳಿದ್ದಾರೆ. ಈ ಘಟನೆ ಎಲ್ಲಿಯದು ಎಂದು ತಿಳಿದುಬಂದಿಲ್ಲ.

Viral Video: ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ? ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​
ಹಿಂದೆ ಆ್ಯಂಬುಲೆನ್ಸ್​ ಬರುತ್ತಿದ್ದರೂ ಲೇನ್ ಕಟ್ ಮಾಡಿದ ಕಾರ್ ಸವಾರ. ಅವನ ಕೆನ್ನೆಗೆ ಹೊಡೆದ ಪೊಲೀಸ್​.
Follow us on

Ambulance : ಆಂಬ್ಯುಲೆನ್ಸ್ ಬರದಿದ್ದರೂ ಈ ರೀತಿಯ ಟ್ರಾಫಿಕ್​ನಲ್ಲಿ (Traffic) ಮಾರ್ಗವನ್ನು ತುಂಡರಿಸಬಾರದು. ಬಹುತೇಕ ಭಾರತೀಯರಿಗೆ ನೇರಮಾರ್ಗದಲ್ಲಿ ಚಲಿಸುವುದು ಅಸಾಧ್ಯ. ನೀವು ನಿಮ್ಮ ಮಾರ್ಗದಲ್ಲಿ ಹೋಗುತ್ತಿದ್ದರೂ ಹಿಂದಿರುವ ಮೂರ್ಖರು ಹಾರ್ನ್ ಮಾಡಿ ಶಾಂತಿಭಂಗ ಮಾಡುತ್ತಾರೆ. ಅಷ್ಟೇ ಏಕೆ, ನಿಮ್ಮನ್ನು ಹಿಂದಿಕ್ಕಿ ತಾವು ಹೀಗೆ ಮುಂದೆ ಹೋಗುತ್ತಾರೆ. ಆ್ಯಂಬುಲೆನ್ಸ್​ ತಡೆದರೆ ರೂ. 10,000 ದಂಡವಿದೆ. ಪೊಲೀಸರಿಂದ  ಒಂದು ಏಟು ತಿಂದು ಪಾರಾಗಿದ್ದಾನೆ ಈ ಚಾಲಕ. ಆದರೂ ಪೊಲೀಸ್​ ದಂಡವನ್ನು ಹಾಕಬೇಕಿತ್ತು. ಈ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಬೈಕ್ ಸವಾರ ಕೂಡ ಲೇನ್​ ಕಟ್ ಮಾಡಿಲ್ಲವೆ, ಅವನಿಗೆ ದಂಡ ಇಲ್ಲವೇ… ಈ ವಿಡಿಯೋ ನೋಡಿದ ರೆಡ್ಡಿಟ್​ನ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಿಡ್ನಿ; ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟ, ಪಾರಾದ ಪ್ರವಾಸಿಗರು

4 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 800ಕ್ಕೂ ಹೆಚ್ಚು ಜನರು ನೋಡಿದ್ದಾರೆ. 120 ಜನರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್​ ಹೀಗೆ ಅವನನ್ನು ಹೊಡೆದದ್ದು ತಪ್ಪು ಎಂದು ಕೆಲವರು. ಬೈಕ್​ ಸವಾರನಿಗೂ ಇದೇ ಗತಿ ಕಾಣಿಸಬೇಕಿತ್ತು ಅವನೂ ಲೇನ್ ಕಟ್ ಮಾಡಿದ್ಧಾನೆ ಎಂದು ಕೆಲವರು. ಏನೇ ಆಗಲಿ ಇಬ್ಬರಿಗೂ ದಂಡ ಹಾಕಬೇಕಿತ್ತು ಎಂದು ಹಲವರು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಿಂದೆ ಆ್ಯಂಬುಲೆನ್ಸ್​ ಇದ್ದರೂ ಲೇನ್ ಕಟ್ ಮಾಡಿದ ಕಾರಿನ ವಿಡಿಯೋ

Ambulance was coming and the car tried to cut lane.
byu/kuzutrash7 inCarsIndia

ಪೊಲೀಸ್​ ದಕ್ಷತೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು, ಅವನನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ಕಾನೂನಿನಲ್ಲಿ ಮಾರ್ಗಗಳಿವೆ ಎಂದಿದ್ದಾರೆ ಒಬ್ಬರು. ಗದರಿಸಬಹುದಿತ್ತು, ಭಾರೀ ದಂಡ ವಿಧಿಸಬಹುದಿತ್ತು. ಆದರೆ ಹೀಗೆ ಮಾಡಿರುವುದು ಅಪರಾಧ ಎಂದಿದ್ದಾರೆ ಇನ್ನೊಬ್ಬರು. ಇದು ಯಾವ ಊರಿನ ವಿಡಿಯೋ ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಎಡಿಟ್ ಮಾಡಿ ಹಾಕಲಾಗಿದೆ, ನಾನು ಪೂರ್ತಿ ವಿಡಿಯೋ ನೋಡಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ’

ಈ ವಿಡಿಯೋ ಚಿತ್ರೀಕರಿಸುತ್ತಿರುವ ಬೈಕ್​ ಸವಾರ ಮುಂದಿನ ಏಟು ತನಗೇ ಎಂದುಕೊಂಡು ತಕ್ಷಣವೇ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿರಬೇಕು ಎಂದಿದ್ಧಾರೆ ಒಬ್ಬರು. ಈ ಬೈಕ್​ನವನಿಗೂ ಶಿಕ್ಷೆಯಾಗಬೇಕು, ಪೊಲೀಸರಿಗೂ ಮತ್ತು ಕಾರಿನವರಿಗೂ ಎಂದಿದ್ದಾರೆ ಇನ್ನೊಬ್ಬರು. ಆ್ಯಂಬುಲೆನ್ಸ್​ನಲ್ಲಿದ್ದವರ ಗತಿ ಏನಾಯಿತೋ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ