ಈ ಜೈಲಿನಲ್ಲಿದ್ದಾರಂತೆ 4 ಸಾವಿರಕ್ಕೂ ಅಧಿಕ ಕೈದಿಗಳು, 24 ಗಂಟೆಯೂ ನಡೆಯುತ್ತಿರುತ್ತೆ ಹೊಡೆದಾಟ
ಅಮೆರಿಕದಲ್ಲಿರುವ ಈ ಜೈಲಿನಲ್ಲಿ ಬರೋಬ್ಬರಿ 4 ಸಾವಿರ ಕೈದಿಗಳಿದ್ದಾರಂತೆ, ದಿನದ ಅಷ್ಟೂ ಗಂಟೆಯು ಜಗಳ, ಹೊಡೆದಾಟವೇ ನಡೆಯುತ್ತಿರುತ್ತಂತೆ. ಕ್ಯಾಲಿಫೋರ್ನಿಯಾದ ಈ ಜೈಲಿನಲ್ಲಿ ಕೈದಿಗಳು ಸಣ್ಣ ಸಣ್ಣ ಆಯುಧಗಳನ್ನು ತಮ್ಮ ಜತೆಯೇ ಇಟ್ಟುಕೊಂಡಿರುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಮೆರಿಕದ ಜೈಲುಗಳಲ್ಲಿ ಕೈದಿಗಳು ತುಂಬಿ ತುಳುಕುತ್ತಿದ್ದಾರೆ, ಕ್ಯಾಲಿಫೋರ್ನಿಯಾದಲ್ಲಿರುವ ಈ ಜೈಲಿನಲ್ಲಿ 2,200 ಕೈದಿಗಳನ್ನು ಇರಿಸಬಹುದು ಆದರೆ ದುಪ್ಪಟ್ಟು ಕೈದಿಗಳನ್ನು ತುಂಬಿರುವ ಕಾರಣ ದಿನದ 24 ಗಂಟೆಯೂ ಹೊಡೆದಾಟ ನಡೆಯುತ್ತಲೇ ಇರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಲೊರಾಡೋ ಮರುಭೂಮಿಯಲ್ಲಿ ಮೆಕ್ಸಿಕನ್ ಗಡಿಯ ಉತ್ತರದಲ್ಲಿರುವ ಐರ್‌ವುಡ್ ರಾಜ್ಯ ಕಾರಾಗೃಹವು ವಿಶ್ವದ ವಿಶಿಷ್ಟ ಜೈಲು ಎಂದು ಪ್ರಸಿದ್ಧವಾಗಿದೆ. 1994 ರಲ್ಲಿ ತೆರೆಯಲಾದ ಜೈಲಿನ ಎತ್ತರದ ಕಾಂಕ್ರೀಟ್ ಗೋಡೆಗಳು ಎಲ್ಲಾ ರೀತಿಯ ಕೈದಿಗಳನ್ನು ಕಂಡಿದೆ. ಹಲವು ವರ್ಷಗಳಿಂದ ಕೈದಿಗಳ ದಟ್ಟಣೆಯಿಂದಾಗಿ ಹಿಂಸಾತ್ಮಕ ಸನ್ನಿವೇಶಗಳು ಉದ್ಭವಿಸುತ್ತಲೇ ಇರುತ್ತವೆ.
ಇದೀಗ ಹೆಚ್ಚಿನ ಜೈಲು ನಿರ್ಮಾಣದತ್ತ ಅಧಿಕಾರಿಗಳು ಆಲೋಚಿಸಿದ್ದಾರೆ ಎನ್ನಲಾಗುತ್ತಿದೆ. ಕೊಲೊರಾಡೋ ಮರುಭೂಮಿಯ ತೀವ್ರ ಶಾಖದ ಜೊತೆಗೆ ಉಸಿರುಗಟ್ಟಿಸುವ ಜನದಟ್ಟಣೆಯ ಜೈಲಿನಲ್ಲಿದೆ. ಜೈಲಿನಲ್ಲಿ ನೂರಾರು ಗ್ಯಾಂಗ್ಗಳಿದ್ದು ನಿತ್ಯವೂ ಒಂದಲ್ಲಾ ಒಂದು ವಿಚಾರಕ್ಕೆ ಜಗಳ, ಹೊಡೆದಾಟಗಳು ನಡೆಯುತ್ತಲೇ ಇರುತ್ತದೆ.
ಮತ್ತಷ್ಟು ಓದಿ: Video: ತರಗತಿಯಲ್ಲಿ ಕೂತು ಪಾಠ ಕೇಳುತ್ತಿದ್ದ ಪುಟ್ಟ ಬಾಲಕಿಯ ತಲೆ ಮೇಲೆ ಬಿದ್ದ ಫ್ಯಾನ್
42ರ ಹರೆಯದ ಲೂಯಿಸ್ ಪಡಿಲ್ಲಾ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಆತನ ಮೇಲೆ ಇತರ ಮೂವರು ಜೈಲು ಕೈದಿಗಳು ದಾಳಿ ನಡೆಸಿದ್ದು, ಅವರು ಹಲವು ಬಾರಿ ಇರಿದಿದ್ದಾರೆ.
ಕೆಲವು ಜೈಲು ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ಮರೆಮಾಡಲು ಸರಳ ವಿಧಾನಗಳನ್ನು ಆಶ್ರಯಿಸುತ್ತಿರುವುದು ಕಂಡುಬಂದಿದೆ. ಜೈಲಿನೊಳಗೆ ಹೇಗೆ ಚಿಕ್ಕ ಚಿಕ್ಕ ಆಯುಧಗಳನ್ನು ಬಚ್ಚಿಟ್ಟಿದ್ದಾರೆ. ಕೈದಿಗಳು ವ್ಯಾಯಾಮದ ಮೂಲಕ ಎಲ್ಲಾ ರೀತಿಯ ದಾಳಿಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ