Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು

ವಿದೇಶಿಗರ ಬಾಯಲ್ಲಿ ಕನ್ನಡ ಪದಗಳನ್ನು ಕೇಳುವುದೇ ಚಂದ. ಮುದ್ದು ಮುದ್ದಾಗಿ ಕನ್ನಡ ಮಾತನಾಡುವುದನ್ನು ಕೇಳುತ್ತಿದ್ದರೆ ನಾವುಗಳು ಕಳೆದೇ ಹೋಗುತ್ತೇವೆ. ಆದರೆ ಇದೀಗ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ದೇವಾಲಯದ ಕ್ಯಾಂಟೀನ್‌ನಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿ ಗ್ರಾಹಕರ ಆರ್ಡರ್ ಸ್ವೀಕರಿಸುತ್ತಿದ್ದಾರೆ. ಭಾರತೀಯ ಮಹಿಳೆಯೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಬಳಕೆದಾರರು ಈ ವಿದೇಶಿಗನ ಬಾಯಲ್ಲಿ ಕನ್ನಡ ಪದಗಳನ್ನು ಕೇಳಿ ಖುಷಿ ಪಟ್ಟಿದ್ದಾರೆ.

Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು
ನಿರರ್ಗಳವಾಗಿ ಕನ್ನಡ ಮಾತನಾಡುವ ಆಸ್ಟ್ರೇಲಿಗ
Image Credit source: Instagram

Updated on: Sep 16, 2025 | 3:39 PM

ನಮ್ಮಲ್ಲಿ ಅನೇಕರಿಗೆ ಕನ್ನಡ (Kannada) ಮಾತನಾಡಲು ಗೊತ್ತಿದ್ದರೂ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಈ ಭಾಷೆ ಮಾತನಾಡಲು ಹಿಂಜರಿಯುತ್ತಾರೆ. ಹೀಗಿರುವಾಗ ವಿದೇಶಿಗರು ಕನ್ನಡ ಭಾಷೆ ಮಾತನಾಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಅವರ ಬಾಯಿಯಿಂದ ಕನ್ನಡ ಪದಗಳನ್ನು ಕೇಳುವುದೇ ಕಿವಿಗೆ ಇಂಪೆನಿಸುತ್ತದೆ. ಇದೀಗ ನಿರರ್ಗಳವಾಗಿ ಕನ್ನಡ ಮಾತನಾಡುವ ಆಸ್ಟ್ರೇಲಿಯಾದ ವ್ಯಕ್ತಿಯ (Australian) ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಗಳು ಹರಿದು ಬಂದಿದೆ.

ವಿದೇಶಿಗನ ಕನ್ನಡ ಪ್ರೀತಿ

sahana gowda ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೂ ಸಲೀಸಾಗಿ ಕನ್ನಡ ಮಾತನಾಡುತ್ತಿರುವುದನ್ನು ಕಾಣಬಹುದು. ದೇವಾಲಯದ ಕ್ಯಾಂಟೀನ್‌ನಂತೆ ಕಾಣುವ ಸ್ಥಳದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ ಇದಾಗಿದೆ. ವಿದೇಶಿಗನು ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುವುದನ್ನು ತೋರಿಸಲಾಗಿದೆ. ಈ ವೇಳೆ ಗ್ರಾಹಕರೊಬ್ಬರು ಯಾವೆಲ್ಲಾ ಭಾಷೆ ಮಾತನಾಡಲು ಬರುತ್ತದೆ ಎಂದು ಕೇಳಿದ್ದಾರೆ. ಈ ವೇಳೆ ವಿದೇಶಿಗ ಹಿಂದಿ, ತಮಿಳು, ತೆಲುಗು, ಕನ್ನಡ, ಇಂಗ್ಲಿಷ್ ಭಾಷೆ ಹೀಗೆ ತನಗೆ ಗೊತ್ತಿರುವ ಭಾಷೆಗಳ ಲಿಸ್ಟ್ ನ್ನು ಹೇಳುತ್ತಾರೆ. ಆ ಬಳಿಕ ಅದೇ ವ್ಯಕ್ತಿಯಿಂದ ಆರ್ಡರ್ ತೆಗೆದುಕೊಂಡು ಏನೆಲ್ಲಾ ಐಟಂ ಆರ್ಡರ್ ಮಾಡಿದ್ದೀರಾ ಎಂದು ಆಸ್ಟ್ರೇಲಿಯಾದ ವ್ಯಕ್ತಿ ಕನ್ನಡದಲ್ಲೇ ಹೇಳಿದ್ದಾರೆ.

ಇದನ್ನೂ ಓದಿ
ಅಹಮದಾಬಾದ್ ನಗರ ಮಹಿಳೆಯರಿಗೆ ತುಂಬಾನೇ ಸುರಕ್ಷಿತ ಎಂದ ವಿದೇಶಿ ಮಹಿಳೆ
ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ವಾಸ್ತವ ಸ್ಥಿತಿ ಬಿಚ್ಚಿಟ್ಟ ವಿದೇಶಿಗ
ಭಾರತದಲ್ಲಿನ ಜೀವನ ಎಷ್ಟು ಕಷ್ಟ ಎಂದು ತಿಳಿಸಿದ ರಷ್ಯನ್ ಯುವತಿ
ಬೆಂಗಳೂರಿನ ಈ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ಈ ಮಾರ್ಗದ ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಡಾದ ವ್ಯಕ್ತಿ

ಈ ವಿಡಿಯೋ ಇದುವರೆಗೆ ನಲವತ್ತು ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಕನ್ನಡ ಅಂದ್ರೆ ಮೂತಿ ಮುರಿಯೋ ರಶ್ಮಿಕಾ ಮಂದಣ್ಣಗೆ ಈ ವಿಡಿಯೋ ಶೇರ್ ಮಾಡಿ ಎಂದು ಖಾರವಾಗಿ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಸಿರಿಗನ್ನಡ ಗೆಲ್ಗೆ ಎಂದು ಹೇಳಿದರೆ, ಮತ್ತೊಬ್ಬರು ಕನ್ನಡ ಗೊತ್ತಿಲ್ಲ ಅನ್ನೋರು ಈ ವಿಡಿಯೋ ಸ್ಫೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:29 pm, Tue, 16 September 25