Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

Engagement Ring : ಮುತ್ತು ಯಾರಿಗೆ ಬೇಡ? ಸಿಕ್ಕಾಗ ಅದನ್ನು ಪ್ರೀತಿಯಿಂದ ಜೋಪಾನಿಸಿಕೊಳ್ಳಬೇಕು. ಅಮೆರಿಕದ ಯುವತಿಗೆ ಮರುವಾಯಿ ತಿನ್ನುವಾಗ ಅಪರೂಪದ ಮೆರ್ಸಿನೇರಿಯಾ ಎಂಬ 9.5ಮಿ.ಮೀ ವ್ಯಾಸವುಳ್ಳ ಅಂಡಾಕಾರದ ಮುತ್ತು ಸಿಕ್ಕಿದೆ! ಮುಂದೆ?

Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು
ಮರುವಾಯಿ ತಿನ್ನುವಾಗ ಸಿಕ್ಕ ಮುತ್ತು ನಿಶ್ಚಿತಾರ್ಥದ ಉಂಗುರವಾದಾಗ

Updated on: Jul 28, 2023 | 1:32 PM

Clams : ಚಿಪ್ಪುಮೀನನ ಖಾದ್ಯವನ್ನು ಕನ್ನಡದಲ್ಲಿ ಮರುವಾಯಿ, ತುಳುವಿನಲ್ಲಿ ಕೊಯ್ಯೊಲು ಎನ್ನುತ್ತಾರೆ. ಅಮೆರಿಕದ ರೆಸ್ಟೋರೆಂಟ್​ ಒಂದರಲ್ಲಿ ಜೋಡಿಯೊಂದು ಈ ಖಾದ್ಯವನ್ನು ತಿನ್ನುತ್ತಿತ್ತು. ಆಕೆಗೆ ಇದ್ದಕ್ಕಿದ್ದಂತೆ ಹಲ್ಲಿಗೆ ಏನೋ ಸಿಕ್ಕಂತಾಯಿತು. ನೋಡಿದರೆ ಮುತ್ತು! (Pearl) ಮುತ್ತು ಸಿಕ್ಕರೆ ಯಾರಾದರೂ ಬಿಟ್ಟಾರೆಯೇ? ಅದನ್ನು ಆಕೆ ಹಾಗೇ ಕಾಪಿಟ್ಟುಕೊಂಡು ನಿಶ್ಚಿತಾರ್ಥದ ಉಂಗುರದೊಳಗೆ ಅದನ್ನು ಅಡಕಗೊಳಿಸಿದರು. ಈ ವಿಷಯವನ್ನು ರೆಸ್ಟೋರೆಂಟ್​ಗೆ ತಿಳಿಸಿದರು. ರೆಸ್ಟೋರೆಂಟ್​ ಇನ್​ಸ್ಟಾಗ್ರಾಂನ ತನ್ನ ಪುಟದಲ್ಲಿ ಫೋಟೋ ಸಮೇತ ಈ ಸುದ್ದಿಯನ್ನು ಹಂಚಿಕೊಂಡಿದೆ. ನೆಟ್ಟಿಗರು ಆಹಾ ಅದೃಷ್ಟವೇ, ಜೀವನದುದ್ದಕ್ಕೂ ಈ ಜೋಡಿಗೆ ಇದು ಅತ್ಯಂತ ಮಧುರವಾದ ನೆನಪನ್ನು ತರುವಂತ ಸಂಗತಿ ಎಂದಿದ್ದಾರೆ.

ಪ್ರತಿಯೊಬ್ಬರು ತಮ್ಮ ನಿಶ್ಚಿತಾರ್ಥದ ಉಂಗುರವು ವಿಶೇಷವಾಗಿ ಕೂಡಿರಬೇಕು ಎಂದು ಅಪೇಕ್ಷಿಸುತ್ತಾರೆ. ನಿರ್ಧಾರಕ್ಕಾಗಿ ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತಾರೆ. ಆದರೆ ವಿಶೇಷ ಎನ್ನುವುದು ಯಾವತ್ತೂ ನಮ್ಮಿಂದ ಇನ್ನೆಲ್ಲೋ ದೂರದಲ್ಲಿ ಕಾಯುತ್ತಿರುವುದಿಲ್ಲ. ಅದು ನಮ್ಮ ನಿತ್ಯಜೀವನದೊಂದಿಗೆ ಬೆಸೆದುಕೊಂಡಿರುತ್ತದೆ. ಅದನ್ನು ವಿಶೇಷವಾಗಿಸಿಕೊಳ್ಳುವುದು ನಮ್ಮ ಆಲೋಚನೆ ಮತ್ತು ನಿರ್ಧಾರದ ಮೇಲೆ ನಿಂತಿರುತ್ತದೆ. ಪ್ರೀತಿಯಿಂದ, ಮುಕ್ತವಾಗಿ ಯೋಚಿಸಿದರೆ ಒಂದೊಂದೂ ವಿಶೇಷವೇ!

ಇದನ್ನೂ ಓದಿ : Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ

ಅಮೆರಿಕದ ಬ್ರಿಡ್ಜ್​ ರೆಸ್ಟೋರೆಂಟ್​ನ ರಾ ಬಾರ್​ಗೆ ಸ್ಯಾಂಡಿ ಸಿಕೋರ್ಸ್ಕಿ ಮತ್ತು ಕೆನ್ ಸ್ಟೀನ್‌ಕ್ಯಾಂಪ್ ಕಳೆದ ನಾಲ್ಕು ವರ್ಷಗಳಿಂದ ನಿಯಮಿತವಾಗಿ ಭೇಟಿ ಕೊಡುತ್ತಿದ್ದಾರೆ. ವಿವಿಧ ರೀತಿಯ ಸಮುದ್ರ ಖಾದ್ಯಗಳನ್ನು ಅವರು ಸವಿಯುತ್ತ ಬಂದಿದ್ದಾರೆ. ಡಿಸೆಂಬರ್​​ನಲ್ಲಿ ಮರುವಾಯಿ (Clam) ಯನ್ನು ತಿನ್ನುವಾಗ ಇದ್ದಕ್ಕಿದ್ದಂತೆ ಗಟ್ಟಿಯಾದಂಥ ವಸ್ತು ಸ್ಯಾಂಡಿ ಹಲ್ಲಿಗೆ ಸಿಕ್ಕಿದೆ. ನೋಡಿದರೆ ಅದು ಮೆರ್ಸಿನೇರಿಯಾ ಎಂಬ 9.5ಮಿ.ಮೀ ವ್ಯಾಸವುಳ್ಳ ಅಂಡಾಕಾರದ ಮುತ್ತು. ನಂತರ ಅದನ್ನೇ ಆಕೆ ತಮ್ಮ ನಿಶ್ಚಿತಾರ್ಥದ ಉಂಗುವನ್ನಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಜೈಲರ್; ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ

ನೆಟ್ಟಿಗರು ಈ ಘಟನೆ ಮತ್ತು ಉಂಗುರದಿಂದ ಪ್ರಭಾವಿತರಾಗಿದ್ದಾರೆ. ಇದು ಬಹಳ ಸುಂದರವಾದ ಉಂಗುರ, ವಿನ್ಯಾಸ ಕೂಡ ಬಹಳ ಚೆನ್ನಾಗಿದೆ, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಅನೇಕರು. ಇಂಥ ಆಲೋಚನೆ ನಿಮಗೆ ಬಂದಿದ್ದಾದರೂ ಹೇಗೆ! ನಾನಾಗಿದ್ದರೆ ಕಿರಿಕಿರಿ ಮಾಡಿಕೊಂಡು ರೆಸ್ಟೋರೆಂಟ್​ನವರಿಗೆ ಸುದ್ದಿ ತಲುಪಿಸುತ್ತಿದ್ದೇನೇನೋ ಎಂದಿದ್ದಾರೆ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 1:25 pm, Fri, 28 July 23